ಯುನೈಟೆಡ್ ಏರ್ಲೈನ್ಸ್ ನ ವಿಮಾನದಲ್ಲಿ ಲಾಸ್ ಎಂಜಲೀಸ್ ಹಾಗೂ ಸಾನ್ ಆಂಟೊನಿಯೋ ಮಾರ್ಗ ಮಧ್ಯೆ ಸಂಚರಿಸುತ್ತಿದ್ದ ದಂಪತಿ ಪ್ರಯಾಣಿಕರ ಎದುರು ಮಾಡಬಾರದನ್ನ ಮಾಡಲು ಹೋಗಿ ತಕ್ಕ ಶಿಕ್ಷೆಗೆ ಗುರಿಯಾಗಿದ್ದಾರೆ.
ಇದೇ ವರ್ಷದ ಫೆಬ್ರವರಿ ತಿಂಗಳಲ್ಲಿ ಪ್ರಯಾಣಿಕ ಎನ್ರಿಕ್ ಗೊನ್ಜಲೇಜ್(48) ಹಾಗೂ ಆತನ ಪತ್ನಿ ವಿಮಾನದಲ್ಲಿ ಲೈಟ್ಸ್ ಡಿಮ್ ಆಗಿದ್ದ ವೇಳೆ ಬಳಸಿಕೊಂಡು ಸೆಕ್ಸ್ ಮಾಡಿದ್ದಾರೆ.
ಅಕ್ಕಪಕ್ಕದ ಪ್ರಯಾಣಿಕರು ನೋಡುತ್ತಿದ್ದರೂ ಅದನ್ನು ಲೆಕ್ಕಿಸದೇ ತಮ್ಮ ಕೆಲಸವನ್ನು ಮುಂದುವರಿಸಿದ್ದಾರೆ.
ವಿಷಯ ಗೊತ್ತಾಗುತ್ತಿದ್ದಂತೆ ಇದನ್ನು ಕಂಡ ವಿಮಾನ ಸಿಬ್ಬಂದಿ ವಿಮಾನ ಸನ್ ಆಂಟೊನಿಯೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದ ತಕ್ಷಣ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪತಿಯೊಂದಿಗೆ ಹಸ್ತಮೈಥುನಕ್ಕೆ ಸಹಕರಿಸಿದ ಎನ್ರಿಕ್ ಗೊನ್ಜಲೇಜ್ ಪತ್ನಿಗೆ ಯಾವ ಶಿಕ್ಷೆ ವಿಧಿಸಲಾಗಿದೆ ಅನ್ನುವುದು ಗೊತ್ತಾಗಿಲ್ಲ. ನ್ಯಾಯಾಲಯದ ವಿಚಾರಣೆ ವೇಳೆ ತಾನೂ ತಪ್ಪು ಮಾಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ
ಇದೀಗ ಆರೋಪ ಸಾಬೀತಾಗಿರುವ ಹಿನ್ನಲೆಯಲ್ಲಿ ಕಳೆದ ಶುಕ್ರವಾರ ಆರೋಪಿಗೆ 400 ಯುಎಸ್ ಡಾಲರ್ ದಂಡ ಮತ್ತು 90 ದಿನಗಳ ಕಾಲ ಜೈಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ಇನ್ನು ಯುನೈಟೆಡ್ ಏರ್ಲೈನ್ಸ್ ಆರೋಪಿ ದಂಪತಿ ನಮ್ಮ ಸಂಸ್ಥೆಯ ಗೊನ್ಜಲೇಜ್ ಯುನೈಟೆಡ್ ಏರ್ಲೈನ್ಸ್ ನ ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ ಎಂದು ನಿಷೇಧ ಹೇರಿದೆ.
ಅಯ್ಯೋ ಇದೊಂದು ಸುದ್ದಿ ಇಲ್ಲಿ ಬೇಕಿತ್ತಾ ಅನ್ನಿಸಬಹುದು. ಆದರೆ ನಮ್ಮಲ್ಲೂ ಇಂತಹ ವಿಕೃತರಿದ್ದಾರೆ. ಅವರಿಗೆ ತಕ್ಕ ಪಾಠವಾಗಬೇಕಾದರೆ ವಿದೇಶದಂತೆ ಶೀಘ್ರ ಶಿಕ್ಷೆಯಾಗುವಂತಿರಬೇಕು ನಮ್ಮಲ್ಲಿ ಅನ್ನುವುದು ನಮ್ಮ ಆಶಯ.
Discussion about this post