ಇದು ಎಷ್ಟರ ಮಟ್ಟಿಗೆ ಪ್ರಬಲವಾಗಿರುತ್ತದೆ ಅಂದ್ರೆ ಮಾನವನ ದೇಹವನ್ನು ಆವಿ ಮಾಡುವ ಸಾಮರ್ಥ್ಯ ಹೊಂದಿದೆ.
ನವದೆಹಲಿ : ಯುದ್ದ ಪ್ರಾರಂಭವಾಗಿ 6 ದಿನ ಕಳೆದಿದೆ. ಹಾಗಿದ್ದರೂ ಉಕ್ರೇನ್ ರಾಜಧಾನಿ ಕೀವ್ ಅನ್ನು ವಶಪಡಿಸಿಕೊಳ್ಳಲು ರಷ್ಯಾ ಸೇನೆ ತಿಣಕಾಡುತ್ತಿದೆ. ಉಕ್ರೇನ್ ತೀವ್ರ ಪ್ರತಿರೋಧ ಒಡ್ಡುತ್ತಿರುವ ಕಾರಣ ಪ್ರಬಲ ರಷ್ಯಾ ಸೇನೆ ಗೆಲುವು ಸಾಧಿಸಲು ವಿಫಲವಾಗಿದೆ.
ಹೀಗಾಗಿಯೇ ಘನಘೋರ ಯುದ್ದಕ್ಕೆ ಸಿದ್ದವಾಗಿರುವ ರಷ್ಯಾ, 64 ಕಿಮೀ ಉದ್ಧದ ಸೇನೆಯೊಂದಿಗೆ ರಷ್ಯಾ ಕೀವ್ ನತ್ತ ಹೆಜ್ಜೆ ಹಾಕಲಾರಂಭಿಸಿದೆ. ಭಾರೀ ಪ್ರಮಾಣದಲ್ಲಿ ಯೋಧರು, ಸೇನಾ ವಾಹನ, ಟ್ಯಾಂಕ್ ಗಳು ಇದರಲ್ಲಿ ಸೇರಿವೆ ಎಂದು ವರದಿಗಳು ಹೇಳಿವೆ.
ಈ ನಡುವೆ ಉಕ್ರೇನ್ ಸೇನೆಯ ಹೋರಾಟದ ಪರಿ ರಷ್ಯಾವನ್ನು ಕಂಗಾಲು ಮಾಡಿದೆ. ವಿದೇಶಗಳಿಂದ ಶಸ್ತ್ರಾಸ್ತ್ರ ನೆರವು ಹರಿದು ಬರಲಾರಂಭಿಸಿರುವುದು ರಷ್ಯಾದ ತಲೆನೋವಿಗೆ ಕಾರಣವಾಗಿದೆ. ಯುದ್ಧದ ಪ್ರಾರಂಭದಲ್ಲಿ ಇಂತಹ ಬೆಳವಣಿಗೆಯ ನಿರೀಕ್ಷೆ ಇರಲಿಲ್ಲ. ಹೀಗಾಗಿ ರಷ್ಯಾ ಅಣುಬಾಂಬ್ ಬಳಿಕದ ಅತ್ಯಂತ ಶಕ್ತಿಶಾಲಿ ಬಾಂಬ್ ಎಂದು ಕರೆಸಿಕೊಂಡಿರುವ vacuum bomb ಮತ್ತು ಕ್ಲಸ್ಟರ್ ಬಾಂಬ್ ಗಳ ದಾಳಿ ನಡೆಸಿದೆ ಅನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಉಕ್ರೇನ್ ಮಾನವಹಕ್ಕು ಸಂಘಟನೆಗಳು ಗಂಭೀರ ಆರೋಪ ಮಾಡಿದೆ.
ಏನಿದು ವ್ಯಾಕ್ಯೂಂ ಬಾಂಬ್….?
ಸಾಮಾನ್ಯ ಬಾಂಬ್ ಗಳು ನಿರ್ದಿಷ್ಟ ಸ್ಥಳದಲ್ಲಿ ಸ್ಫೋಟಗೊಂಡು, ಆ ಪ್ರದೇಶವನ್ನು ನಾಶಗೊಳಿಸುತ್ತದೆ. ಆದರೆ ಥರ್ಮೋಬೇರಿಕ್ ವ್ಯಾಕ್ಯೂಂ ಬಾಂಬ್ ಗಳು, ಸ್ಟೋಟದ ಸ್ಥಳದ ಸುತ್ತಮುತ್ತಲಿನ ಆಮ್ಲಜನಕವನ್ನು ಹೀರಿಕೊಂಡು ಅತ್ಯಧಿಕ ಉಷ್ಣಾಂಶದೊಂದಿಗೆ ಸ್ಫೋಟಗೊಳುತ್ತದೆ. ಇದು ಎಷ್ಟರ ಮಟ್ಟಿಗೆ ಪ್ರಬಲವಾಗಿರುತ್ತದೆ ಅಂದ್ರೆ ಮಾನವನ ದೇಹವನ್ನು ಆವಿ ಮಾಡುವ ಸಾಮರ್ಥ್ಯ ಹೊಂದಿದೆ.
ಪ್ರಸ್ತುತ ವರದಿ ಮತ್ತು ಉಕ್ರೇನ್ ಹೇಳಿಕೆಯನ್ನು ಗಮನಿಸಿದರೆ, ರಷ್ಯಾ ಯುದ್ಧ ನೀತಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಹತಾಶೆಗೆ ಒಳಗಾಗಿರುವ ರಷ್ಯಾ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಗಾಳಿಗೆ ತೂರಿ ವ್ಯಾಕ್ಯೂಂ ಬಾಂಬ್ ಮತ್ತು ಕ್ಲಸ್ಟರ್ ಬಾಂಬ್ ಗಳನ್ನು ಪ್ರಯೋಗಿಸಿದಂತಿದೆ. ಮತ್ತೊಂದು ಕಡೆ CNN ಉಕ್ರೇನ್ ಗಡಿ ಭಾಗದಲ್ಲಿ ರಷ್ಯಾದ ಥರ್ಮೋಬೇರಿಕ್ ರಾಕೆಟ್ ಲಾಂಚರ್ ಗಳನ್ನು ತಾನು ನೋಡಿರುವುದಾಗಿ ವರದಿ ಮಾಡಿದೆ.
Discussion about this post