ಮಂಗಳೂರು : ಕೊರೋನಾ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
ಮಾಸ್ಕ್ ಹಾಕುವ ವಿಚಾರದಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳು ನಡೆದುಕೊಂಡ ರೀತಿಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ದುಡಿಯುವ ಕೈಗಳು ಆಕ್ರೋಶ ಹೊರ ಹಾಕಿದ ಸಂದರ್ಭದಲ್ಲಿ ಆತನನ್ನು ಕ್ರಿಮಿನಲ್ ಅನ್ನುವಂತೆ ಬಿಂಬಿಸುವ ಅಗತ್ಯವಿರಲಿಲ್ಲ.
ಜಿಲ್ಲಾಧಿಕಾರಿ ಹಾಗೂ ಪೊಲೀಸರ ನಡವಳಿಕೆಯಿಂದ ಆತನಿಗೆ ಹಾಗೂ ಆತನ ಮನೆಯವರಿಗೆ ಆಗಬಹುದಾದ ಮಾನಸಿಕ ಹಿಂಸೆಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಅರಿವು ಇರಬೇಕಾಗಿತ್ತು.
ಬದಲಾಗಿ ರಾಜಕೀಯ ನಾಯಕರು, ವಿಐಪಿಗಳು, ಸೆಲೆಬ್ರೆಟಿಗಳು ಕೊರೋನಾ ನಿಯಮ ಉಲ್ಲಂಘಿಸಿದ ವೇಳೆ ಹೀಗೆ ದರದರನೇ ಎಳೆದೊಯ್ಯುತ್ತಿದ್ರೆ ಖಂಡಿತಾ ಕರಾವಳಿ ಜನ ಚಪ್ಪಾಳೆ ಹೊಡೆಯುತ್ತಿದ್ದರು.
ಮತ್ತೊಂದು ಕಡೆ ಕೊರೋನಾ ಸೋಂಕಿನ ಎರಡನೇ ಅಲೆಯ ನಿಯಂತ್ರಣ ಸಲುವಾಗಿ ಪಣ ತೊಟ್ಟಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೊರೋನಾ ಟೆಸ್ಟ್ ಪ್ರಮಾಣ ಹೆಚ್ಚಿಸಲು ನಿರ್ಧರಿಸಿದೆ.
ಒಂದು ಕಾಲದಲ್ಲಿ ಕೊರೋನಾ ಸೋಂಕು ಮುಗಿದೇ ಹೋಯ್ತು ಅನ್ನುವ ಕರಾವಳಿಯಲ್ಲಿ ಇದೀಗ ಕೊರೋನಾ ಅಬ್ಬರಿಸತೊಡಗಿದೆ.
ಖಾಸಗಿ ಹಾಗೂ ಸರ್ಕಾರಿ ಬಸ್ ಗಳಲ್ಲಿ ಸಾಮಾಜಿಕ ಅಂತರವನ್ನು ಮರೆತಿರುವುದೇ ಇದಕ್ಕೆ ಮೂಲಕ ಕಾರಣ.
ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಭೀತಿ ಶುರುವಾಗಿರು ಹಿನ್ನಲೆಯಲ್ಲಿ ಆರಂಭದಲ್ಲೇ ಕಟ್ಟಿ ಹಾಕಲು ಜಿಲ್ಲಾಡಳಿತ ಸಜ್ಜಾಗಿದೆ.
ಹೀಗಾಗಿ ಕೊರೋನಾ ಸೋಂಕಿಗೆ ಹೆಚ್ಚು ತುತ್ತಾಗುವ ಸಾಧ್ಯತೆಗಳಿರುವ ಮಂದಿಗೆ ಜಿಲ್ಲೆಯಲ್ಲಿ ಕೊರೋನಾ ಮಾಡಿಸಲು ನಿರ್ಧರಿಸಲಾಗಿದೆ.
ಮುಖ್ಯವಾಗಿ ಜಿಲ್ಲೆಯ ಗಡಿ ಪ್ರದೇಶದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ 2ನೇ ಹಂತದ ಕೊರೊನಾ ಟೆಸ್ಟ್ ಮಾಡಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಮೂಲಕ ಕೇರಳದಿಂದ ವೈರಸ್ ಹರಡುವ ಸಾಧ್ಯತೆಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ.
ಜೊತೆಗೆ ಜನರೊಂದಿಗೆ ಅನಿವಾರ್ಯವಾಗಿ ಹೆಚ್ಚು ಹೆಚ್ಚು ಬೆರೆಯುತ್ತಿರುವ ಫುಡ್ ಡೆಲಿವರಿ ಬಾಯ್ಸ್ ಹಾಗೂ ಪೆಟ್ರೋಲ್ ಬಂಕ್ ಸಿಬ್ಬಂದಿಗೂ ಕೊರೋನಾ ಟೆಸ್ಟ್ ನಡೆಯಲಿದೆ.
ಹೀಗಾಗಿ ಜಿಲ್ಲೆಯ ಎಲ್ಲಾ ಪೆಟ್ರೊಲ್ ಬಂಕ್ ಸಿಬ್ಬಂದಿ ಹಾಗೂ ಸ್ವಿಗ್ಗಿ, ಝೋಮ್ಯಾಟೋಟೊ ಸೇರಿದಂತೆ ಇತರ ಡೆಲಿವರಿ ಸೇವೆಯಲ್ಲಿರುವ ಸಿಬ್ಬಂದಿಗೂ RTPCR ಟೆಸ್ಟ್ ನಡೆಯಲಿದೆ.
ಜಿಲ್ಲಾಡಳಿತದ ಈ ಕ್ರಮ ನಿಜಕ್ಕೂ ಫಲ ಕೊಡುವುದರಲ್ಲಿ ಸಂಶಯವಿಲ್ಲ. ಇದರೊಂದಿಗೆ ಕೊರೋನಾ ಲಸಿಕೆ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಮತ್ತಷ್ಟು ವೇಗ ಕೊಡಬೇಕಾಗಿದೆ.
ಗ್ರಾಮೀಣ ಪ್ರದೇಶದಲ್ಲಿರುವ ವೃದ್ದರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಜಿಲ್ಲೆಯ ಬಹುತೇಕ ಹಳ್ಳಿಗಳು ಈಗಾಗಲೇ ವೃದ್ಧಾಶ್ರಮಗಳಾಗಿವೆ. ಈ ಕಾರಣದಿಂದ ತುರ್ತಾಗಿ ಅಲ್ಲಿಗೆ ಲಸಿಕೆ ತಲುಪಬೇಕಾಗಿದೆ.
Discussion about this post