ಪಾವತಿ ವ್ಯವಸ್ಥೆಗಳ ಡೇಟಾವನ್ನು ಸಂಗ್ರಹಿಸುವಲ್ಲಿ ಆರ್ಬಿಐನ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾವತಿ ವ್ಯವಸ್ಥೆ ಆಪರೇಟರ್ ಮಾಸ್ಟರ್ ಕಾರ್ಡ್ ಮೇಲೆ RBI ಕಠಿಣ ಕ್ರಮ ಕೈಗೊಂಡಿದೆ.
ಮಾಸ್ಟರ್ ಕಾರ್ಡ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ಬಂಧ ಹೇರಿದ್ದು, ಕಾರ್ಡ್ ನೆಟ್ವರ್ಕ್ನಲ್ಲಿ ಹೊಸ ದೇಶೀಯ ಡೆಬಿಟ್, ಕ್ರೆಡಿಟ್ ಕಾರ್ಡ್ ಅಥವಾ ಪ್ರೀಪೇಯ್ಡ್ ಕಾರ್ಡ್ ನೀಡುವಂತಿಲ್ಲ ಎಂದು RBI ಆದೇಶಿಸಿದೆ. ಜುಲೈ 22 ರಿಂದ ಈ ಆದೇಶ ಜಾರಿಗೆ ಬರಲಿದ್ದು, ಮಾಸ್ಟರ್ ಕಾರ್ಡ್ ಹೊಸ ಡೆಬಿಟ್, ಕ್ರೆಡಿಟ್ ಅಥವಾ ಪ್ರೀಪೇಯ್ಡ್ ಕಾರ್ಡ್ಗಳನ್ನು ವಿತರಿಸುವಂತಿಲ್ಲ.
ಈ ಬಗ್ಗೆ ಆರ್ ಬಿ ಐ ವಕ್ತಾರರು ಮಾಹಿತಿ ನೀಡಿದ್ದು, ಮಾಸ್ಟರ್ ಕಾರ್ಡ್ ಸಂಸ್ಥೆಗೆ ಸಾಕಷ್ಟು ಸಮಯ ನೀಡಲಾಗಿತ್ತು, ಅವಕಾಶ ನೀಡಲಾಗಿತ್ತು ಹಾಗಿದ್ದರೂ ಅವರು ತಿದ್ದಿಕೊಳ್ಳಲಿಲ್ಲ. ಹೀಗಾಗಿ ಈ ಕ್ರಮ ಅನಿವಾರ್ಯ ಅಂದಿದೆ.
ಹಾಗಂತ ಈಗಾಗಲೇ ಮಾಸ್ಟರ್ಕಾರ್ಡ್ ಹೊಂದಿರುವವರು ಆತಂಕ ಪಡಬೇಕಾಗಿಲ್ಲ, ಪ್ರಸ್ತುತ ಗ್ರಾಹಕರ ಮೇಲೆ ಈ ಆದೇಶ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು RBI ಹೇಳಿದೆ.
Discussion about this post