ನನ್ನ ಗಂಡ ವಿಪರೀತ ಬ್ಲೂ ಫಿಲ್ಮ್ ನೋಡ್ತಾರೆ, ಮಧ್ಯ ರಾತ್ರಿಯೂ ಇದೇ ಕಾರ್ಯ. ಇವರು ಕದ್ದು ಮುಚ್ಚಿ ನೋಡೊದ್ದನ್ನು ಮಕ್ಕಳು ನೋಡ್ತಾರೆ, ಏನು ಮಾಡೋದು ಎಂದು ಗೊತ್ತಾಗುತ್ತಿಲ್ಲ. ಇದು ಅನೇಕ ಗೃಹಿಣಿಯರ ಪ್ರಶ್ನೆ.
ಲೈಂಗಿಕ ತಜ್ಞರ ಪ್ರಕಾರ ಈ ಪ್ರಶ್ನೆ ಯಾವಾಗ ಗೃಹಿಣಿಯರ ಮನಸ್ಸಿನಲ್ಲಿ ಮೂಡುತ್ತದೋ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳ್ಳೆಯದಂತೆ.
ನೀಲಿ ಚಿತ್ರ ನೋಡುವ ಚಟ ಹೆಂಡ ಕುಡಿಯುವ ಮತ್ತು ಡ್ರಗ್ಸ್ ತೆಗೆದುಕೊಳ್ಳುವ ಕಾಯಿಲೆಗಳ ಪರಿಣಾಮಕ್ಕಿಂತಲೂ ಭೀಕರವಂತೆ.
ಹೀಗೆ ನೀಲಿ ಚಿತ್ರದ ಚಟಕ್ಕೆ ಬಿದ್ದವರಿಗೆ ತಕ್ಷಣ ಚಿಕಿತ್ಸೆ ಕೊಡಿಸಬೇಕು ಇಲ್ಲವಾದರೆ ಅಪಾಯ ಗ್ಯಾರಂಟಿ ಅನ್ನುವುದು ತಜ್ಞರ ಅಭಿಪ್ರಾಯ.
ಮನೆ ಯಜಮಾನ ಅನ್ನಿಸಿದವನು ನೀಲಿ ಚಿತ್ರದ ಚಟಕ್ಕೆ ಬಿದ್ದಿದ್ದಾನೆ ಅಂದ ತಕ್ಷಣ ಮೊದಲು ಮನೋವೈದ್ಯರಿಗೆ ತೋರಿಸಬೇಕು. ಅವರ ಔಷಧಿ ಮತ್ತು ಥೆರಪಿಗಳನ್ನು ಕೊಡಿಸಬೇಕು.
ಒಂದು ವೇಳೆ ಪತಿ ಸಿಕ್ಕಾಪಟ್ಟೆ ನೀಲಿ ಚಿತ್ರ ನೋಡುತ್ತಿದ್ದಾನೆ ಅಂದ್ರೆ ಏಕಾಏಕಿ ಏಗರಾಡಬೇಡಿ. ಪರಿಸ್ಥಿತಿ ಶಾಂತವಾಗಿದ್ದ ವೇಳೆ ಕುಳಿತು ಮಾತನಾಡಿ, ತಿಳಿಹೇಳಿ. ನೀಲಿ ಚಿತ್ರ ನೋಡಿದರೆ ಮಕ್ಕಳ ಕಥೆ ಏನಾಗಬೇಕು ಅನ್ನುವುದನ್ನು ವಿವರಿಸಿ.
ಅದ್ಯಾಕೆ ನೀಲಿ ಚಿತ್ರ ನೋಡ್ತಾರೆ ಅನ್ನುವುದನ್ನು ಅರಿತುಕೊಳ್ಳಿ. ಇದ್ಯಾವುದರಿಂದ ಉತ್ತರ ಸಿಗದಿದ್ರೆ, ಇದ್ಯಾವುದರಿಂದ ಸಮಸ್ಯೆ ಬಗೆ ಹರಿಯದೇ ಹೋದಾಗ ವೈದ್ಯರನ್ನು ಕಾಣುವುದು ಉತ್ತಮ.
Discussion about this post