ಬೆಂಗಳೂರಿನಲ್ಲಿ ಪೀಕ್ ಹವರ್ ನಲ್ಲಿ ಒಂದು ಕಿಲೋ ಮೀಟರ್ ರಸ್ತೆಯನ್ನು ಒಂದು ಗಂಟೆ ಬೇಕಾಗುತ್ತದೆ. ಅಷ್ಟೊಂದು ಟ್ರಾಫಿಕ್ ಜಾಮ್. ಅಯ್ಯೋ ಯಾರಪ್ಪ ಕಾರು ಡ್ರೈವ್ ಮಾಡ್ತಾರೆ, ಬೈಕ್ ರೈಡಿಂಗ್ ಸಹವಾಸ ಸಾಕಪ್ಪ ಎಂದು App ಆಧಾರಿತ ಟ್ಯಾಕ್ಸಿ ಹತ್ತಿದ್ರು ಸರಿಯಾದ ಸಮಯಕ್ಕೆ ಸೇರಬೇಕಾದ ಜಾಗವನ್ನು ಸೇರಲು ಸಾಧ್ಯವಾಗೋದಿಲ್ಲ.
ಇದೀಗ ಇದಕ್ಕೆ ಪರಿಹಾರ ಅನ್ನುವಂತೆ ಕ್ಯಾಬ್ ಸೇವೆಯನ್ನು ನೀಡುವ ಉಬರ್ ಕಂಪನಿ,ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಜನರನ್ನು ಸರಿಯಾದ ಸಮಯಕ್ಕೆ ಸರಿಯಾದ ತಲುಪಿಸುವ ಉದ್ದೇಶದಿಂದ ಉಬರ್ ಎಲಿವೇಟ್ ಸಂಸ್ಥೆಯು ತನ್ನ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆಯಾದ ಉಬರ್ ಏರ್ ಸೇವೆಯನ್ನು ಅಮೇರಿಕಾದ ಲಾಸ್ ಏಂಜಲೀಸ್ ಹಾಗೂ ಡಲ್ಲಾಸ್ ನಗರಗಳಲ್ಲಿ ನೀಡಲಿದೆ.
ಈಗಿನ ಯೋಜನೆಯ ಪ್ರಕಾರ 2020ರಲ್ಲಿ ಈ ಸೇವೆ ಪ್ರಾರಂಭಗೊಳ್ಳಲಿದೆ. ಒಂದು ವೇಳೆ ಅಸಾಧ್ಯವಾದರೆ 2023ಕ್ಕೆ ಉಬರ್ ಏರ್ ಟ್ಯಾಕ್ಸಿ ಆಗಸಕ್ಕೆ ನೆಗೆಯೋದು ಪಕ್ಕಾ ಅನ್ನಲಾಗಿದೆ.
ಮೆಲ್ಬೋರ್ನ್ನಲ್ಲಿ 19 ಕಿ.ಮೀ ದೂರವನ್ನು ರಸ್ತೆ ಮೂಲಕ ತಲುಪಲು 25 ನಿಮಿಷಗಳು ಬೇಕಾದರೆ, ಅದೇ ದೂರವನ್ನು ಏರ್ ಟ್ಯಾಕ್ಸಿಯ ಮೂಲಕ ಕೇವಲ 10 ನಿಮಿಷದಲ್ಲಿ ತಲುಪಬಹುದಾಗಿದೆ.
ಇನ್ನು ಉಬರ್ ಏರ್ ಟ್ಯಾಕ್ಸಿ ಸೇವೆಗೆ ಭಾರತವು ದೊಡ್ಡ ಮಾರುಕಟ್ಟೆ ಅನ್ನುವುದು ಸಂಸ್ಥೆಯ ಸರ್ವೆಯಿಂದ ಗೊತ್ತಾಗಿದೆ. ಹೀಗಾಗಿ ಮೊದಲ ಹಂತದ ಏರ್ ಟ್ಯಾಕ್ಸಿ ಸೇವೆ ಯಶಸ್ಸು ಕಂಡ ಬೆನ್ನಲ್ಲೇ ಭಾರತದಲ್ಲೂ ಪರೀಕ್ಷಾರ್ಥ ಹಾರಾಟ ನಡೆಯಲಿದೆ.
ಭಾರತದಲ್ಲಿ ಇಕ್ಕಟ್ಟಾದ ರಸ್ತೆಗಳೇ ತುಂಬಿರುವುದರಿಂದ ಏರ್ ಟ್ಯಾಕ್ಸಿ ಸೇವೆಯು ಭಾರತದಲ್ಲಿ ಹೆಚ್ಚು ಜನಪ್ರಿಯವಾಗುವ ಸಾಧ್ಯತೆಗಳಿವೆ.
ಇನ್ನು ಇದು ಪರಿಸರ ಸ್ನೇಹಿ ಯೋಜನೆಯಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ 100 ಕಿ.ಮೀ ವರೆಗಿನ ದೂರವನ್ನು 240 ಕಿ.ಮೀ ವೇಗದಲ್ಲಿ ಕ್ರಮಿಸಲಿದೆ. ಇನ್ನು ಈ ಟ್ಯಾಕ್ಸಿಯಲ್ಲಿ 4 ಪ್ರಯಾಣಿಕರು ಹಾಗೂ ಒಬ್ಬ ಪೈಲಟ್ ಪ್ರಯಾಣಿಸಬಹುದಾಗಿದೆ.
ಹಾಗಾದ್ರೆ ಉಬರ್ ಏರ್ ಟ್ಯಾಕ್ಸಿ ಸೇವೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನುವುದನ್ನು ಈ ಪುಟ್ಟ ವಿಡಿಯೋ ಮೂಲಕ ತಿಳಿದುಕೊಳ್ಳಬಹುದು.
ಅಂದ ಹಾಗೇ ಉಬರ್ ಏರ್ ಟ್ಯಾಕ್ಸಿ ಸೇವೆ ಭವಿಷ್ಯದಲ್ಲಿ ಏರ್ ಟ್ಯಾಕ್ಸಿ ಕಾರ್ ಟ್ಯಾಕ್ಸಿ ಸೇವೆಗಿಂತಲೂ ಅಗ್ಗವಾಗಲಿದೆಯಂತೆ.
Discussion about this post