Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸಿದ್ದರಾಮಯ್ಯ ಕಾರಿಗೆ ಹಣ ಎಸೆದ ಪ್ರಕರಣದಲ್ಲಿ SDPI ಕೈವಾಡ : ವಿಜಯಾನಂದ ಕಾಶಪ್ಪನವರ ಗಂಭೀರ ಆರೋಪ

Radhakrishna Anegundi by Radhakrishna Anegundi
17-07-22, 5 : 39 am
in ರಾಜ್ಯ
woman-rejects-throws-money-at-siddaramaiahs-vehicle-sdpi-behind-incident-vijayanand-kashappanavar
Share on FacebookShare on TwitterWhatsAppTelegram

ಕೆರೂರ ಗಲಾಟೆ ಸಂಬಂಧ ಗಾಯಾಳುಗಳಿಗೆ ಸಿದ್ದರಾಮಯ್ಯ ಕೊಟ್ಟ ಹಣವನ್ನು ಮುಸ್ಲಿಂ ಮಹಿಳೆ ಎಸೆದಿರುವುದು ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅವಮಾನವಾಗಿ ಪರಿಣಮಿಸಿದೆ. ಚುನಾವಣೆಯ ಹೊಸ್ತಿಲಲ್ಲಿ ನಡೆದ ಘಟನೆಯಿಂದ ಮತ ಬ್ಯಾಂಕ್ ಕಳೆದು ಹೋಗುವ ಆತಂಕ ಎದುರಾಗಿದೆ. ಇದೀಗ ಹಣ ಎಸೆದ ಪ್ರಕರಣಕ್ಕೆ SDPI ಸಂಘಟನೆ ಹೆಸರನ್ನು ಎಳೆದು ತರಲಾಗಿದೆ.

ಬಾಗಲಕೋಟೆ  :ವಿಪಕ್ಷ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಪರಿಹಾರದ ಹಣವನ್ನು ಮುಸ್ಲಿಂ ಮಹಿಳೆಯೊಬ್ಬರು ಎಸೆದ ಪ್ರಕರಣದ ಹಿಂದೆ SDPI ಸಂಘಟನೆ ಕೈವಾಡ ಇದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಆರೋಪಿಸಿದ್ದಾರೆ.

ಇದನ್ನೂ ಓದಿ : poor quality tea to CM : ಮುಖ್ಯಮಂತ್ರಿಗೆ ತಣ್ಣಗಾದ ಟೀ ಕೊಟ್ಟ ಅಧಿಕಾರಿಗೆ ಶೋಕಾಸ್ ನೋಟಿಸ್

ಇಲಕಲ್ ಪಟ್ಟಣದಲ್ಲಿ ಮಾತನಾಡಿರುವ ಅವರು ಎಸ್.ಡಿ.ಪಿ.ಐ ನವರು ಪ್ರಚೋದನೆ ನೀಡಿ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಮಾಡುವಂತೆ ಪ್ರೇರೆಪಿಸಿದ್ದಾರೆ. ಗಾಯಾಳುಗಳ ಸಂಬಂಧಿಕರಿಗೆ ಎಸ್.ಡಿ.ಪಿ.ಐ ನವರು ಕುಮ್ಮಕ್ಕು ನೀಡಿ ಹಣ ಎಸೆಯುವಂತೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಆಸ್ಪತ್ರೆಗೆ ಬಂದ ಸಂದರ್ಭದಲ್ಲಿ ಎಸ್.ಡಿ.ಪಿ.ಐ ನವರು ಕೂಡಾ ಅಲ್ಲಿಗೆ ಬಂದಿದ್ದರು ಅಂದಿದ್ದಾರೆ.

ಪರಿಹಾರ ಧನವನ್ನು ಮಾನವೀಯತೆ ದೃಷ್ಟಿಯಿಂದ ನೀಡಲಾಗಿದೆ. ಇಂತಹ ಘಟನೆಗಳಿಂದ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಧಕ್ಕೆ ಇಲ್ಲ. SDPI ಮತ್ತು BJPಯವರಿಗೆ ಸಂಪರ್ಕವಿದೆ. ದೇಶದಲ್ಲಿ ಇವರೇ ಅಝಾನ್, ಹಿಜಾಬ್ ಪ್ರಕರಣಗಳನ್ನು ತಂದು ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ ಎಂದು ಕಾಶಪ್ಪನವರ್ ದೂರಿದರು.

ನಾವು ನಾಸ್ತಿಕರು : ಭೂಮಿ ಪೂಜೆ ವೇಳೆ ಹಿಂದೂ ಅರ್ಚಕರನ್ನು ಕಂಡು ಡಿಎಂಕೆ ಸಂಸದ ಗರಂ

ರಸ್ತೆ ಯೋಜನೆಯೊಂದಕ್ಕೆ ಪೂಜೆಗೆಂದು ಅರ್ಚಕರನ್ನು ಕರೆಸಿರುವ ಅಧಿಕಾರಿಗಳ ಕ್ರಮದ ವಿರುದ್ಧ ಡಿಎಂಕೆ ಸಂಸದ ಎಸ್ ಸೆಂಥಿಲ್ ಕುಮಾರ್ ಕಿಡಿ ಕಾರಿದ್ದಾರೆ.

ಚೆನೈ : ಹಿಂದೂ ಅರ್ಚಕರ ಮೂಲಕ ರಸ್ತೆ ಯೋಜನೆಗೆ ಭೂಮಿ ಪೂಜೆ ನಡೆಸಲು ಅಧಿಕಾರಿ ಮುಂದಾಗಿರುವುದರ ವಿರುದ್ಧ ಆಡಳಿತಾರೂಢ ಡಿಎಂಕೆಯ ಲೋಕಸಭಾ ಸದಸ್ಯ ಸೆಂಥಿಲ್ ಕುಮಾರ್ ಗರಂ ಆಗಿರುವ ಘಟನೆ ನಡೆದಿದೆ.

ತಮ್ಮ ಧರ್ಮಪುರಿ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಶಂಕು ಸ್ಥಾಪನೆ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ಹಿಂದೂ ಅರ್ಚಕರನ್ನು ಕಂಡ ತಕ್ಷಣ ಕೆಂಡಾಮಂಡಲರಾದ ಸಂಸದರು, ಒಂದು ನಿರ್ದಿಷ್ಟ ಧರ್ಮದ ಪ್ರಾರ್ಥನೆಯೊಂದಿಗೆ ಸರ್ಕಾರಿ ಕಾರ್ಯಕ್ರಮ ಆಯೋಜಿಸಬಾರದು ಎಂದು ನಿಮಗೆ ಗೊತ್ತಿಲ್ಲವೇ. ಸರ್ಕಾರಿ ಕಾರ್ಯಕ್ರಮ ಹೇಗೆ ನಡೆಸಬೇಕು ಎಂದು ಗೊತ್ತಿಲ್ವ ಅಂದರು.

ಬೇರೆ ಧರ್ಮದ ಗುರುಗಳು ಎಲ್ಲಿದ್ದಾರೆ, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗುರುಗಳು ಎಲ್ಲಿ, ಚರ್ಚ್ ಫಾದರ್, ಇಮಾಮ್ ಅವರನ್ನು ಕರೆಯಿಸಿ, ನಾವು ನಾಸ್ತಿಕರು, ದ್ರಾವಿಡ ಕಳಂಗ ಪ್ರತಿನಿಧಿಗಳು ಎಂದು ಗುಡುಗಿದರು. ಇದು ದ್ರಾವಿಡ ಮಾದರಿಯ ಆಡಳಿತ, ಸರ್ಕಾರ ಎಲ್ಲಾ ಧರ್ಮಕ್ಕೆ ಸೇರಿದ ಜನರಿಗಾಗಿ ಇದೆ ಅಂದರು.

ಸಂಸದರ ಅಬ್ಬರಕ್ಕೆ ಬೆದರಿದ ಲೋಕೋಪಯೋಗಿ ಅಧಿಕಾರಿಗಳು ಸಂಸದರ ಕ್ಷಮೆಯಾಚಿಸಿದರು. ಇದೇ ವೇಳೆ ಸ್ಪಷ್ಟನೆ ಕೊಟ್ಟ ಸಂಸದರು ನಾನು ಪೂಜೆಯ ವಿರೋಧಿಲ್ಲ, ಆದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು ಅಂದರು.

Tags: MAIN
ShareTweetSendShare

Discussion about this post

Related News

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಮಾಜಿ ಶಾಸಕರಿಗೆ ವಿಷದ ಹಾವು ಕಡಿತ : ಸಂಜೀವ ಮಠಂದೂರು ಆಸ್ಪತ್ರೆಗೆ

ಖಾಸಗಿ ಬಸ್ ಮಾಲೀಕರಿಗೆ ಶರಣಾದ ಸಿದ್ದರಾಮಯ್ಯ ಸರ್ಕಾರ : Deepavali ಬರೆ

ಹಿರಿಯ ರಾಜಕೀಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ( D. B. Chandregowda ) ಇನ್ನಿಲ್ಲ

Yakshagana : ಲೀಲಾವತಿಯವರಿಗೆ leelavathi baipadithaya ಪ್ರಶಸ್ತಿ ಒಲಿದಿದ್ದು ಹೇಗೆ…. ಮಗ ಬಿಚ್ಚಿಟ್ಟ ರಹಸ್ಯ

yakshagana ರಂಗದ ಸಾಧಕಿಗೆ Karnataka Rajyotsava ಪ್ರಶಸ್ತಿ

ಅರ್ಜಿ ಸಲ್ಲಿಸದವರಿಗೂ ಈ ಬಾರಿ ಕನ್ನಡ ರಾಜ್ಯೋತ್ಸವ (Karnataka Rajyotsava) ಪ್ರಶಸ್ತಿ

Bigg Boss ಮನೆಗೆ ವರ್ತೂರು ಸಂತೋಷ್ : ಕಿಚ್ಚ ಕೊಟ್ಟೆ ಬಿಟ್ರು ಸುಳಿವು – varthur santhosh

ಕೊರಗಜ್ಜ koragajja ಸಿನಿಮಾಗೆ ಸಂಕಷ್ಟ : ಕಳಸದಲ್ಲಿ ನಡೆದ ಕಿರಿಕ್ ನ ಅಸಲಿ ಕಥೆಯೇನು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್