ಹಲವು ಹಿಂದಿ ಚಿತ್ರ ಹಾಗೂ ಕಿರುತೆರೆಯಲ್ಲಿ ನಟಿಸಿದ್ದ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 75 ವರ್ಷದ ಅವರು ಎರಡು ಬಾರಿ ಅವರಿಗೆ ಬ್ರೇನ್ ಸ್ಟ್ರೋಕ್ ಗೆ ಒಳಗಾಗಿದ್ದರು. ಜೊತೆಗೆ ವಯೋಸಹಜ ಅನಾರೋಗ್ಯಕ್ಕೂ ತುತ್ತಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು.
2018ರಲ್ಲಿ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಬಾತ್ ರೂಮ್ನಲ್ಲಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ಅವರು ಮೊದಲ ಬಾರಿ ಬ್ರೇನ್ ಸ್ಟ್ರೋಕ್ ಗೆ ಗುರಿಯಾಗಿದ್ದರು. ಇದಾದ ಬಳಿಕ ವಿಶ್ರಾಂತಿಯಲ್ಲಿದ್ದ ಅವರಿಗೆ 2020ರಲ್ಲಿ ಎರಡನೇ ಬಾರಿ ಬ್ರೇನ್ ಸ್ಟ್ರೋಕ್ ಹೊಡೆದಿತ್ತು.
ರಂಗಭೂಮಿ ಕಲಾವಿದೆಯಾಗಿದ್ದ ಸುರೇಖಾ ಸಿಕ್ರಿ 1978ರಲ್ಲಿ ಕಿಸ್ಸಾ ಕುರ್ಸಿ ಕಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಒಂದು ಮಲಯಾಳಂ ಚಿತ್ರದಲ್ಲೂ ನಟಿಸಿದ್ದ ಅವರು ತಮಸ್ (1988), ಮಾಮೋ (1995) ಮತ್ತು ಬಧಾಯಿ ಹೋ (2018) ಎಂಬ ಮೂರು ಸಿನಿಮಾಗಳ ಪೋಷಕ ನಟಿ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು.
![surekha sikri balika vadhu1](https://torrentspree.com/wp-content/uploads/2021/07/surekha-sikri-balika-vadhu1.jpg)
ಅವರ ನಟನೆಯ ಬಾಲಿಕಾ ವಧು ಧಾರಾವಾಹಿ, ಸಿಕ್ರಿಯವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು, ಈ ಧಾರಾವಾಹಿಯಲ್ಲಿ ಮಾಡಿದ್ದ ವಿಲನ್ ಪಾತ್ರಕ್ಕೆ 2008ರಲ್ಲಿ ಇಂಡಿಯನ್ ಟೆಲಿ ಪ್ರಶಸ್ತಿ ಅರಸಿಕೊಂಡು ಬಂದಿತ್ತು.
Discussion about this post