2020 ರಲ್ಲಿ ಬಿಡುಗಡೆಯಾದ ಚಲನಚಿತ್ರಗಳಿಗಾಗಿ ಶುಕ್ರವಾರ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ( 68th National Film Awards) ನವದೆಹಲಿಯಲ್ಲಿ ಘೋಷಿಸಲಾಗಿದೆ. ಕನ್ನಡ ತುಳು ಸೇರಿದಂತೆ ಅನೇಕ ಚಿತ್ರಗಳು ಈ ಬಾರಿ ಪ್ರಶಸ್ತಿ ಬಾಚಿಕೊಂಡಿದೆ.
ನಟ ಸೂರ್ಯ ಮತ್ತು ಅಜಯ್ ದೇವಗನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಹಂಚಿಕೊಂಡಿದ್ದು. ತಾನ್ಹಾಜಿ ಚಿತ್ರವು ಅತ್ಯುತ್ತಮವಾದ ಜನಪ್ರಿಯ ಚಿತ್ರ ಪ್ರಶಸ್ತಿಯನ್ನು ( 68th National Film Awards ) ಗೆದ್ದುಕೊಂಡಿದೆ.
ಇನ್ನು ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
ಅತ್ಯುತ್ತಮ ಚಲನಚಿತ್ರ : ಸೂರರೈ ಪೊಟ್ರು ( ತಮಿಳು ಸಿನಿಮಾ )
ಅತ್ಯುತ್ತಮ ನಿರ್ದೇಶಕ : ಕೆ.ಆರ್. ಸಚ್ಚಿದಾನಂದನ್ ( ಸಚ್ಚಿ ) ಅಯ್ಯಪ್ಪನುಂ ಕೋಶಿಯುಂ ಮಲಯಾಳಂ ಸಿನಿಮಾ
ಅತ್ಯುತ್ತಮವಾದ ಜನಪ್ರಿಯ ಚಿತ್ರ : ತಾನ್ಹಾಜಿ ( ಹಿಂದಿ )
ಅತ್ಯುತ್ತಮ ನಟ : ಸೂರರೈ ಪೊಟ್ರು ಚಿತ್ರಕ್ಕಾಗಿ ಸೂರ್ಯ ಮತ್ತು ತಾನ್ಹಾಜಿ ಚಿತ್ರಕ್ಕಾಗಿ ಅಜಯ್ ದೇವಗನ್
ಅತ್ಯುತ್ತಮ ನಟಿ : ಅಪರ್ಣಾ ಬಾಲಮುರಳಿ ( ಸೂರರೈ ಪೊಟ್ರು ತಮಿಳು ಚಿತ್ರಕ್ಕಾಗಿ )
ಅತ್ಯುತ್ತಮ ಪೋಷಕ ನಟ : ಬಿಜು ಮೆನನ್ ( ಅಯ್ಯಪ್ಪನುಂ ಕೋಶಿಯುಂ ಮಲಯಾಳಂ ಚಿತ್ರಕ್ಕಾಗಿ)
ಅತ್ಯುತ್ತಮ ಪೋಷಕರ ನಟಿ : ಲಕ್ಷ್ಮಿ ಪ್ರಿಯ ಚಂದ್ರಮೌಳಿ ( ಚಿತ್ರ ಶಿವರಂಜನಿಯುಂ ಇನ್ನುಂ ಸಿಲ ಪೆಂಗಲ್ಲುಂ ತಮಿಳು ಚಿತ್ರ )
ಅತ್ಯುತ್ತಮ ಚಿತ್ರಕಥೆ : ಶಾಲಿನಿ ಉಷಾ ನಾಯರ್ ಮತ್ತು ಸುಧಾ ಕೊಂಗಾರ ( ಸೂರರೈ ಪೊಟ್ರು)
ಅತ್ಯುತ್ತಮ ಸಂಭಾಷಣೆ : ಮಡೊನ್ನೆ ಅಶ್ವಿನ್ ( ಮಂಡೇಲಾ ತಮಿಳು ಚಿತ್ರ )
ಅತ್ಯುತ್ತಮ ಸಂಗೀತ ನಿರ್ದೇಶಕ ( ಹಾಡು ) : ಎಸ್. ತಮನ್ ( ಚಿತ್ರ – ಅಲಾ ವೈಕುಂಠಪುರಮುಲೋ ತೆಲುಗು ಚಿತ್ರ )
ಅತ್ಯುತ್ತಮ ಸಂಗೀತ ( ಹಿನ್ನಲೆ ಸಂಗೀತ ) : ಜಿಲಿ ಪ್ರಕಾಶ್ ( ಸೂರರೈ ಪೊಟ್ರು ತಮಿಳು ಚಿತ್ರ)
ಅತ್ಯುತ್ತಮ ಹಿನ್ನಲೆ ಗಾಯಕ : ರಾಹುಲ್ ದೇಶಪಾಂಡೆ ( ಮಿ.ವಸಂತ ರಾವ್ ಮರಾಠಿ ಚಿತ್ರಕ್ಕಾಗಿ )
ಅತ್ಯುತ್ತಮ ಹಿನ್ನಲೆ ಗಾಯಕಿ : ನಂಜಮ್ಮ ( ಅಯ್ಯಪ್ಪನುಂ ಕೋಶಿಯುಂ ಮಲಯಾಳಂ ಚಿತ್ರಕ್ಕಾಗಿ)
ಅತ್ಯುತ್ತಮ ಗೀತ ರಚನೆಕಾರ : ಮನೋಜ್ ಮುಂತಶಿರ್ ( ಸೈನಾ ಹಿಂದಿ ಚಿತ್ರಕ್ಕಾಗಿ )
ಅತ್ಯುತ್ತಮ ಆಡಿಯೋಗ್ರಫಿ – ಜಯನ್ (Location Sound Recordist) : ಜೋಬಿನ್ ( ಡೊಳ್ಳು ತುಳು ಸಿನಿಮಾ )
ಅತ್ಯುತ್ತಮ ಆಡಿಯೋಗ್ರಫಿ – (Sound Designer) : ಅನ್ಮೋಲ್ ಭಾವೆ ( ಮಿ.ವಸಂತ ರಾವ್ ಮರಾಠಿ ಚಿತ್ರಕ್ಕಾಗಿ )
ಅತ್ಯುತ್ತಮ ಆಡಿಯೋಗ್ರಫಿ – (Re-recordist of the final mixed track) : ವಿಷ್ಣು ಗೋವಿಂದ್ ಹಾಗೂ ಶ್ರೀಶಂಕರ್ ( ಮಲಿಕ್ ಮಲಯಾಳಂ ಚಿತ್ರಕ್ಕಾಗಿ )
ಅತ್ಯುತ್ತಮ ನೃತ್ಯ ನಿರ್ದೇಶನ: ಸಂಧ್ಯಾ ರಾಜು – ಚಿತ್ರ: ನಾಟ್ಯಂ (ತೆಲುಗು)
ಅತ್ಯುತ್ತಮ ಛಾಯಾಗ್ರಹಣ : ಸುಪ್ರತಿಮ್ ಭೋಲ್ ( ಅವಿಜಾತ್ರಿಕ್ ಬೆಂಗಾಲಿ ಚಿತ್ರಕ್ಕಾಗಿ )
ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನರ್: ನಚಿಕೇತ್ ಬಾರ್ವೆ, ಮಹೇಶ್ ಶೆರ್ಲಾ – ಚಿತ್ರ: ತಾನ್ಹಾಜಿ (ಹಿಂದಿ)
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ : ಅನೀಸ್ ನಾಡೋಡಿ ( ಕಪಿಲಾ ಮಲಯಾಳಂ ಚಿತ್ರ )
ಅತ್ಯುತ್ತಮ ಸಂಕಲನಕಾರ : ಶ್ರೀಕಾರ್ ಪ್ರಸಾದ್ ( ಶಿವರಂಜನಿಯುಂ ಇನ್ನುಂ ಸಿಲ ಪೆಂಗಲ್ಲುಂ ತಮಿಳು ಚಿತ್ರ )
ಅತ್ಯುತ್ತಮ ಮೇಕಪ್ : ಟಿವಿ ರಾಮ್ ಬಾಬು ( ನಾಟ್ಯಂ ತೆಲುಗು ಚಿತ್ರ )
ಅತ್ಯುತ್ತಮ ಸಾಹಸ ನಿರ್ದೇಶಕ: ರಾಜಶೇಖರ್, ಮಾಫಿಯಾ ಶಶಿ ಮತ್ತು ಸುಪ್ರೀಂ ಸುಂದರ್ – ಚಿತ್ರ: ಅಯ್ಯಪ್ಪಂ ಕುಶಿಯಾನ್ (ಮಲಯಾಳಂ)
ಅತ್ಯುತ್ತಮ ಹಿಂದಿ ಚಿತ್ರ : ಟೂಲ್ಸಿದಾಸ್ ಜೂನಿಯರ್
ಅತ್ಯುತ್ತಮ ಕನ್ನಡ ಚಿತ್ರ : ಡೊಳ್ಳು
ಅತ್ಯುತ್ತಮ ಮಲಯಾಳಂ ಚಿತ್ರ : ತಿಂಗಳಾಯ್ಚ ನಿಶ್ಚಯಂ
ಅತ್ಯುತ್ತಮ ತಮಿಳು ಚಿತ್ರ : ಶಿವರಂಜನಿಯುಂ ಇನ್ನುಂ ಸಿಲ ಪೆಂಗಳ್ಳುಂ
ಅತ್ಯುತ್ತಮ ತೆಲುಗು ಚಿತ್ರ : ಕಲರ್ ಫೋಟೋ
ಅತ್ಯುತ್ತಮ ಹರಿಯಾಣ ಚಿತ್ರ : ದಾದ ಲಕ್ಷ್ಮಿ
ಅತ್ಯುತ್ತಮ ದಿಮ್ಸಾ ಚಿತ್ರ : ಸಂಖೋರ್
ಅತ್ಯುತ್ತಮ ತುಳು ಚಿತ್ರ : ಜೀಟಿಗೆ
ಅತ್ಯುತ್ತಮ ಮರಾಠಿ ಚಿತ್ರ : ಗೋಷ್ಟ ಏಕ ಪೈತಾನಿಚಿ
ಅತ್ಯುತ್ತಮ ಬೆಂಗಾಲಿ ಸಿನಿಮಾ : ಅವಿಜಾತ್ರಿಕ್
ಅತ್ಯುತ್ತಮ ಅಸ್ಸಾಂ ಸಿನಿಮಾ :ದ ಬ್ರಿಡ್ಜ್
ಅತ್ಯುತ್ತಮ ಬಾಲನಟ : ಅನಿಶ್ ಮಂಗೇಶ್ ಗೋಸಾವಿ ( ತಕ್ ತಕ್ )
ಅತ್ಯುತ್ತಮ ಮಕ್ಕಳ ಚಿತ್ರ : ಸುಮಿ
ಅತ್ಯುತ್ತಮ ಪರಿಸರ ಸಂರಕ್ಷಣಾ ಚಿತ್ರ: ತಲೆದಂಡ (ಕನ್ನಡ)
ಅತ್ಯುತ್ತಮ ಸಾಮಾಜಿಕ ಚಿತ್ರ : ಫ್ಯುನರೆಲ್
ಇಂದಿರಾ ಗಾಂಧಿ ಪ್ರಶಸ್ತಿ : ಮಂಡೇಲಾ ಚಿತ್ರದ ನಿರ್ದೇಶನಕ್ಕಾಗಿ ಯುವ ನಿರ್ದೇಶಕ ಮಡೊನ್ನೆ ಅಶ್ವಿನ್ ಅತ್ಯುತ್ತಮ ಚೊಚ್ಚಲ ನಿರ್ದೇಶಕ ಪ್ರಶಸ್ತಿ
Discussion about this post