ನವದೆಹಲಿ : ದೇಶದ ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಅಗತ್ಯ ಕ್ರಮಗಳ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ.
ಸೋಮವಾರ ದೆಹಲಿಯಲ್ಲಿ 4,099 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು. 2021ರ ಮೇ 18ರ ನಂತರ ನಾಲ್ಕು ಸಾವಿರ ಮೀರಿದ ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲು.
ಈ ನಡುವೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೂ ಕೊರೋನಾ ದೃಢಪಟ್ಟಿದೆ. ಈ ಬಗ್ಗೆ ಕೇಜ್ರಿವಾಲ್ ಅವರೇ ಟ್ವೀಟ್ ಮಾಡಿದ್ದು ತಾವು ಕೊರೋನಾ ಸೋಂಕಿಗೆ ತುತ್ತಾಗಿರುವುದಾಗಿ ಹೇಳಿದ್ದಾರೆ. ತಮಗೆ ಕಡಿಮೆ ರೋಗ ಲಕ್ಷಣಗಳಿದ್ದು ಮನೆಯಲ್ಲೇ ಪ್ರತ್ಯೇಕಗೊಂಡಿದ್ದೇನೆ ಅಂದಿದ್ದಾರೆ.
ಜೊತೆಗೆ ನನ್ನ ಸಂಪರ್ಕಕ್ಕೆ ಬಂದವರು ಪ್ರತ್ಯೇಕವಾಗಿರುವ ಜೊತೆಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
I have tested positive for Covid. Mild symptoms. Have isolated myself at home. Those who came in touch wid me in last few days, kindly isolate urself and get urself tested
— Arvind Kejriwal (@ArvindKejriwal) January 4, 2022
ರಾಜ್ಯದಲ್ಲಿ ಒಮಿಕ್ರೋನ್ ಅಬ್ಬರ : ಸೋಂಕು ನಿಯಂತ್ರಣಕ್ಕೆ ತಜ್ಞರ ಜೊತೆ ಸಿಎಂ ಸಭೆ
ಬೆಂಗಳೂರು : ದೇಶದಲ್ಲಿ ಪ್ರಾರಂಭವಾಗಿರುವ ಕೊರೋನಾ ಸೋಂಕಿನ ಮೂರನೇ ಅಲೆ, ರಾಜ್ಯದಲ್ಲೂ ಭೀತಿ ಹುಟ್ಟಿಸಿದೆ. ಈಗಾಗಲೇ ಕರುನಾಡಿನಲ್ಲೂ ಕೊರೋನಾ ಸೋಂಕಿತರ ಸಂಖ್ಯೆ ಏರಲಾರಂಭಿಸಿದ್ದು ಸಹಜವಾಗಿಯೇ ಒಮಿಕ್ರೋನ್ ಅಬ್ಬರವೂ ಜೋರಾಗಿದೆ.
ವಾರದ ಹಿಂದೆ 300 ರಿಂದ 400 ಹೊಸ ಪ್ರಕರಣಗಳು ಪತೀ ನಿತ್ಯ ಪತ್ತೆಯಾಗುತ್ತಿತ್ತು. ಆದರೆ ಈಗ ಈ ಸಂಖ್ಯೆ 1200ರ ಗಡಿ ದಾಟಿದೆ. ಇದೇ ವೇಗ ಮುಂದುವರಿದರೆ ಜನವರಿ 15ರ ಹೊತ್ತಿಗೆ ನಿತ್ಯ 5 ಸಾವಿರ ಪ್ರಕರಣಗಳು ಪತ್ತೆಯಾಗಲಿದೆ. ಜನವರಿಗೆ ಅಂತ್ಯಕ್ಕೆ ಈ ಸಂಖ್ಯೆ 20 ಸಾವಿರ ತಲುಪಿದರೂ ಅಚ್ಚರಿ ಇಲ್ಲ. ಒಂದು ವೇಳೆ ಈ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿದರೆ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಈ ನಿಟ್ಟಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೊರೋನಾ ನಿಯಂತ್ರಣ ತಾಂತ್ರಿಕ ಸಲಹಾ ಸಮಿತಿ ಸದಸ್ಯರ ಸಭೆ ಕರೆದಿದ್ದು, ಸೋಂಕು ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚೆ ನಡೆಸಲಿದ್ದಾರೆ.
ಈಗಾಗಲೇ ತಜ್ಞರ ಸಮಿತಿ ವರದಿಯೊಂದನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದು, ಯಲ್ಲೋ, ಆರೆಂಜ್, ರೆಡ್ ಎಂದು ಮೂರು ವಲಯಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಹೇಳಿದೆ. ಪಾಸಿಟಿವಿಟಿ ಶೇ 1 ರಷ್ಟು ಇರುವ ಪ್ರದೇಶವನ್ನು ಹಳದಿ ವಲಯ ಎಂದು ಗುರುತಿಸಿ, ಶೇ50ರ ನಿಯಮವನ್ನು ಜಾರಿಗೆ ತರಬೇಕು, ಇದರಲ್ಲಿ ಚಿತ್ರಮಂದಿರ, ಶಾಲೆ, ರೆಸ್ಟೋರೆಂಟ್ ಗಳು ಸೇರಿದೆ. ಜೊತೆಗೆ ಮಾಲ್, ಮಳಿಗೆಗಳಿಗೆ ಸಮಯದ ಮಿತಿ ಅಳವಡಿಸಿಕೊಳ್ಳಿ ಅಂದಿದೆ.
ಪಾಸಿಟಿವಿಟಿ ದರ ಶೇ 2ರಷ್ಟಿದ್ರೆ, ಕಿತ್ತಳೆ ವಲಯವೆಂದು ಗುರುತಿಸಿ, ಶಾಲಾ ಕಾಲೇಜುಗಳನ್ನು ಮುಚ್ಚಿ ಆನ್ ಲೈನ್ ತರಗತಿ ಪ್ರಾರಂಭಿಸಬೇಕು, ಸಿನಿಮಾ, ಮಾಲ್ ಸೇರಿ ಎಲ್ಲಾ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಮತ್ತು ಜಿಮ್, ಬ್ಯೂಟಿ ಪಾರ್ಲರ್, ಈಜುಕೊಳ, ಪಾರ್ಕ್ ಗಳನ್ನೂ ಬಂದ್ ಮಾಡುವಂತೆ ಹೇಳಿದೆ.
ಪಾಸಿಟಿವಿಟಿ ದರ ಶೇ 3ರಷ್ಟು ಇದ್ರೆ ಅದನ್ನು ರೆಡ್ ಆಲರ್ಟ್ ವಲಯ ಎಂದು ಗುರುತಿಸಿ ಸಂಪೂರ್ಣ ಲಾಕ್ ಡೌನ್ ಮಾಡುವಂತೆ ಸಲಹೆ ನೀಡಲಾಗಿದೆ. ಈ ರೀತಿ ಕಠಿಣ ಕ್ರಮಗಳನ್ನು ಕೈಗೊಂಡರೆ ಉತ್ತುಂಗಕ್ಕೆ ಏರಬೇಕಾದ ಸೋಂಕಿತರ ಸಂಖ್ಯೆನ್ನು 20 ಸಾವಿರಕ್ಕೆ ತಗ್ಗಿಸಬಹುದಾಗಿದೆ. ಹೀಗಾಗಿ ಫೆಬ್ರವರಿ ಕೊನೆಯ ವಾರದಲ್ಲಿ ಕೊರೋನಾ ಉಚ್ಚ್ರಾಯ ಸ್ಥಿತಿ ತಲುಪಿದಾಗ ದೊಡ್ಡ ಸಮಸ್ಯೆಯಾಗದು ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿದೆ.
Discussion about this post