ಮೈಸೂರು : ಸಿಎಂ ಯಡಿಯೂರಪ್ಪ ಅವರ ಮನೆಯ ಸದಸ್ಯರನ್ನು ರಾಜಕೀಯವಾಗಿ ಬೆಳೆಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ. ಬೇರೆ ಪಕ್ಷದ ಕುಟುಂಬ ರಾಜಕಾರಣವನ್ನು ಟೀಕಿಸುವ ಬಿಜೆಪಿಗೆ ಯಡಿಯೂರಪ್ಪ ಮನೆಯ ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.
ಈ ನಡುವೆ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣದ ಬಗ್ಗೆ ಮೂಲ ಬಿಜೆಪಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ಅವರನ್ನು ನಂಬಿ ಬಿಜೆಪಿಗೆ ಬಂದಿರುವ ಮುಂಬೈ ಬಾಯ್ಸ್ ಖ್ಯಾತಿಯ ಮಿತ್ರ ಮಂಡಳಿ ಸದಸ್ಯರು ಪಕ್ಷಕ್ಕಿಂತಲೂ ವ್ಯಕ್ತಿಗೆ ಸಿಕ್ಕಾಪಟ್ಟೆ ನಿಷ್ಟೆ ಹೊಂದಿದ್ದಾರೆ.
ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ಸಚಿವ ಎಸ್.ಟಿ. ಸೋಮಶೇಖರ್ ಕೊಟ್ಟಿರುವ ಹೇಳಿಕೆ.

ಮೈಸೂರಿನಲ್ಲಿ ಮಾತನಾಡಿರುವ ಸೋಮಶೇಖರ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಕರ್ನಾಟಕದ ಮುಂದಿನ ರಾಜಾಹುಲಿ ಅಂದಿದ್ದಾರೆ.
ಒಳ್ಳೆಯ ಜನ ನಾಯಕನಾಗುವ ಎಲ್ಲಾ ಲಕ್ಷಣಗಳು ವಿಜಯೇಂದ್ರ ಅವರಿಗಿದೆ. ನೂರಾರು ಉಳಿಪೆಟ್ಟು ತಿಂದು ಸುಂದರ ಶಿಲೆಯಾಗುತ್ತದೆ. ಅದೇ ರೀತಿ ವಿಜಯೇಂದ್ರ ಅವರಿಗೆ ಪೆಟ್ಟು ಬಿದ್ದಿದೆ. ಎಷ್ಟೇ ಪೆಟ್ಟು ಬೀಳಲಿ ಅವರು ಮುನ್ನುಗುತ್ತಿದ್ದಾರೆ. ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಕೆಲಸ ಮಾಡುತ್ತಾರೆ ಎಂದು ಬಣ್ಣಿಸಿದರು.
Discussion about this post