ವಿಶ್ವವನ್ನು ತಲ್ಲಣಗೊಳಿಸಿರುವ ಚೈನಾ ವೈರಸ್ ಸೋಲಿಸುವ ಸಲುವಾಗಿ ಈಗಾಗಲೇ ಅನೇಕ ಕಂಪನಿಗಳ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಿವೆ. ಪ್ರಯೋಗ ಶಾಲೆಯಲ್ಲಿ ಉತ್ತಮ ಫಲಿತಾಂಶ ತೋರಿದ್ದ ಲಸಿಕೆಗಳು ಇದೀಗ ನಿಜವಾಗಿಯೋ ಹೇಗೆ ಕೆಲಸ ಮಾಡುತ್ತದೆ ಅನ್ನುವುದು ಕೆಲವೇ ತಿಂಗಳುಗಳಲ್ಲಿ ಗೊತ್ತಾಗಲಿದೆ.
ಈ ನಡುವೆ ಭಾರತದಲ್ಲಿ 2021ರ ಜನವರಿಯಲ್ಲಿ ತುರ್ತು ಕೊರೋನಾ ಲಸಿಕೆ ಹಂಚಿಕೆ ಆರಂಭವಾಗುವ ನಿರೀಕ್ಷೆ ಇದೆ. ಅಚ್ಚರಿ ಅಂದ್ರೆ ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಸಿಕೆ ಸಿಗುವ ಸಾಧ್ಯತೆಗಳಿದೆಯಂತೆ.
ಈ ಬಗ್ಗೆ ಪುಣೆಯ ಸೀರಂ ಇನ್ ಸ್ಟಿಟ್ಯೂಟ್ ನ CEO ಆದರ್ ಪೂನವಾಲಾ ಮಾಹಿತಿ ಹಂಚಿಕೊಂಡಿದ್ದು, ಅಕ್ಟೋಬರ್ ವೇಳೆಗೆ ಎಲ್ಲರಿಗೂ ಲಸಿಕೆ ದೊರೆತು ಕೊರೋನಾ ಪೂರ್ವದ ಸಹಜ ಸ್ಥಿತಿಗೆ ಭಾರತ ಮರಳಲಿದೆ ಅನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೀರಂ ಸಂಸ್ಥೆ ಆಕ್ಸ್ ಫರ್ಡ್ ಸಂಶೋಧಿಸಿರುವ ಕೋವಿಶೀಲ್ಡ್ ಲಸಿಕೆಯ ಪ್ರಯೋಗ ನಡೆಸುತ್ತಿದ್ದು, ಡಿಸೆಂಬರ್ ಅಂತ್ಯಕ್ಕೆ ತುರ್ತು ಬಳಕೆಯ ಅನುಮತಿ ಪಡೆಯುವ ನಿರೀಕ್ಷೆಯಲ್ಲಿದೆ.
ಈಗಾಗಲೇ ತುರ್ತು ಬಳಕೆಯ ಸಲುವಾಗಿ ಕೇಂದ್ರ ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿದ್ದು, ಲಸಿಕೆ ಅನುಮೋದನಾ ಸಮಿತಿ ಲಸಿಕೆಯ ಸುರಕ್ಷತೆ ಕುರಿತಂತೆ ಮತ್ತಷ್ಟು ಅಂಕಿ ಅಂಶಗಳನ್ನು ಕೇಳಿದ್ದಾರೆ.
ತುರ್ತು ಬಳಕೆಯ ಅನುಮತಿ ದೊರೆತರೆ ಕೊರೋನಾ ವಾರಿಯರ್ಸ್ ಮತ್ತು ಹೈ ರಿಸ್ಕ್ ವರ್ಗದ ಮಂದಿಗೆ ಲಸಿಕೆ ನೀಡಲಾಗುತ್ತದೆ.
ಇದಾದ ಬಳಿಕ ಎಲ್ಲಾ ಜನರಿಗೂ ಲಸಿಕೆ ಹಂಚಿಕೆ ಪ್ರಾರಂಭವಾಗಲಿದೆ.
Discussion about this post