ನವದೆಹಲಿ : ಮಾಡಬಾರದ ಟ್ವೀಟ್ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿಯ ಟ್ವಿಟರ್ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಇದೀಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಖಾತೆಯನ್ನೇ ಟ್ವಿಟರ್ ಬ್ಲಾಕ್ ಮಾಡಿದೆ.ಟ್ವಿಟರ್ ನಿಯಮಗಳನ್ನು ಉಲ್ಲಂಘಟನೆ ಮಾಡಿದ ಆರೋಪದಡಿಯಲ್ಲಿ ಈ ನಿರ್ಧಾರವನ್ನು ಸಂಸ್ಥೆ ಕೈಗೊಂಡಿದೆ.
ಆದರೆ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟರ್ ಈ ನಿರ್ಧಾರ ಕೈಗೊಂಡಿದೆ ಅನ್ನುವುದು ಕಾಂಗ್ರೆಸ್ ಆರೋಪ. ಹಾಗಂತ ಕಾರಣವಿಲ್ಲದೆ ಟ್ವಿಟರ್ ಖಾತೆಯನ್ನು block ಮಾಡಿದ್ರೆ ಟ್ವಿಟರ್ ಅದಕ್ಕೆ ದಂಡ ತೆರಬೇಕಾಗುತ್ತದೆ. ಆದರೆ ರಾಹು ಗಾಂಧಿ ಟ್ವಿಟರ್ ಅಕೌಂಟ್ ವಿಷಯದಲ್ಲಿ ಹೀಗಾಗಿಲ್ಲ.
ದೆಹಲಿಯಲ್ಲಿ ಇತ್ತೀಚೆಗೆ ಗ್ಯಾಂಗ್ ರೇಪ್ ಗೆ ಒಳಗಾಗಿ ಕೊಲೆಯಾಗಿದ್ದ 9 ವರ್ಷದ ದಲಿತ ಹುಡುಗಿಯ ನಿವಾಸಕ್ಕೆ ರಾಹುಲ್ ಗಾಂಧಿ ತೆರಳಿದ್ದರು. ಈ ವೇಳೆ ರಾಹುಲ್ ಗಾಂಧಿ ಪಾಲಕರ ಫೋಟೋ ಟ್ವೀಟ್ ಮಾಡಿದ್ದರು. ಭಾರತೀಯ ಕಾನೂನು ಪ್ರಕಾರ ಇದು ತಪ್ಪು. ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ ಹೇಳಿತ್ತು. ಆ ಬಳಿಕ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿತ್ತು.
ಇದೀಗ ಕಾಂಗ್ರೆಸ್ ಪಕ್ಷದ ಖಾತೆಯನ್ನು ರದ್ದುಗೊಳಿಸಿರುವುದಕ್ಕೆ ಕಾರಣವೇನು ಅನ್ನುವುದು ಇನ್ನೂ ಗೊತ್ತಾಗಿಲ್ಲ.
Discussion about this post