ಗುಹಾವಟಿ : ಒಂದು ಕೆಜಿ ಟೀ ಪೌಡರ್ ಬೆಲೆ ಎಷ್ಟಿರಬಹುದು. 300 ರೂಪಾಯಿ 400 ರೂಪಾಯಿ, ಆದರೆ ಒಂದು ಕೆಜಿ ಟೀ ಪೌಡರ್ ಬೆಲೆ 99,999 ರೂಪಾಯಿ ಅಂದ್ರೆ ನಂಬ್ತೀರಾ. ನಂಬಲೇಬೇಕು. ಅಸ್ಸಾಂನ ಒಂದು ಕೆಜಿ ಮನೋಹರಿ ಗೋಲ್ಡ್ ಟೀ ಪೌಡರ್ ಬರೋಬ್ಬರಿ 99,999ರೂ ಗೆ ಮಾರಾಟವಾಗುವ ಮೂಲಕ ದಾಖಲೆ ನಿರ್ಮಿಸಿದೆ.
ಅಸ್ಸಾಂನ r ಮನೋಹರಿ ಗೋಲ್ಡ್ ಚಹಾ ಪುಡಿ ಸ್ವಾದಿಷ್ಟ ಭರಿತ ಚಹಾಪುಡಿಯೆಂದೇ ವಿಶ್ವ ಪ್ರಸಿದ್ಧಿಯಾಗಿದೆ. ಈ ಹಿಂದೆ ಈ ಟೀ ಪೌಡರ್ ಕೆಜಿಗೆ 75 ಸಾವಿರ ರೂಪಾಯಿಯಂತೆ ಮಾರಾಟವಾಗಿತ್ತು. ಇದೀಗ ಇದೀಗ ಇದೇ ಮನೋಹರಿ ಟೀ ಪೌಡರ್ 99,999 ರೂ ಗೆ ಮಾರಾಟವಾಗುವ ಮೂಲಕ ತನ್ನ ಹಳೆಯ ದಾಖಲೆಯನ್ನು ಮುರಿದಿದೆ.
ಗುಹಾವಟಿ ಟೀ ಮಾರಾಟ ಕೇಂದ್ರದಲ್ಲಿ ನಡೆದ ಹರಾಜಿನಲ್ಲಿ ಮನೋಹರಿ ಗೋಲ್ಡ್ ಚಹಾಪುಡಿಯನ್ನು ಸೌರವ್ ಟೀ ಟ್ರೇಡರ್ಸ್ ಕಂಪನಿ ಲಕ್ಷಕ್ಕೆ ಒಂದು ರೂಪಾಯಿ ಕಮ್ಮಿ ಅನ್ನುವ ಬಿಡ್ ಮಾಡಿ ಚಹಾ ಪುಡಿಯನ್ನು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಈ ಚಹಾಪುಡಿಯನ್ನು ಗುಹಾವಟಿ ಮೂಲದ ವಿಷ್ಣು ಟೀ ಕಂಪನಿ ಆನ್ ಲೈನ್ ಮೂಲಕ ದೇಶ ವಿದೇಶಕ್ಕೆ ಮಾರಾಟ ಮಾಡಲಿದೆ.
2018ರಲ್ಲಿ ಈ ಮನೋಹರಿ ಗೋಲ್ಡ್ ಟೀ ಕೆಜಿಗೆ 39 ಸಾವಿರ ರೂಪಾಯಿ ಮೊತ್ತಕ್ಕೆ ಹರಾಜುಗೊಂಡಿತ್ತು. 2019ರಲ್ಲಿ ಈ ದರ 50 ಸಾವಿರ ರೂಪಾಯಿಗೆ ಏರಿತ್ತು. 2020ರಲ್ಲಿ 75 ಸಾವಿರ ರೂಪಾಯಿಗೆ ಹರಾಜುಗೊಂಡಿತ್ತು. ಪ್ರತೀ ವರ್ಷ ಸೌರವ್ ಟೀ ಟ್ರೇಡರ್ಸ್ ಕಂಪನಿಯೇ ಬಿಡ್ ಗೆಲ್ಲುತ್ತಿರುವುದು ಗಮನಿಸಬೇಕಾದ ಅಂಶ.
ಮನೋಹರಿ ಟೀ ಎಸ್ಟೆಟ್ ಈ ಚಹಾಪುಡಿಯನ್ನು ಉತ್ಪಾದಿಸುತ್ತದೆ. ಪ್ರತೀ ವರ್ಷ 10 ಕೆಜಿಯಷ್ಟು ದುಬಾರಿ ಚಹಾ ಪುಡಿ ತಯಾರಾಗುತ್ತಿತ್ತು. ಈ ಬಾರಿ 2 ಕೆಜಿಯಷ್ಟು ಮಾತ್ರ ಉತ್ಪಾದಿಸಲಾಗಿದೆ.
ಮನೋಹರಿ ಗೋಲ್ಡ್ ಚಹಾಪುಡಿಯನ್ನು ಎಳೆಯ ಎಲೆಗಳಿಂದ ತಯಾರಿಸಲಾಗುತ್ತದೆ . ಎಳೆಯ ಎಲೆಗಳನ್ನು ಬೆಳಗಿನ ಜಾವ 4 ಗಂಟೆಯಿಂದ 6 ಗಂಟೆಯ ಒಳಗೆ ಸಂಗ್ರಹಿಸಲಾಗುತ್ತದೆ. ಅಂದ ಹಾಗೇ ಮನೋಹರಿ ಟೀ ಎಸ್ಟೆಟ್ ಸಾವಿರ ಎಕರೆ ವಿಸ್ತಾರವಾಗಿದ್ದು 600ಕ್ಕೂ ಹೆಚ್ಚು ಸಿಬ್ಬಂದಿಗಳು ಇಲ್ಲಿ ದುಡಿಯುತ್ತಾರೆ.
ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಸೋತ ರಮೇಶ್ ಜಾರಕಿಹೊಳಿ : ಪರಿಷತ್ ಮುಖ್ಯ ಸಚೇತಕನಿಗೆ ಸೋಲು
ಬೆಳಗಾವಿ : ವಿಧಾನಪರಿಷತ್ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಗೆಲುವಿಗಾಗಿ ಜಿದ್ದಾಜಿದ್ದಿ ಸಮರ ನಡೆಸಿದೆ. ಆದರೆ ಕುಂದಾನಗರಿ ಬೆಳಗಾವಿಯಲ್ಲಿ ಮಾತ್ರ ಸಾಹುಕಾರ ಖ್ಯಾತಿಯ ರಮೇಶ್ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮುಂದೆ ಮಂಡಿಯೂರಿದ್ದಾರೆ.
ಹೆಬ್ಬಾಳ್ಕರ್ ಸಹೋದರ ಚೆನ್ನರಾಜುವನ್ನು ಸೋಲಿಸಲೇಬೇಕು ಎಂದು ಪಣ ತೊಟ್ಟಿದ್ದ ರಮೇಶ್ ಜಾರಕಿಹೊಳಿ ಹೋರಾಟದಲ್ಲಿ ಸೋತಿದ್ದಾರೆ. ಮೊದಲ ಪ್ರಾಶಸ್ತ್ಯದ ಮತ ಎಣಿಕೆಯಲ್ಲೇ ಕಾಂಗ್ರೆಸ್ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಎರಡನೇ ಸ್ಥಾನವನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಖನ್ ಜಾರಕಿಹೊಳಿ ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಸೋಲಿಗೂ ರಮೇಶ್ ಜಾರಕಿಹೊಳಿ ಕಾರಣರಾಗಿದ್ದಾರೆ.
ಈ ಹಿಂದೆ PLD ಬ್ಯಾಂಕ್ ಚುನಾವಣೆ ಸಂದರ್ಭದಲ್ಲೂ ರಮೇಶ್ ಜಾರಕಿಹೊಳಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಕಡೆಯಿಂದ ಮುಖ ಭಂಗವಾಗಿತ್ತು.
Discussion about this post