Thursday, January 28, 2021

ನಿಧಿ ಸುಬ್ಬಯ್ಯ ತೆಗೆಸಿಕೊಂಡ ಒಂದೇ ಒಂದು ಫೋಟೋ ರಾಡಿ ಎಬ್ಬಿಸಲಿದೆ

Must read

ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಸರ್ಕಾರಿ ಅಧಿಕಾರಿಯೊಬ್ಬರು ತಮ್ಮ ಪುತ್ರಿಯ ವಿವಾಹಪೂರ್ವ ಫೋಟೋ ಶೂಟ್ ನಡೆಸಿ ವಿವಾದಕ್ಕೆ ಸಿಲುಕಿಕೊಂಡಿದ್ದರು. ಎಷ್ಟಾದರೂ ಸರ್ಕಾರಿ ಅಧಿಕಾರಿ ತಾನೇ, ಕೈಗೊಳ್ಳಬೇಕಾಗಿದ್ದ ಕಾನೂನು ಕ್ರಮಗಳು ಅಷ್ಟೇನು ಕಠಿಣವಾಗಲೇ ಇಲ್ಲ.

ಆದರೆ ಇದೀಗ ನಟಿ ನಿಧಿ ಸುಬ್ಬಯ್ಯ ತೆಗೆಸಿಕೊಂಡ ಫೋಟೋ ಒಂದು ರಾಡಿ ರಂಪಾಟ ಎಬ್ಬಿಸುವ ಲಕ್ಷಣಗಳಿದೆ.

ಅರಮನೆಯ ಒಳಾಂಗಣ ಹಾಗೂ ಜಯಮಾರ್ತಾಂಡಾ ದ್ವಾರದ ಬಳಿ ಫೋಟೋ ಶೂಟ್ ಮಾಡುವ ಹಾಗಿಲ್ಲ ಅನ್ನುವ ನಿಯಮವಿದೆ. ಅರಮನೆಯ ಭದ್ರತೆಯನ್ನ ಗಮನದಲ್ಲಿ ಇಟ್ಟುಕೊಂಡು ದರ್ಬಾರ್ ಹಾಲ್ ಸೇರಿದಂತೆ ಅರಮನೆಯ ಒಳಾಂಗಣವನ್ನ ಹೈ ಸೆಕ್ಯೂರಿಟಿ ಏರಿಯಾ ಎಂದು ಗುರುತಿಲಾಗಿದೆ.
ಮೈಸೂರು ಅರಮನೆಯ ಒಳಗೆ ನಿಧಿ ಸುಬ್ಬಯ್ಯ ಫೋಟೋ ತೆಗೆಸಿಕೊಂಡಿದ್ದು ಮಾತ್ರವಲ್ಲದೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ಕುಳಿತು ನಿಧಿ ಸುಬ್ಬಯ್ಯ ಪೋಸ್ ಕೊಟ್ಟಿದ್ದಾರೆ.

ಪೋಟೋ ತೆಗೆಸಿಕೊಂಡು ತಾವೇ ನೋಡಿ ಸಂಭ್ರಮಿಸಿದ್ದರೆ ಪರವಾಗಿರಲಿಲ್ಲ. ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಬೇರೆ ಹಾಕಿದ್ದಾರೆ. ವಿಶ್ವ ವಿಖ್ಯಾತ ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ಫೋಟೋ ತೆಗೆಸಿಕೊಳ್ಳುವ ಹಾಗಿಲ್ಲ. ಅಂದ ಮೇಲೆ ನಿಧಿ ಸುಬ್ಬಯ್ಯ ಹೇಗೆ ಫೋಟೋ ತೆಗೆಸಿಕೊಂಡರು ಅನ್ನುವುದೇ ಪ್ರಶ್ನೆ. ಸಾಮಾನ್ಯರಿಗೊಂದು ಕಾನೂನು ಸೆಲೆಬ್ರೆಟಿಗಳಿಗೊಂದು ಕಾನೂನು ಇದೆಯೇ ಅನ್ನುವುದು ಈಗ ಎದ್ದಿರುವ ಪ್ರಶ್ನೆ.

ಏಕಾಏಕಿಯಾಗಿ ನಿಧಿ ಸುಬ್ಬಯ್ಯ ಅವರನ್ನು ಟೀಕಿಸುವ ಹಾಗಿಲ್ಲ. ಭದ್ರತಾ ಸಿಬ್ಬಂದಿ,ಅಧಿಕಾರಿಗಳಿಗೆ ಗೊತ್ತಿಲ್ಲದೆ ಇಂತಹುದೊಂದು ಫೋಟೋ ಕ್ಲಿಕಿಸಲು ಸಾಧ್ಯವೇ ಇಲ್ಲ. ಹಾಗಾದರೆ ಇದು ಭದ್ರತಾ ವೈಫಲ್ಯ ತಾನೇ ಅನ್ನುತ್ತಿದ್ದಾರೆ ನೆಟ್ಟಿಗರು.

ಆದರೆ ನಿಧಿ ಸುಬ್ಬಯ್ಯ ಫೋಟೋ ತೆಗೆಸಿಕೊಂಡ ಜಾಗದಲ್ಲಿ ಎಲ್ಲರಿಗೂ ಫೋಟೋ ತೆಗೆಯಲು ಅವಕಾಶವಿದೆ. ಇದೇ ಜಾಗದಲ್ಲಿ ತುಂಬಾ ಜನ ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಅವಕಾಶವಿಲ್ಲ. ಅದ್ಯಾಕೆ ಜನ ತಪ್ಪು ಭಾವಿಸಿಕೊಂಡರೋ ಗೊತ್ತಿಲ್ಲ.

- Advertisement -
- Advertisement -

Latest article