ನಿಜಕ್ಕೂ ಇವರನ್ನು ಮೆಚ್ಚಲೇಬೇಕು. ಕ್ಷಣದಲ್ಲಿ ತೋರಿದ ಬುದ್ದಿವಂತಿಕೆಯಿಂದ ಪ್ರಾಣ ಉಳಿದಿದೆ. ( leopard attack )
ಶಿವಮೊಗ್ಗ : ಬೈಕ್ ಮೇಲೆ ಚಿರತೆಯೊಂದು ( leopard attack ) ಎಗರಿ ಕೂದಲೆಳೆ ಅಂತರದಲ್ಲಿ ವ್ಯಕ್ತಿಯೊಬ್ಬರು ಪಾರಾದ ಘಟನೆ ಹೊಸನಗರದಲ್ಲಿ ನಡೆದಿದೆ. ಇಲ್ಲಿನ ರಾಣೆಬೆನ್ನೂರು – ಬೈಂದೂರು ( ranebennur baindur ) ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಿಂದ ತಪ್ಪಿಸಿಕೊಂಡವರನ್ನು ಪುರೋಹಿತರಾಗಿರುವ ಸುಬ್ರಹ್ಮಣ್ಯ ನಾವುಡ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಹೊಸನಗರದಿಂದ ( hosanagara ) ನಗರಕ್ಕೆ ಬರುತ್ತಿದ್ದ ಸುಬ್ರಹ್ಮಣ್ಯ ನಾವುಡ ರಾಣೆಬೆನ್ನೂರು – ಬೈಂದೂರು ಹೆದ್ದಾರಿಯಲ್ಲಿ ದರ್ಗಾ ಹೆರಗೂಡಿಗೆ ಬರುತ್ತಿದ್ದಂತೆ ಶೂಲದ ಗುಡ್ಡದ ಕಡೆಯಿಂದ ಬೈಕ್ ಮೇಲೆ ಚಿರತೆಯೊಂದು ಜಿಗಿದಿದೆ. ಆದರೆ ಚಿರತೆಗೆ ಗುರಿ ತಪ್ಪಿ ಬೈಕ್ ಮುಂಭಾಗಕ್ಕೆ ಬಂದಿದೆ. ಈ ವೇಳೆ ಚಿರತೆ ಗರ್ಜಿಸುವುದನ್ನು ಕಂಡ ನಾವುಡ ಗಾಬರಿಯಾಗಿದ್ದಾರೆ. ಈ ವೇಳೆ ಏನೂ ಮಾಡಲು ತೋಚದೆ ಹಾರ್ನ್ ಬಾರಿಸಿ ಕಿರುಚಲಾರಂಭಿಸಿದ್ದಾರೆ. ಇದರಿಂದ ಗಾಬರಿಗೊಂಡ ಚಿರತೆ ಓಡಿ ಹೋಗಿದೆ.
ಇದನ್ನೂ ಓದಿ : Sushant Singh :ಸುಶಾಂತ್ ಗೆ ಡ್ರಗ್ಸ್ ನೀಡಿದ್ದು ಗೆಳತಿ ರಿಯಾ : ಪೂಜಾ ಸಾಮಾಗ್ರಿ ಹೆಸರಿನಲ್ಲಿ ಡ್ರಗ್ಸ್ ಖರೀದಿ
ಮದ್ಯ ಸೇವಿಸಿ ಮೂತ್ರ ವಿಸರ್ಜನೆಗೆ ಹೋದ ವೇಳೆ ಕುಸಿದ ಗೋಡೆ : ಇಬ್ಬರ ಸಾವು
ಮಳೆಗಾಲದಲ್ಲಿ ಅದೆಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಅಪಾಯ ಅನ್ನುವುದು ಬೆನ್ನ ಹಿಂದೆಯೇ ಇರುತ್ತದೆ
ಬೆಂಗಳೂರು : ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಪಾಳುಬಿದ್ದ ಕಟ್ಟಡದ ಗೋಡೆ ಕುಸಿದು ಇಬ್ಬರು ಸ್ಥಳದಲ್ಲೇ ಮೃತ ಪಟ್ಟ ದಾರುಣ ಘಟನೆ ನಗರದ ಮೈಸೂರು ರಸ್ತೆಯ BHEL ಕಿಮ್ಕೋ ಜಂಕ್ಷನ್ ಬಳಿ ನಡೆದಿದೆ. ಮೃತರನ್ನು ತಮಿಳುನಾಡು ಮೂಲದ ಬಾಲ ( 30) ಮತ್ತು ರಾಜಮಣಿ ( 35 ) ಎಂದು ಗುರುತಿಸಲಾಗಿದೆ. ಇವರು ಹಲವು ವರ್ಷಗಳಿಂದ ವಾಲ್ಮೀಕಿ ನಗರದಲ್ಲಿ ವಾಸವಾಗಿದ್ದರು.
ಇದನ್ನೂ ಓದಿ : canada boat accident : ಮೂವರು ಕೇರಳಿಗರ ಬಲಿ ಪಡೆದ ಕೆನಡಾ ದೋಣಿ ದುರಂತ
ಬಾಲ ಹಾಗೂ ರಾಜಮಣಿ ಬುಧವಾರ ಮಧ್ಯಾಹ್ನ ತಮ್ಮ ನಾಲ್ವರು ಸ್ನೇಹಿತರೊಂದಿಗೆ ನೈಸ್ ರಸ್ತೆಯ ಗಜಾನನ ಬಾರ್ ನಲ್ಲಿ ಮದ್ಯಪಾನ ಮಾಡಿ ಮನೆ ಮರಳುತ್ತಿದ್ದರು. ಈ ವೇಳೆ ಕಿಮ್ಕೊ ಜಂಕ್ಷನ್ ಬಳಿ ಮೂತ್ರ ವಿಸರ್ಜನೆಗೆ ತೆರಳಿದ್ದಾರೆ. ಅಷ್ಟು ಹೊತ್ತಿನ ತನಕ ನೇರವಾಗಿದ್ದ ಗೋಡೆ ಇವರು ಗೋಡೆ ಬದಿಗೆ ಹೋಗುತ್ತಿದ್ದಂತೆ ಬಾಲ ಮತ್ತು ರಾಜಮಣಿ ಮೇಲೆ ಬಿದ್ದಿದೆ.
ಇದನ್ನೂ ಓದಿ : Dolo 650 : ಡೋಲೋ ಕಂಪನಿಯಿಂದ ವೈದ್ಯರಿಗೆ ಸಾವಿರ ಕೋಟಿ ರೂಪಾಯಿ ಗಿಫ್ಟ್
ತಕ್ಷಣ ಸ್ನೇಹಿತರು ರಕ್ಷಣೆಗೆ ಧಾವಿಸಿದರಾದರೂ, ಕಲ್ಲು ಮಣ್ಣುಗಳ ಅಡಿಯಲ್ಲಿ ಸಿಲುಕಿದ ಕಾರಣ ಅವರಿಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ರಾಜಮಣಿ ಮನೆ ಹತ್ತಿರವೇ ಹೂ ವ್ಯಾಪಾರ ಮಾಡಿಕೊಂಡಿದ್ದರೆ ಬಾಲ ಗಾರೆ ಕೆಲಸಕ್ಕೆ ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Discussion about this post