ಕರ್ನಾಟಕ ಮತ್ತು ಕೇರಳದಲ್ಲಿ ಹುಟ್ಟಿದ ವಿವಾದಿತ ಪಿಎಫ್ಐ ಸಂಘಟನೆ ಕ್ರಮೇಣ ದೇಶದ ವಿವಿಧೆಡೆ ತನ್ನ ಜಾಲವನ್ನು ವಿಸ್ತರಿಸಿಕೊಂಡಿದೆ. ಇದೀಗ Kanhaiya lal murder case ನಲ್ಲೂ SDPI -PFI ಹೆಸರು ಕೇಳಿ ಬಂದಿದೆ
ನವದೆಹಲಿ : ಬಿಜೆಪಿ ನೂಪುರ್ ಶರ್ಮಾ ಪರ ನಿಂತ ಕಾರಣಕ್ಕೆ ರಾಜಸ್ಥಾನದ ಉದಯಪುರದ ಟೈಲರ್ ಕನ್ಹಯ್ಯಾ ಲಾಲ್ ( Kanhaiya lal murder case ) ಅವರನ್ನು ಹತ್ಯೆ ಮಾಡಿದ ಆರೋಪಿ ರಿಯಾಜ್ ಅತ್ತರ್ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಸದಸ್ಯ ಎಂದು ಗೊತ್ತಾಗಿದೆ.
ಇದರೊಂದಿಗೆ ಇದೇ ಪ್ರಕರಣದಲ್ಲಿ ಬಂಧಿತನಾದ ಮತ್ತೊಬ್ಬ ಆರೋಪಿ ಫರ್ಹಾದ್ ಮೊಹಮ್ಮದ್ ಶೇಖ್ ಆಲಿಯಾಸ್ ಬಬ್ಲಾ ಕೂಡಾ SDPI ನಂಟು ಹೊಂದಿರುವುದಾಗಿ National Investigation Agency ( NIA ) ಪತ್ತೆ ಹಚ್ಚಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದ್ದು, 2019 ರಿಯಾಜ್ ಅತ್ತರ್ 2019ರಲ್ಲಿ ( SDPI ) ಸೇರ್ಪಡೆಯಾಗಿದ್ದ.
ಇದನ್ನೂ ಓದಿ : baithadka car accident : ಬೈತಡ್ಕ ಮಸೀದಿ ಸಮೀಪ ಹೊಳೆಗೆ ಬಿದ್ದ ಕಾರು : ಭಯಾನಕ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ
nupur sharma : ನೂಪುರ್ ಶಿರಚ್ಛೇದಕ್ಕೆ ಕರೆ ನೀಡಿದ್ದ ಅಜ್ಮೇರ್ ದರ್ಗಾ ಮುಖ್ಯಸ್ಥನ ಬಂಧನ
ಜೈಪುರ : ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ( nupur sharma) ಶಿರಚ್ಛೇದ ಮಾಡಿದವರಿಗೆ ನನ್ನ ಆಸ್ತಿ ನೀಡುತ್ತೇನೆ ಎಂದು ವಿಡಿಯೋ ಮೂಲಕ ಘೋಷಿಸಿದ್ದ ಅಜ್ಮೇರ್ ದರ್ಗಾದ ಮುಖ್ಯ ವ್ಯವಸ್ಥಾಪಕ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಚಿಸ್ತಿ ಕನ್ನಯಲಾಲ್ ಹತ್ಯೆಗೂ ಮುನ್ನ ಈ ವಿಡಿಯೋ ಮಾಡಿದ್ದು, ತಡವಾಗಿ ಇಂಟರ್ ನೆಟ್ ಗೆ ಅಪ್ ಲೋಡ್ ಮಾಡಲಾಗಿತ್ತು. ಇದರ ಬೆನ್ನಲ್ಲೇ ವಿಡಿಯೋ ವೈರಲ್ ಆಯ್ತು, ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಇದೀಗ ಮಂಗಳವಾರ ತಡರಾತ್ರಿ ಖಾದಿ ಮೊಹಲ್ಲಾದಲ್ಲಿರುವ ನಿವಾಸದಿಂದ ಆರೋಪಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ : Bangalore central jail :ಖೈದಿಗಳಿಗೆ ರಾಜಾತಿಥ್ಯ ನೀಡಿದರೆ ಇನ್ಮುಂದೆ ಅಮಾನತು ಇಲ್ಲ : ಕಾರಾಗೃಹ ಕರ್ಮಕಾಂಡದ ಬಳಿಕ ಕ್ರಾಂತಿ
ನೂಪುರ್ ನಾಲಿಗೆ ತಂದ್ರೆ 2 ಕೋಟಿ : ಹರಿಯಾಣದ ವ್ಯಕ್ತಿ ಘೋಷಣೆ
ಹರಿಯಾಣ : ಅಜ್ಮೇರ್ ದರ್ಗಾದ ಮುಖ್ಯಸ್ಥನ ಬಂಧನದ ಬೆನ್ನಲ್ಲೇ, ಹರಿಯಾಣದ ವ್ಯಕ್ತಿಯೊಬ್ಬ ನೂಪುರ್ ನಾಲಿಗೆ ತಂದ್ರೆ 2 ಕೋಟಿ ಬಹುಮಾನ ಕೊಡುವುದಾಗಿ ಘೋಷಿಸಿದ್ದಾನೆ. ಹರಿಯಾಣದ ಮೇವಾತ್ ನ ವ್ಯಕ್ತಿ ಈ ಘೋಷಣೆ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ಇದೀಗ ಈ ಆರೋಪಿಗಾಗಿ ಪೊಲೀಸರು ಹುಡುಕಾಟ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ : nupur sharma : ನೂಪುರ್ ಶಿರಚ್ಛೇದಕ್ಕೆ ಕರೆ ನೀಡಿದ್ದ ಅಜ್ಮೇರ್ ದರ್ಗಾ ಮುಖ್ಯಸ್ಥನ ಬಂಧನ
ಕಾಳಿ ಚಿತ್ರ ನಿರ್ಮಾಪಕಿ ಅರ್ಚಕನಿಂದ ಶಿರಚ್ಛೇದದ ಬೆದರಿಕೆ
ಆಯೋಧ್ಯೆ : ಎಲುಬಿಲ್ಲದ ನಾಲಿಗೆ ಏನು ಬೇಕಾದರೂ ಆಡುತ್ತದೆ. ಕಾನೂನಿನ ಭಯವಿಲ್ಲದ ಮಂದಿ ಇದೀಗ ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಿದ್ದಾರೆ. ನೂಪುರ್ ಶರ್ಮಾ ವಿರೋಧಿಸಿ ಮಾತನಾಡಿದವರ ಬೆನ್ನಲ್ಲೇ, ಕಾಳಿ ಚಿತ್ರದ ಪೋಸ್ಟರ್ ಕುರಿತ ಹೊಸ ವಿವಾದ ಸೃಷ್ಟಿಯಾಗಿದೆ.
ನಿರ್ಮಾಪಕಿ ಮಣಿಮೇಕಲೈ ಕಾಳಿಮಾತೆ ಕೈಯಲ್ಲಿ ಸಿಗರೇಟ್ ಹಿಡಿದಿರುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಆಸ್ತಿಕರ ನಂಬಿಕೆಗೆ ಧಕ್ಕೆ ತಂದಿದ್ದಾರೆ. ಈ ಪೋಸ್ಟರ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಪ್ರತಿಭಟನೆಗಳು ದಾಖಲಾಗಿವೆ.
ಇದರ ಬೆನ್ನಲ್ಲೇ ಆಯೋಧ್ಯೆ ಹನುಮಾನಗಢಿ ದೇವಸ್ಶಾನದ ಅರ್ಚಕ ನಿರ್ಮಾಪಕಿ ಮಣಿಮೇಕಲೈಗೆ ಬೆದರಿಕೆ ಹಾಕಿದ್ದು, ದೇಹದಿಂದ ತಲೆ ಬೇರ್ಪಡಿಸುವೆ ಅಂದಿದ್ದಾರೆ.
Discussion about this post