ಮನುಷ್ಯ ಅನ್ನುವ ಪ್ರಾಣಿಗೆ ಉಳಿದವರ ಜೀವನದಲ್ಲಿ, ಜೀವದೊಂದಿಗೆ ಆಟವಾಡುವುದು ಎಂದರೆ ಬಲು ಪ್ರಿಯ. ಅದರಲ್ಲೂ ಮನುಷ್ಯ ಪ್ರಾಣಿ, ಪಕ್ಷಿಯನ್ನು ಹಿಂಸಿಸುವುದರಲ್ಲಿ ಎತ್ತಿದ ಕೈ.
ಆದರೆ ಸೌತರ್ನ್ ಇಂಗ್ಲೆಂಡ್ನಲ್ಲಿ ಜನ ಮಾಡುತ್ತಿರುವ ಎಡವಟ್ಟುಗಳು ಮಾತ್ರ ನಾಗರಿಕ ಸಮಾಜ ತಲೆತಗ್ಗಿಸುವಂತದ್ದು. ಇಲ್ಲಿನ ಅಪರೂಪದ ಪಕ್ಷಿಗಳು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವುದನ್ನು ಕಂಡು ಜನ ಸಂಭ್ರಮಿಸುತ್ತಿದ್ದಾರೆ.
ನೈರುತ್ಯ ಇಂಗ್ಲೆಂಡ್ ಭಾಗಗಳಲ್ಲಿ ಆಲ್ಕೋಹಾಲ್ ಕುಡಿದಿರುವ ಸೀಗುಲ್ ಪಕ್ಷಿಗಳು ಹಾರಾಲಾಗದೆ, ನಿಲ್ಲಲಾಗದೇ ಒದ್ದಾಡುತ್ತಿದೆ.
ಸ್ಥಳೀಯರು ಎಸೆಯುವ ಬಿಯರ್ ಬಾಟಲಿ ಮತ್ತು ಆಲ್ಕೋಹಾಲ್ನ ತಾಜ್ಯಗಳನ್ನು ತಿಂದ ಪಕ್ಷಿಗಳು ಎಣ್ಣೆ ಏಟಿನಲ್ಲಿ ತೇಲುತ್ತಿವೆ. ಎಣ್ಣೆ ಏಟು ಜಾಸ್ತಿಯಾಗಿ ಕೆಲ ಪಕ್ಷಿಗಳು ಪ್ರಾಣವನ್ನೂ ಕೂಡಾ ಕಳೆದುಕೊಂಡಿದೆ.
RSPCA ಎಂಬ ಸಂಸ್ಥೆಯು ಇಂತಹ ಪಕ್ಷಿಗಳ ಆರೈಕೆಯಲ್ಲಿ ತೊಡಗಿದ್ದು, ಈಗಾಗಲೇ ಅಮಲಿನಿಂದ ತತ್ತರಿಸುತ್ತಿರುವ 12 ಕ್ಕೂ ಹೆಚ್ಚಿನ ಸೀಗುಲ್ ಪಕ್ಷಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಆಹಾರವೆಂದು ಪಕ್ಷಿಗಳು ತಿನ್ನುವ ಪದಾರ್ಥಗಳಲ್ಲಿ ಮದ್ಯಸಾರ ಮಿಶ್ರಿತವಾಗಿರುವುದರಿಂದ ವಾಂತಿ ಮಾಡಿಕೊಳ್ಳುತ್ತದೆ. ಹಾಗೆಯೇ ಕೊಳೆತ ಆಹಾರದಲ್ಲಿರುವ ಬ್ಯಾಕ್ಟೀರಿಯಾಗಳಿಂದ ಪಕ್ಷಿಗಳು ಅನಾರೋಗ್ಯಕ್ಕೀಡಾಗುತ್ತಿದ್ದು, ಇದೇ ವೇಳೆ ಆಲ್ಕೋಹಾಲ್ ಕೂಡ ದೇಹ ಸೇರುವುದರಿಂದ ಪಕ್ಷಿಗಳಲ್ಲಿ ಅಸ್ವಸ್ಥತೆ ಕಾಣಿಸುತ್ತಿದೆ ಎಂದು RSPCA ಅಧಿಕಾರಿಗಳು ತಿಳಿಸಿದ್ದಾರೆ.
Drunk’ gull stumbles in footage released by RSPCA
ಜನ ಜಾಗೃತಿಯಾಗದ ಹೊರತು ಈ ಪಕ್ಷಿಗಳನ್ನು ಕಾಪಾಡಲು ಸಾಧ್ಯವಿಲ್ಲ. ದೇವರೇ ಮೂಕ ಪಕ್ಷಿಗಳನ್ನು ಹಿಂಸಿಸುವ ಮನುಷ್ಯರಿಗೆ ಒಳ್ಳೆ ಬುದ್ದಿ ಕೊಡಪ್ಪ.
Discussion about this post