ನವದೆಹಲಿ : ಕೊರೋನಾ ಸಂದರ್ಭದಲ್ಲಿ ಜನಪ್ರಿಯತೆಯನ್ನು ಪಡೆದ ಕ್ಲಬ್ ಹೌಸ್ ಬಳಕೆದಾರರ ಮೊಬೈಲ್ ಸಂಖ್ಯೆಗಳು ಸೋರಿಕೆಯಾಗಿದೆ ಅನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಡಾರ್ಕ್ ನೆಟ್ ನಲ್ಲಿ ಕ್ಲಬ್ ಹೌಸ್ ಬಳಕೆದಾರರ ಫೋನ್ ನಂಬರ್ ಮಾರಾಟಕ್ಕಿದೆ ಎಂದು ಸೈಬರ್ ತಜ್ಞ ಜಿತೆನ್ ಜೈನ್ ಟ್ವೀಟ್ ಮಾಡಿದ್ದಾರೆ.
ಕೇವಲ ಬಳಕೆದಾರರ ಸಂಖ್ಯೆ ಮಾತ್ರವಲ್ಲ, ಬಳಕೆದಾರರ ಮೊಬೈಲ್ ನಲ್ಲಿ ,ಸೇವ್ ಮಾಡಲ್ಪಟ್ಟ ಸಂಖ್ಯೆಗಳು ಕೂಡಾ ಮಾರಾಟಕ್ಕೆ ಇಡಲಾಗಿದೆಯಂತೆ. ಅಂದ್ರೆ ಕ್ಲಬ್ ಹೌಸ್ ಸಹವಾಸದಿಂದ ದೂರವುಳಿದವರ ಸಂಖ್ಯೆಗಳು ಕೂಡಾ ಬಟಾಬಯಲಾಗಿದೆ ಅನ್ನುವುದು ಸ್ಪಷ್ಟ. ಆದರೆ ಸೋರಿಕೆ ಬಗ್ಗೆ ಕ್ಲಬ್ ಹೌಸ್ ಯಾವುದೇ ಸ್ಪಷ್ಟನೆಯನ್ನು ಕೊಟ್ಟಿಲ್ಲ.
ಈ ಬಗ್ಗೆ ಸೈಬರ್ ಸೆಕ್ಯೂರಿಟಿ ತಜ್ಞ ರಾಜಶೇಖರ್ ರಾಜಹರಿಯಾ ಕೂಡಾ ಮಾತನಾಡಿದ್ದು ಹ್ಯಾಕರ್ ಗಳು ಕ್ಲಬ್ ಹೌಸ್ ಅನ್ನು ಹ್ಯಾಕ್ ಮಾಡಿದ್ದು, ಡೇಟಾವನ್ನು ಮಾರಾಟ ಮಾಡುತ್ತಿದ್ದಾರೆ ಅನ್ನುವ ಆತಂಕದ ಸುದ್ದಿಯನ್ನು ದೃಢಪಡಿಸಿದ್ದಾರೆ.
ಹೀಗೆ ನಂಬರ್ ಗಳು ಸೋರಿಕೆಯಾಗಿರುವುದರಿಂದ ಅಪರಾಧ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಕೆಯಾಗಿರುವ ಸಾಧ್ಯತೆಗಳಿದೆ ಎನ್ನಲಾಗಿದೆ.
Discussion about this post