ನವದೆಹಲಿ : ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ (monsoon session) ಪ್ರಾರಂಭವಾಗಲಿದ್ದು, ಕೃಷಿ ಕಾಯ್ದೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ರೈತರ ಏಳಿಗೆಗಾಗಿ ಎಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆಯನ್ನು ಅಧಿವೇಶನದ ಮೊದಲ ದಿನವೇ ರದ್ದುಪಡಿಸುವ ಮಸೂದೆ ಮಂಡನೆಯಾಗಲಿದೆ.ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ( narendra singh tomar) ಕಳೆದ ವರ್ಷ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮಸೂದೆಯನ್ನು ಮಂಡಿಸಲಿದ್ದಾರೆ.
ಈ ನಡುವೆ ಕಾಂಗ್ರೆಸ್ ಈ ಕಾಯ್ದೆ ವಿಚಾರದಲ್ಲಿ ಚರ್ಚೆ ನಡೆಸಲು ಪಟ್ಟು ಹಿಡಿಯುವ ಸಾಧ್ಯತೆಗಳಿದ್ದು, ಈ ಮೂಲಕ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾರ್ಯತಂತ್ರ ರೂಪಿಸಿದೆ. ಇನ್ನುಳಿದಂತೆ ಚೀನಾ ಒಳನುಸುಳುವಿಕೆ, ರಫೇಲ್ ಒಪ್ಪಂದ, ಅಗತ್ಯ ವಸ್ತುಗಳ ಬೆಲೆಯೇರಿಕೆ ಬಗ್ಗೆಯೂ ವಾಗ್ದಾಳಿ ನಡೆಸಲು ಕಾಂಗ್ರೆಸ್ ಸಿದ್ದತೆ ಮಾಡಿಕೊಂಡಿದೆ.
ಇನ್ನುಳಿದಂತೆ ಈ ಬಾರಿಯ ಅದಿವೇಶನದಲ್ಲಿ ಒಟ್ಟು 26 ಮಸೂದೆಗಳು ಮಂಡನೆಯಾಗಲಿದೆ.
Discussion about this post