ಅಂತಿಮ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವನಿತೆಯರ ವಿರುದ್ದ ಭಾರತ ತಂಡ ಸರಣಿ ಸೋಲು ಅನುಭವಿಸಿ ನಿರಾಶೆ ಮೂಡಿಸಿದೆ. ಈ ಹಿಂದೆ ಏಕದಿನ ಸರಣಿಯ ಬಳಿಕ ಟಿ20 ಸರಣಿಯಲ್ಲಿ ಗೆಲ್ಲಬಹುದು ಅನ್ನುವ ನಿರೀಕ್ಷೆಯನ್ನು ಭಾರತದ ವನಿತೆಯರು ಸುಳ್ಳಾಗಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಭಾರತದ ವನಿತೆಯರು 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿದ್ದರು. ಸ್ಮೃತಿ 70 ರನ್ ಮತ್ತ ಹರ್ಮನ್ ಪ್ರೀತ್ 36 ರನ್ ಗಳಿಸಿದರೆ, ಕೊನೆಯಲ್ಲಿ ರಿಚಾ ಘೋಷ್ 13 ಎಸೆತದಲ್ಲಿ 20 ರನ್ ಗಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೇಳೆ ಭಾರತ ತಂಡದ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ ಉತ್ತಮ ಆರಂಭ ನೀಡುವಲ್ಲಿ ಟೀಂ ಇಂಡಿಯಾ ವಿಫಲವಾಯ್ತು. ಶಫಾಲಿ ಶರ್ಮಾ ಮೊದಲ ಓವರ್ ನಲ್ಲೇ ಸೊನ್ನೆಗೆ ಫೆವಿಲಿಯನ್ ಗೆ ಮರಳಿದರು.
ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ ಎರಡು ವಿಕೆಟ್ ಕಳೆದುಕೊಂಡು 18.4 ಓವರ್ ನಲ್ಲಿ ಗೆಲುವಿನ ನಗೆ ಬೀರಿತು. ಇಂಗ್ಲೆಂಡ್ ಪರವಾಗಿ ಡೇನಿಯಲ್ ವ್ಯಾಟ್ 89 ರನ್ ಮತ್ತು ಸೀವರ್ 42 ರನ್ ಗಳಿಸಿದರು.
ವ್ಯಾಟ್ 56 ಎಸೆತೆಗಳಲ್ಲಿ 12 ಬೌಂಡರಿ, 1 ಸಿಕ್ಸರ್ ಬಾರಿಸಿ 89 ರನ್ ಪಡೆದರು. ಸೀವರ್ 36 ಎಸೆತೆಗಳಲ್ಲಿ 42 ರನ್ ಬಾರಿಸಿದರು.
Discussion about this post