ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಹಿಡಿದ ಕ್ಯಾಚ್ ಇದೀಗ ವೈರಲ್ ಆಗಿದೆ. ಈ ಕ್ಯಾಚ್ ಮೂಲಕ ಇಂಗ್ಲೆಂಡ್ ನ ಅಮಿ ಜೋನ್ಸ್ ಅವರನ್ನು ಔಟ್ ಮಾಡಿದ ಹರ್ಲೀನ್, ಜೋನ್ಸ್ ಅವರ ಅರ್ಧ ಶತಕದ ಕನಸನ್ನೂ ನುಚ್ಚು ನೂರು ಮಾಡಿದ್ದಾರೆ.
ಆದರೆ ನಾರ್ಥಾಂಪ್ಟನ್ ನಲ್ಲಿ ನಡೆದ ಭಾರತ ಇಂಗ್ಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 19 ನೇ ಓವರ್ನಲ್ಲಿ 4 ವಿಕೆಟ್ಗೆ 166 ರನ್ ಗಳಿಸಿತ್ತು. ಅಮಿ ಜೋನ್ಸ್ 26 ಎಸೆತಗಳಲ್ಲಿ 43 ರನ್ ಗಳಿಸಿ ಭಾರತದ ಶಿಖಾ ಪಾಂಡೆ ಅವರ ಬೆವರಿಳಿಸಿದ್ದರು. ಈ ವೇಳೆ ಚೆಂಡನ್ನು ಬೌಂಡರಿಗೆ ಅಟ್ಟಲು ಯತ್ನಿಸಿದ ಅಮಿ ಜೋನ್ಸ್ ಅವರಿಗೆ ಬೌಂಡರಿ ಲೈನ್ ನಲ್ಲಿ ನಿಂತಿದ್ದ ಹರ್ಲೀನ್ ಶಾಕ್ ಕೊಟ್ಟಿದ್ದಾರೆ.
ಇನ್ನೇನು ಚೆಂಡು ಬೌಂಡರಿ ಲೈನ್ ಕ್ರಾಸ್ ಮಾಡಬೇಕು ಅನ್ನುವಷ್ಟರಲ್ಲಿ ಚೆಂಡನ್ನು ತಡೆಯಲಾಯ್ತು. ಆದರೆ ಆ ವೇಗಕ್ಕೆ ಹರ್ಲೀನ್ ಬೌಂಡರಿ ಲೈನ್ ಕ್ರಾಸ್ ಆಗೋದು ಅನಿವಾರ್ಯ. ಕೆಲವೇ ಕೆಲವು ಸೆಕೆಂಡ್ ಗಳಲ್ಲಿ ನಿರ್ಧಾರ ಕೈಗೊಂಡ ಹರ್ಲೀನ್ ಚೆಂಡನ್ನು ಎಸೆದು ಬೌಂಡರಿ ಲೈನ್ ಕ್ರಾಸ್ ಮಾಡಿದ್ದಾರೆ. ಇನ್ನೇನು ಚೆಂಡು ನೆಲಕ್ಕೆ ಬಡಿಯಬೇಕು ಅನ್ನುವಷ್ಟರಲ್ಲಿ ಬೌಂಡರಿ ಲೈನ್ ನಿಂದ ಬಂದು ಮತ್ತೆ ಬಾಲ್ ಹಿಡಿಯುವ ಮೂಲಕ ಇದಪ್ಪ ಕ್ಯಾಚ್ ಎಂದು ಉದ್ಘರಿಸುವಂತ ಪ್ರದರ್ಶನ ತೋರಿದ್ದಾರೆ.
Discussion about this post