ಬೆಂಗಳೂರಿನಲ್ಲಿ ಟಿವಿ9 ವಾಹಿನಿಗೆ ಬಂದಿದ್ದ ನರೇಶ್ ಉಳಿದ ಮಾಧ್ಯಮ ಲೋಗೋ ಕಂಡು ಪರಾರಿಯಾಗಿದ್ದಾರೆ
ಬೆಂಗಳೂರು : ತೆಲುಗು ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ ನಡುವಿನ ಸಂಬಂಧದ ಸುದ್ದಿ ಇದೀಗ ಹಾಟ್ ಟಾಪಿಕ್ ಆಗಿದೆ. ತೆಲುಗು ಮಾಧ್ಯಮಗಳಲ್ಲಿ ವರ್ಣರಂಜಿತವಾಗಿ ಪ್ರಸಾರವಾಗುತ್ತಿದ್ದ ನರೇಶ್ ನಾಲ್ಕನೇ ಮದುವೆ ಮತ್ತು ಪವಿತ್ರಾ ಲೋಕೇಶ್ ಮೂರನೇ ಮದುವೆ ಸುದ್ದಿ ಇದೀಗ ಕನ್ನಡದಲ್ಲೂ ಸದ್ದು ಮಾಡಲಾರಂಭಿಸಿದೆ.
ನಿನ್ನೆಯಷ್ಟೇ ಪವರ್ ಟಿವಿಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದ ಪವಿತ್ರಾ ಲೋಕೇಶ್ ಇಬ್ಬರ ನಡುವಿನ ಸಂಬಂಧ ಕುರಿತಂತೆ ಅನುಮಾನ ಹುಟ್ಟಿಸಿದ್ದರು. ಈ ನಡುವೆ ನರೇಶ್ ಮೂರನೇ ಪತ್ನಿ ರಮ್ಯ ಕೂಡಾ ಗರಂ ಆಗಿದ್ದು, ಡಿವೋರ್ಸ್ ಕೊಡುವ ಪ್ರಶ್ನೆಯೇ ಇಲ್ಲ ಅಂದಿದ್ದಾರೆ. ಈ ಎಲ್ಲದರ ನಡುವೆ ಸುಚೇಂದ್ರ ಪ್ರಸಾದ್ ಬಗ್ಗೆ ಸಾಂತ್ವನದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.
ಇನ್ನು ಪವಿತ್ರಾ ಮತ್ತು ತಮ್ಮ ಸಂಬಂಧ ಕುರಿತಂತೆ ಮೌನಕ್ಕೆ ಶರಣಾಗಿದ್ದ ನರೇಶ್, ಇಂದು ಬೆಂಗಳೂರಿನಲ್ಲಿ ಪ್ರತ್ಯಕ್ಷರಾಗಿದ್ದಾರೆ. ಬೆಂಗಳೂರಿನ ಟಿವಿ9 ಕಚೇರಿಗೆ ಬಂದಿದ್ದ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ರಮ್ಯಾ ಆರೋಪ ಕುರಿತಂತೆ ಸ್ಪಷ್ಟನೆ ಕೊಡಲು ಅವರು ಟಿವಿ9 ಕಚೇರಿಗೆ ಬಂದಿದ್ದರು.
ಸಂದರ್ಶನದ ಬಳಿಕ ಹೊರಗೆ ಬಂದ ನರೇಶ್ ಅವರನ್ನು ಕನ್ನಡದ ಇತರ ಸುದ್ದಿ ವಾಹಿನಿಗಳ ವರದಿಗಾರರು ಅಡ್ಡ ಹಾಕಿದ್ದಾರೆ. ಪ್ರತಿಕ್ರಿಯೆ ಕೇಳಿದಾಗ, ಮಾತನಾಡಲು ನಿರಾಕರಿಸಿದ ಅವರು “ ನಾನು ನಿಮ್ಮ ಜೊತೆಗೆ ಮಾತನಾಡುತ್ತೇನೆ. ನನಗೊಂದು ಕಾರ್ಯಕ್ರವಿದೆ. ಸತ್ಯ ಹೇಳುತ್ತೇನೆ. ನಮಗೆ ನ್ಯಾಯ ಬೇಕಿದೆ ” ಎಂದು ಮುಂದಕ್ಕೆ ಹೋಗಿದ್ದಾರೆ.
Discussion about this post