ಸುಪ್ರೀಂಕೋರ್ಟ್ ನಡೆ ನಿಜಕ್ಕೂ ಶ್ಲಾಘನೀಯ ( Justice UU Lalit ). ಹೀಗೆ ಸರ್ಕಾರಿ ಅಧಿಕಾರಿಗಳು ಕರೆಕ್ಟ್ ಆಗಿ 10 ಗಂಟೆಗೆ ಕಚೇರಿಗೆ ಬಂದ್ರೆ ಚೆನ್ನಾಗಿತ್ತು
ನವದೆಹಲಿ : ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ, ಕೋರ್ಟ್ 9 ಗಂಟೆಗೆ ತನ್ನ ಕೆಲಸ ಪ್ರಾರಂಭಿಸಬಹುದಲ್ಲವೇ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಯು.ಯು ಲಲಿತ್ ಹೇಳಿದ್ದಾರೆ. ( Justice UU Lalit ) ಶುಕ್ರವಾರ ಸುಪ್ರೀಂಕೋರ್ಟ್ ನಲ್ಲಿ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮಾತನಾಡಿದ ಅವರು ಮಕ್ಕಳು ಅಷ್ಟು ಬೇಗ ಶಾಲೆಗೆ ಹೋಗುವುದಾದ್ರೆ ನಾವು ಯಾಕೆ ಬೆಳಗ್ಗೆ 9 ಗಂಟೆಗೆ ಕೋರ್ಟ್ ಕಲಾಪ ಆರಂಭಿಸಬಾರದು ಅಂದರು.
ಶುಕ್ರವಾರವಾದ ಇಂದು ಕೋರ್ಟ್ ಕಲಾಪ ಸಾಮಾನ್ಯ ಸಮಯಕ್ಕಿಂತ ಒಂದು ಗಂಟೆ ಅಂದ್ರೆ 9.30ಕ್ಕೆ ಪ್ರಾರಂಭವಾಗಿತ್ತು. ಈ ವೇಳೆ ಜಾಮೀನು ಅರ್ಜಿಯೊಂದರ ಕುರಿತಂತೆ ವಿಚಾರಣೆಗೆ ಹಾಜರಾದ ಅಟಾರ್ನಿ ಜನರ್ ಮುಕುಲ್ ರೋಸ್ಟಗಿ, ಬೇಗ ಕಲಾಪ ಪ್ರಾರಂಭಿಸಿರುವುದಕ್ಕೆ ನ್ಯಾಯಾಲಯವನ್ನು ಅಭಿನಂದಿಸಿದರು.
ಇದನ್ನೂ ಓದಿ : videos ban in govt offices : ಸರ್ಕಾರಿ ಕಚೇರಿಗಳಲ್ಲಿ ಖಾಸಗಿ ವ್ಯಕ್ತಿಗಳು ವಿಡಿಯೋ ಮಾಡುವಂತಿಲ್ಲ : ರಾಜ್ಯ ಸರ್ಕಾರ ಆದೇಶ
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಲಲಿತ್, ಕಲಾಪ ಬೇಗ ಪ್ರಾರಂಭವಾಗಬೇಕು ಅನ್ನುವುದು ನನ್ನ ನಿಲುವು. 9 ಗಂಟೆಗೆ ಕಲಾಪ ಪ್ರಾರಂಭಿಸಬೇಕು. ಮಕ್ಕಳು ಶಾಲೆಗೆ 7 ಗಂಟೆಗೆ ಹೋಗುವುದಾದ್ರೆ ನಾವು ಯಾಕೆ 9 ಗಂಟೆಗೆ ಕೋರ್ಟ್ ಕಲಾಪ ಪ್ರಾರಂಭಿಸಬಾರದು.
ಸುಪ್ರೀಂಕೋರ್ಟ್ ಕಲಾಪ 9 ಗಂಟೆಗೆ ಪ್ರಾರಂಭವಾಗಬೇಕು. ಮಧ್ಯಾಹ್ನ 11.30ಕ್ಕೆ ಅರ್ಧ ಗಂಟೆ ವಿರಾಮ. 12 ಗಂಟೆಗೆ ಮತ್ತೆ ಕಲಾಪ ಪ್ರಾರಂಭವಾಗಿ 2 ಗಂಟೆಗೆ ಮುಗಿಸಬೇಕು. ಇದರಿಂದ ನಮಗೆ ಹೆಚ್ಚು ಸಮಯ ಸಿಗುತ್ತದೆ. ಇದರಿಂದ ಹೊಸ ವಿಚಾರಣೆಗೆ ಹೆಚ್ಚು ಹೊತ್ತು ತೆಗೆದುಕೊಳ್ಳುವುದಿಲ್ಲ ಅಂದಿದ್ದಾರೆ.
ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದ ಕುಮಾರಸ್ವಾಮಿ ಒಡೆತನದ ಕಸ್ತೂರಿ ನ್ಯೂಸ್
ಪಬ್ಲಿಕ್ ಟಿವಿ ಮತ್ತು ಸುವರ್ಣ ವಾಹಿನಿ ನಡುವಿನ TRP ಸಮರದಲ್ಲಿ ರಂಗನಾಥ್ ಮಾಲೀಕತ್ವದ ಪಬ್ಲಿಕ್ ವಾಹಿನಿ ಜಯ ಸಾಧಿಸಿದೆ
ಯಾವುದೇ ಉಪಗ್ರಹ ಆಧಾರಿತ ವಾಹಿನಿಗಳು ಉಸಿರಾಡಬೇಕಾದರೆ TRP ಅನ್ನುವುದು ಬಲು ಮುಖ್ಯ. ಜಾಹೀರಾತುಗಳು ಹರಿದು ಬರುವುದೇ ಈ TRP ಮಾನದಂಡದ ಜನಪ್ರಿಯತೆಯ ಮೂಲಕ. ಕಳೆದ ಹಲವು ವಾರಗಳ ಕಾಲ ನಿಂತು ಹೋಗಿದ್ದ ಈ TRP ಕೊಡುವ ಕ್ರಮ ಇದೀಗ ಮತ್ತೆ ಪ್ರಾರಂಭವಾಗಿದೆ. ಹೀಗಾಗಿ TRP ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಲು ಎಲ್ಲಾ ವಾಹಿನಿಗಲು ಇನ್ನಿಲ್ಲದ ಸರ್ಕಸ್ ನಡೆಸುತ್ತವೆ.
ಇದೀಗ ಕರ್ನಾಟಕದ 27ನೇ ವಾರದ ಬಾರ್ಕ್ ರೇಟಿಂಗ್ ಬಿಡುಗಡೆಯಾಗಿದ್ದು, ಕರ್ನಾಟಕದ ಸುದ್ದಿ ವಾಹಿನಿಗಳು ನಿರೀಕ್ಷೆಯಂತೆ ಸ್ಥಾನ ಹಂಚಿಕೊಂಡಿದೆ. Telivision rating point ಪಟ್ಟಿಯಲ್ಲಿ ಎಂದಿನಂತೆ ಟಿವಿ9 ಮೊದಲ ಸ್ಥಾನದಲ್ಲಿದ್ದು ಅದನ್ನು ಸೋಲಿಸಲು ಸಾಧ್ಯವೇ ಇಲ್ಲ ಅನ್ನುವಂತಾಗಿದೆ.
ಇನ್ನು ಹೇಗಾದರೂ ಸರಿ ಸುವರ್ಣ ಸುದ್ದಿವಾಹಿನಿಯನ್ನು ಪಕ್ಕಕ್ಕೆ ಸರಿಸಿ ಎರಡನೇ ಸ್ಥಾನಕ್ಕೆ ಏರಬೇಕು ಅನ್ನುವ ಪಬ್ಲಿಕ್ ಟಿವಿಯ ಕನಸು ಮತ್ತೆ ಈ ವಾರ ನನಸಾಗಿದೆ. ಕಳೆದ ವಾರದಂತೆ ಈ ವಾರವೂ ಪಬ್ಲಿಕ್ ಟಿವಿಯ TRP ಎರಡನೇ ಸ್ಥಾನದಲ್ಲಿದೆ.
ಹಾಗಾದ್ರೆ ಹೇಗಿದೆ ಈ ವಾರದ ನ್ಯೂಸ್ ಚಾನೆಲ್ ಗಳ ಟಿ.ಆರ್.ಪಿ
1.ಟಿವಿ9 ಕನ್ನಡ -84.17
2. ಪಬ್ಲಿಕ್ ಟಿವಿ-43.83
3. ಏಷಿಯನ್ ನೆಟ್ ಸುವರ್ಣ ನ್ಯೂಸ್- 37.17
4. ನ್ಯೂಸ್ 18 ಕನ್ನಡ- 26.61
5. ನ್ಯೂಸ್ ಫಸ್ಟ್-22.31
6. ದಿಗ್ವಿಜಯ 24×7 ನ್ಯೂಸ್- 15.45
7.ಪವರ್ ಟಿವಿ- 11.85
8.ಟಿವಿ 5 ಕನ್ನಡ- 2.95
9.ರಾಜ್ ನ್ಯೂಸ್ ಕನ್ನಡ- 2.33
10.ಕಸ್ತೂರಿ ನ್ಯೂಸ್- 2.16
Discussion about this post