ಜೆಟ್ ವಿಮಾನವೊಂದು ನಭಕ್ಕೆ ಹಾರಿದ ಕೆಲವೇ ದಿನಗಳಲ್ಲಿ ಕಟ್ಟಡಕ್ಕೆ ಬಡಿದು ಪತನಗೊಂಡ ಘಟನೆ ನಾರ್ತ್ ಈಸ್ಟ್ ಅಮೆರಿಕಾದ ಕನೆಕ್ಟಿಕಟ್ ( Connecticut) ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ..
ರಾಬರ್ಟ್ಸನ್ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೆ ಈ ವಿಮಾನ ಟೇಕಾಫ್ ಆಗಿತ್ತು. ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಕಟ್ಟಡಕ್ಕೆ ಬಡಿದು ದುರಂತಕ್ಕೀಡಾಗಿದೆ.
ರಾಬರ್ಟ್ಸನ್ ವಿಮಾನ ನಿಲ್ದಾಣದಿಂದ ಉತ್ತರ ಕೆರೋಲಿನಾದ ಮಾಂಟಿಯೋದಲ್ಲಿರುವ ಡೇರ್ ಕೌಂಟಿ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಈ ಜೆಟ್ ಪ್ರಯಾಣಿಸಬೇಕಿತ್ತು.
ದುರಂತದಲ್ಲಿ ಮೃತಪಟ್ಟವರ ಪೈಕಿ ಇಬ್ಬರು ಪೈಲಟ್ಗಳು ಹಾಗೂ ಇಬ್ಬರು ಪ್ರಯಾಣಿಕರು ಸೇರಿದ್ದಾರೆ ಎಂದು ಗೊತ್ತಾಗಿದೆ.
Discussion about this post