ಲಾರ್ಡ್ಸ್: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ತಂಡದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಜೋಡಿ 69 ವರ್ಷಗಳ ಹಳೆಯ ದಾಖಲೆಯನ್ನು ಮೀರಿಸಿದ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಭರ್ಜರಿಯಾಗಿ ಆಟ ಪ್ರಾರಂಭಿಸಿದರು. ರೋಹಿತ್ ಮತ್ತು ರಾಹುಲ್ ತಮ್ಮ 100 ರನ್ ಆರಂಭಿಕ ಜೊತೆಯಾಟದೊಂದಿಗೆ ಟೆಸ್ಟ್ ನಲ್ಲಿ ಭಾರತದ 69 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು.
1952ರ ನಂತರ ಮೊದಲ ಬಾರಿಗೆ ಲಾರ್ಡ್ಸ್ನಲ್ಲಿ ಭಾರತದ ಮೊದಲ 100 ರನ್ ಗಳ ಜೊತೆಯಾಟ ದಾಖಲಾಗಿತ್ತು. ನಂತರ ಇದೀಗ ಇವರಿಬ್ಬರು 1952ರಲ್ಲಿ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 106 ರನ್ ಗಳ ಆರಂಭಿಕ ಜೊತೆಯಾಟವನ್ನು ಮುರಿದಿದ್ದಾರೆ.
Discussion about this post