ಉತ್ತರಪ್ರದೇಶ : ಕೊರೋನಾ ಅಬ್ಬರ ಕಡಿಮೆಯಾಗುತ್ತಿದೆ ಅನ್ನುವ ಗುಡ್ ನ್ಯೂಸ್ ನಡುವೆ ಮತ್ತೊಂದು ವೈರಸ್ ಕಾಟ ಆತಂಕ ತಂದೊಡ್ಡಿದೆ.
ದೇಶದ ಹಲವು ರಾಜ್ಯಗಳಲ್ಲಿ ಝಿಕಾ ಸೋಂಕು ಕಾಟ ಪ್ರಾರಂಭವಾಗಿದ್ದು, ಉತ್ತರ ಪ್ರದೇಶದ ಕಾನ್ಪುರದಲ್ಲಿ 30 ಮಂದಿಗೆ ಝಿಕಾ ಸೋಂಕು ದೃಢಪಟ್ಟಿದೆ. ಈ ಮೂಲಕ ಈ ಸಂಖ್ಯೆ 66ಕ್ಕೆ ಏರಿದೆ. ಸೋಂಕು ಪೀಡಿತರ ಪೈಕಿ 45 ಮಂದಿ ಪುರುಷರಾಗಿದ್ದು 21 ಮಂದಿ ಮಹಿಳೆಯರಾಗಿದ್ದಾರೆ.
ಮತ್ತೊಂದು ಕಡೆ ಕೇರಳದಲ್ಲೂ ಝಿಕಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು ಈ ತನಕ 90 ಮಂದಿಗೆ ಸೋಂಕು ತಗುಲಿದೆ. ಇದೇ ವರ್ಷದ ಜುಲೈ 8ರಂದು ಮೊದಲ ಪ್ರಕರಣ ಇಲ್ಲಿ ಪತ್ತೆಯಾಗಿತ್ತು.
ಝಿಕಾ ವೈರಾಣು Aedes aegypti ಅನ್ನುವ ಸೊಳ್ಳೆಗಳಿಂದ ಹರಡುವ ಸೋಂಕಾಗಿದ್ದು, ಗರ್ಭಿಣಿ ತಾಯಿಯಿಂದ ಗರ್ಭದಲ್ಲಿರುವ ಮಗುವಿಗೂ ಸೋಂಕು ಹರಡುತ್ತದೆ. ಮಾತ್ರವಲ್ಲದೆ sexual contact, ರಕ್ತದ ಮೂಲಕವೂ ಒಬ್ಬರಿಂದ ಒಬ್ಬರಿಗೆ ರೋಗ ಹರಡುತ್ತದೆ.
ಸೊಳ್ಳೆಗಳನ್ನು ನಿಯಂತ್ರಿಸುವುದೇ ಈ ಸೋಂಕು ನಿಯಂತ್ರಣಕ್ಕಿರುವ ಏಕೈಕ ಮಾರ್ಗ ಎಂದು ಹೇಳಲಾಗಿದೆ.
Amidst the Covid-19 pandemic, India has sounded an alert on Zika virus infection, especially in Uttar Pradesh (UP) and Kerala where cases are on the rise.
Discussion about this post