ನಾನು ನನ್ನದೇ ಆದ ಕಾರಣಗಳಿಗಾಗಿ ಚಿತ್ರರಂಗದಿಂದ ಬ್ರೇಕ್ ಪಡೆದೆ, ಆದರೆ ಮಾಧ್ಯಮಗಳು ಏನೇನೋ ಸುದ್ದಿ ಭಿತ್ತರಿಸಿತು.
ಹೊಸತನ ಬೇಕು ಅನ್ನುವ ಕಾರಣಕ್ಕೆ 2006ರಲ್ಲಿ ಚಂದನವನಕ್ಕೆ ನಾನು ಬ್ರೇಕ್ ಕೊಟ್ಟೆ ಎಂದು ನಟಿ ಪ್ರೇಮ ಹೇಳಿದ್ದಾರೆ.
ವಿಕೇಂಡ್ ವಿದ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕೂತು ಮಾತನಾಡಿದ ಅವರು, ನನ್ನ ಆರೋಗ್ಯಕ್ಕೆ ಏನು ಆಗಿರಲಿಲ್ಲ. ಆದರೆ ಏನೇನೋ ಸುದ್ದಿಯನ್ನು ಹರಡಿಸಲಾಯ್ತು ಎಂದು ಬೇಸರ ವ್ಯಕ್ತಪಡಿಸಿದರು.
ಆಗ ಪ್ರೇಮಾ ಅವರಿಗೆ ಕ್ಯಾನ್ಸರ್ ರೋಗವಂತೆ ಅನ್ನುವಂತೆ ಸುದ್ದಿಗೆ ಉತ್ತರಿಸಿದ ಪ್ರೇಮ,ನನ್ನ ಆರೋಗ್ಯ ಚೆನ್ನಾಗಿಯೇ ಇದೆ, ಚೆನ್ನಾಗಿಯೇ ಇತ್ತು ಅಂದಿದ್ದಾರೆ. ಈ ಮೂಲಕ ತಮ್ಮ ಬಗ್ಗೆ ಪ್ರಸಾರವಾದ ಎಲ್ಲಾ ಸುದ್ದಿಗಳು ಸುಳ್ಳು ಅಂದಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡ RJ ರಾಜೇಶ್ ( Love Guru ಖ್ಯಾತಿಯ) ಕೂಡಾ ಪ್ರೇಮ ಸನ್ಯಾಸಿಯಾದ್ರೆ ಅನ್ನುವ ಸುದ್ದಿಯನ್ನು ಎಲ್ಲರೂ ಹರಡಿದ್ರು. ಆದರೆ ಆಕೆ ಸನ್ಯಾಸಿಯೂ ಆಗಿಲ್ಲ, ಆಕೆಗೆ ಅದ್ಯಾವ ರೋಗ ಕೂಡಾ ಬಂದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ತಮ್ಮ ಮೇಲಿ ಬಂದಿರುವ ಸುಳ್ಳು ಸುದ್ದಿಗಳ ಕುರಿತಂತೆ ಮಾತನಾಡಿದ ಪ್ರೇಮ, He is happy, ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಅವೆಲ್ಲವೂ ಸುಳ್ಳು ಅಂದಿದ್ದಾರೆ.
ಅಲ್ಲಿಗೆ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಈವರೆಗೆ ಪ್ರೇಮ ಬಗ್ಗೆ ಪ್ರಸಾರವಾಗಿದ್ದು ಸುಳ್ಳು ಸುದ್ದಿಗಳು ಅನ್ನುವುದು ಖಚಿತ. ಮಾತ್ರವಲ್ಲದೆ ಕನ್ನಡದ ಸುದ್ದಿ ವಾಹಿನಿಗಳು ನಂಬಿಕೆಗೆ ಆರ್ಹವಲ್ಲ ಅನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ನಟಿಸುವ ಕುರಿತಂತೆ ಮಾತನಾಡಿದ ಪ್ರೇಮ , ಈಗಾಗಲೇ ಶಿಶಿರ, ಉಪೇಂದ್ರ ಮತ್ತೆ ಬಾ ಅನ್ನುವ ಸಿನಿಮಾದಲ್ಲಿ ನಟಿಸಿದ್ದೇನೆ. ಚಾಲೆಂಜ್ ಅನ್ನಿಸುವ ಪಾತ್ರಗಳು ಬಂದ್ರೆ ನಟಿಸಲು ನಾನು ಸಿದ್ದ. ಅಂತಹ ಪಾತ್ರಗಳು ಬಂದಿಲ್ಲ ಅನ್ನುವ ಮೂಲಕ ನಾನ್ಯಾಕೆ ಚಂದನವನದಿಂದ ದೂರ ಅನ್ನುವುದನ್ನು ಪ್ರೇಮ ಸ್ಪಷ್ಟಪಡಿಸಿದ್ದಾರೆ.