ನವದೆಹಲಿ : ಭಾರತದಲ್ಲಿ ನಡೆದ ಕೊರೋನಾ ವಿರುದ್ಧದ ಸಮರ ಜಗತ್ತಿನಾದ್ಯಂತ ಸದ್ದು ಮಾಡಿತ್ತು. ಲಸಿಕಾಕರಣಕ್ಕೆ ಸಿಸಕ್ಕ ವೇಗವೇ ಮೂರನೇ ಅಲೆ ತಡೆಯಲು ಸಾಧ್ಯವಾಗಿದೆ ಅನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಒಮಿಕ್ರೋನಾ ಕೂಡಾ ಮೂರನೇ ಅಲೆಯಲ್ಲಿ ಅಪಾಯಕಾರಿ ವೈರಸ್ ಆಗಿರಲಿಲ್ಲ ಅನ್ನುವುದು ಕೂಡಾ ಅಷ್ಟೇ ಸತ್ಯ.
ಏನೇ ಆದರೂ ಕೊರೋನಾ ವಿರುದ್ಧ ಭಾರತ ನಡೆಸಿದ ಲಸಿಕಾ ಸಮರವನ್ನು ಮೆಚ್ಚಲೇಬೇಕು. ಹಲವು ಅಡೆ ತಡೆಗಳು ಪ್ರತಿಪಕ್ಷಗಳು ಲಸಿಕೆ ವಿಚಾರದಲ್ಲಿ ಮಾಡಿದ ರಾಜಕೀಯದ ನಡುವೆ ದೇಶದಲ್ಲಿ ನಡೆದ ಲಸಿಕಾ ಅಭಿಯಾನ ದೊಡ್ಡ ಮೈಲಿಗಲ್ಲು ಅನ್ನುವುದರಲ್ಲಿ ಅನುಮಾನವಿಲ್ಲ. ಜೊತೆಗೆ ಕೊರೋನಾ ಲಸಿಕೆಯನ್ನು ಉಚಿತವಾಗಿ ಹಂಚಿದ ಕಾರಣ ಜನ ಲಸಿಕೆ ಪಡೆಯಲು ಮುಂದೆ ಬಂದಿದ್ದರು.
ಇದೀಗ ಮೂರನೇ ಡೋಸ್ ಅಂದ್ರೆ ಬೂಸ್ಟರ್ ಡೋಸ್ ಹಂಚಿಕೆ ಪ್ರಾರಂಭವಾಗಿದೆ. ಮೊದಲ ಹಂತದಲ್ಲಿ ಆದ್ಯತಾ ವಲಯಕ್ಕೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದೆ. ಈ ಹಿಂದಿನಂತೆ ಮೂರನೇ ಡೋಸ್ ಅನ್ನು ಉಚಿತವಾಗಿ ಹಂಚಲಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಮೂರನೇ ಡೋಸ್ ಉಚಿತವಾಗಿರುವುದಿಲ್ಲ ಅನ್ನುವ ಸುಳಿವು ಸಿಕ್ಕಿದೆ.
ಕಳೆದ ವರ್ಷದ ಬಜೆಟ್ ನಲ್ಲಿ ಲಸಿಕೆ ಖರೀದಿಗಾಗಿಯೇ 35 ಸಾವಿರ ಕೋಟಿ ರೂಪಾಯಿ ತೆಗೆದಿರಿಸಲಾಗಿತ್ತು. ಆದರೆ ಈ ಬಾರಿ ಕೇವಲ 5 ಸಾವಿರ ಕೋಟಿ ರೂಪಾಯಿ ಮಾತ್ರ ಮೀಸಲಿರಿಸಲಾಗಿದೆ. ಹಾಗಾದ್ರೆ 3ನೇ ಡೋಸ್ ಸರ್ವರಿಗೂ ಉಚಿತವಾಗಿ ಸಿಗುವುದಿಲ್ಲವೇ ಅನ್ನುವ ಅನುಮಾನ ಹುಟ್ಟುಹಾಕಿದೆ.
ಪ್ರಸ್ತುತ ಆರೋಗ್ಯ ಸಿಬ್ಬಂದಿ, ಕೊರೋನಾ ವಾರಿಯರ್ಸ್ ಮತ್ತು 60 ವರ್ಷ ಮೇಲ್ಪಟ್ಟ ಪೂರ್ವರೋಗ ಪೀಡಿತರಿಗೆ ಮಾತ್ರ ಮೂರನೇ ಡೋಸ್ ನೀಡಲಾಗುತ್ತೆದೆ. ಅದು ಉಚಿತವಾಗಿದೆ. ಮುಂದೆ 18 ವರ್ಷ ಮೇಲ್ಪಟ್ಟ ಸರ್ವರಿಗೂ ಡೋಸ್ ಗೆ ಅವಕಾಶ ಕೊಟ್ಟರೆ ಅದು ಉಚಿತವಾಗಿರೋದಿಲ್ಲ ಅನ್ನಲಾಗಿದೆ. ಅದು ಉಚಿತವಾಗಿಲ್ಲದಿದ್ರೆ, ಮೂರನೇ ಡೋಸ್ ಲಸಿಕಾಕರಣ ಕಾರ್ಯಕ್ರಮ ಹಳ್ಳ ಹಿಡಿಯೋದು ಗ್ಯಾರಂಟಿ.
Discussion about this post