ನವದೆಹಲಿ : ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇರಳ ಸರ್ಕಾರ ಸಂಪೂರ್ಣ ಎಡವಿದೆ. ಶೈಲಜಾ ಟೀಚರ್ ಅವರನ್ನು ಸಚಿವ ಸ್ಥಾನದಿಂದ ಇಳಿಸಿದ ಕಾರಣದಿಂದಲೇ ಸೋಂಕು ಈ ಪರಿ ಏರುತ್ತಿದೆ ಎನ್ನಲಾಗಿದೆ. ಹೊಸದಾಗಿ ಬಂದಿರುವ ಆರೋಗ್ಯ ಸಚಿವರಿಗೆ ಅನುಭವದ ಕೊರತೆ ಕಾಡುತ್ತಿದೆ. ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಅವರು ಕುಣಿಯಬೇಕಾಗಿದೆ.ಹೀಗಾಗಿ ವಿಶ್ವದ ಮುಂದೆ ಪಿಣರಾಯಿ ವಿಜಯನ್ ಕೇರಳದ ಮರ್ಯಾದೆಯನ್ನು ಹರಾಜು ಹಾಕುತ್ತಿದ್ದಾರೆ ಅನ್ನುವ ಆರೋಪ ಕೇಳಿ ಬಂದಿದೆ.

ಕುಂಭ ಮೇಳಕ್ಕೆ ಅನುಮತಿ ಕೊಟ್ಟ ಕಾರಣಕ್ಕಾಗಿ ಗಂಟಲು ಹರಿದು ಹೋಗುವಂತೆ ಕಿರುಚಿದ್ದರು. ಆದರೆ ಕೇರಳದಲ್ಲಿ ಏರುತ್ತಿರುವ ಕೊರೋನಾ ಸೋಂಕಿನ ಬಗ್ಗೆ ಇವೆರಲ್ಲ ಮೌನವಾಗಿದ್ದಾರೆ ಅನ್ನುವ ಆಕ್ರೋಶ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗಿದ್ದು, ಟ್ವಿಟರ್ ನಲ್ಲಿ ಕೇರಳವನ್ನು ಹಿಗ್ಗಾಮುಗ್ಗಾ ಜಾಡಿಸಲಾಗುತ್ತಿದೆ. ಕೊರೋನಾ ಅಬ್ಬರಿಸುತ್ತಿದ್ದಾಗಲೇ ಬಕ್ರೀದ್ ಕಾರಣಕ್ಕಾಗಿ ಲಾಕ್ ಡೌನ್ ಸಡಿಲಿಕೆ ಮಾಡಿ ಕೇರಳವನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಅನ್ನುವ ಆರೋಪವೂ ಕೇಳಿ ಬಂದಿದೆ.
Discussion about this post