ಪ್ರತೀ ಸಲ ಕ್ರಿಕೆಟ್ ಮ್ಯಾಚ್ ನಡೆದ ವೇಳೆ ಕ್ಯಾಮಾರ ಕಣ್ಣಿಗೆ ಸುಂದರಿಯರು ಬೀಳುವುದು ಸಂಪ್ರದಾಯ. ಜೊತೆಗೆ ಅವರು ವಿಶ್ವವಿಖ್ಯಾತ ಕ್ರಶ್ ಅನ್ನಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಉತ್ತರಪ್ರದೇಶದ ಕಾನ್ಪುರದಲ್ಲಿ ಪ್ರಾರಂಭಗೊಂಡಿರುವ ಭಾರತ ಹಾಗೂ ನ್ಯೂಜಿಲೆಂಡ್ ಟೆಸ್ಟ್ ಮ್ಯಾಚ್ ನಲ್ಲಿ ಗುಟ್ಕಾ ಪ್ರಿಯನೊಬ್ಬ ಇಂಟರ್ ನ್ಯಾಶನಲ್ ಸ್ಟಾರ್ ಆಗಿದ್ದಾನೆ.
ಮೈದಾನದಲ್ಲಿ ಪಂದ್ಯ ಕುತೂಹಲಕಾರಿಯಾಗಿ ಸಾಗುತ್ತಿದ್ರೆ ಕ್ಯಾಮರಾಮೆನ್ ಕಣ್ಣಿಗೆ ಲೋಕದ ಅರಿವಿಯೇ ಇಲ್ಲದೆ ಮೊಬೈಲ್ ಕರೆಯಲ್ಲಿ ಮುಳುಗಿದ್ದ. ಅಷ್ಟಾಗಿದ್ರೆ ಅವನು ವೈರಲ್ ಆಗುತ್ತಿರಲಿಲ್ಲ. ಬದಲಾಗಿ ಬಾಯಿ ತುಂಬಾ ಗುಟ್ಕಾ ಹಾಕಿ ಅವನು ಮಾತನಾಡುತ್ತಿದ್ದ ಶೈಲಿ ಇತ್ತಲ್ಲ ಅದು ಕ್ಯಾಮರಮ್ಯಾನ್ ನನ್ನು ಸೆಳೆದಿದೆ. ಹೀಗಾಗಿ ಪದೇ ಪದೇ ಅವನತ್ತ ಫೋಕಸ್ ಮಾಡಿದ್ದಾನೆ. ಪಿಸಿಆರ್ ನಲ್ಲಿ ಕೂತ ಮಂದಿಯೂ ಅವನನ್ನು ಪದೇ ಪದೇ ತೋರಿಸಿದ್ದಾರೆ.
ಮೈದಾನದ ದೊಡ್ಡ ಪರದೆಯಲ್ಲಿ ತನ್ನ ವಿಡಿಯೋ ಬಂದಾಗ ಕೈ ಬೀಸಿ ಮತ್ತೆ ಈ ಲೋಕದ ಅರಿವೆ ಇಲ್ಲದಂತೆ ಕರೆ ಕಡೆ ಜಾರುತ್ತಿದ್ದ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಮ್ಯಾಚ್ ಗಿಂತ ಈ ಪುಣ್ಯಾತ್ಮನ ವಿಡಿಯೋ ಸದ್ದು ಮಾಡುತ್ತಿದೆ.
ಬಾಯಿ ತುಂಬಾ ಗುಟ್ಕಾ ರಸ ಇಟ್ಟುಕೊಂಡ ಈತ ಅದನ್ನು ಸ್ಟೇಡಿಯಂನ ಯಾವ ಮೂಲೆಯಲ್ಲಿ ಉಗಿದಿರಬಹುದು ಅನ್ನುವುದೇ ನೆಟ್ಟಿಗರ ಪ್ರಶ್ನೆ.
Discussion about this post