ನವದೆಹಲಿ : ಕೊರೋನಾ ಸೋಂಕು ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಇನ್ನೇನು ಚೈನಾ ವೈರಸ್ ಅನ್ನು ಗೆದ್ದೆವು ಅಂದುಕೊಳ್ಳುವಷ್ಟರಲ್ಲಿ ರೂಪಾಂತರಿ ವೈರಸ್ ಕಾಟ ಶುರುವಾಗಿದೆ.
ಮೊದಲ ವೈರಸ್ ಗೆ ಹೋಲಿಸಿದರೆ ರೂಪಾಂತರಿ ವೈರಸ್ ಗಳು ಸಾಕಷ್ಟು ಅಪಾಯಕಾರಿ. ವೇಗವಾಗಿ ಹಬ್ಬುತ್ತಿರುವ ಕಾರಣ ರೂಪಾಂತರಿ ವೈರಸ್ ಗಳು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.
ಬ್ರಿಟನ್ ರೂಪಾಂತರಿ ವೈರಸ್ ವಿಶ್ವದ ಅನೇಕ ಭಾಗಗಳಲ್ಲಿ ಸಿಕ್ಕಾಪಟ್ಟೆ ವೇಗವಾಗಿ ಹರಡುತ್ತಿದೆ.
ಇಂಗ್ಲೆಂಡ್ ನಲ್ಲಿ ಹೊಸ ಪ್ರಕರಣಗಳ ಪೈಕಿ 98 ರಷ್ಟು ಮತ್ತು ಸ್ಪೇನ್ನಲ್ಲಿ ಶೇ. 90 ಬ್ರಿಟನ್ ಮಾದರಿಯ ವೈರಸ್ ಪತ್ತೆಯಾಗಿದೆ
ಮೂಲ ವೈರಸ್ಗಿಂತ ಶೇಕಡಾ 70 ರಷ್ಟು ಹೆಚ್ಚು ವೇಗವಾಗಿ ಹರಡುತ್ತದೆ ಅನ್ನುವುದೇ ಆತಂಕ.
ಈ ನಡುವೆ ಪಂಜಾಬ್ ನಲ್ಲಿ ಜನವರಿ 1 ಮತ್ತು ಮಾರ್ಚ್ 10 ರ ನಡುವೆ ಸಂಗ್ರಹಿಸಲಾದ 401 ಮಾದರಿಗಳ ಪೈಕಿ 326 ಮಾದರಿಗಳಲ್ಲಿ ಬ್ರಿಟನ್ ರೂಪಾಂತರ ವೈರಸ್ ಪತ್ತೆಯಾಗಿದೆ.
ಇದನ್ನೂ ಓದಿ : ಮಂಗಳೂರಿನ ಫುಡ್ ಡೆಲಿವರಿ ಹುಡುಗರೇ ಕೊರೋನಾ ಪರೀಕ್ಷೆ ಎದುರಿಸಲು ಸಿದ್ದರಾಗಿ…!
ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಆದರೂ ಈ ಬ್ರಿಟನ್ ರೂಪಾಂತರಿ ವೈರಸ್ ಹೆಚ್ಚು ಸಾಂಕ್ರಾಮಿಕವಾಗಿದ್ದರೂ, ಹೆಚ್ಚು ಅಪಾಯಕಾರಿ ಅಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಜೊತೆಗೆ ಕೋವಿಶೀಲ್ಡ್ ಬ್ರಿಟನ್ ರೂಪಾಂತರಿ ವೈರಸ್ ಸೋಲಿಸುವಲ್ಲಿ ಸಫಲವಾಗಲಿದೆ ಅಂದಿದ್ದಾರೆ.
Discussion about this post