ದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಭೀಕರವಾಗಿದೆ. ಸೋಂಕು ನಿಯಂತ್ರಿಸಬೇಕಾದವರ ಕೈ ಮೀರಿದ್ದು, ಅದರ ಪಾಡಿಗೆ ಸೋಂಕು ನಿಯಂತ್ರಣಕ್ಕೆ ಬರಬೇಕು ಹೊರತು ಅನ್ಯ ಮಾರ್ಗವಿಲ್ಲದಂತಾಗಿದೆ. ಹಾಗೂ ಸೋಂಕು ನಿಯಂತ್ರಣವಾಗಬೇಕು ಅನ್ನುವುದಾದರೆ ಜನ ಮನೆ ಬಿಟ್ಟು ಹೊರಬರಬಾರದು. ಪ್ರಸ್ತುತ ಸ್ಥಿತಿಯಲ್ಲಿ ಅದು ಆಗುವ ಮಾತುಗಳಲ್ಲ.
ಈ ನಡುವೆ ಕೊರೊನಾ ಸೋಂಕಿತರಾಗಿದ್ದ ಖ್ಯಾತ ಪತ್ರಕರ್ತ ರೋಹಿತ್ ಸರ್ದಾನ ನಿಧನರಾಗಿದ್ದಾರೆ. ಆಜ್ ತಕ್ ಸುದ್ದಿವಾಹಿನಿಯ ಪತ್ರಕರ್ತರಾಗಿದ್ದ ಸರ್ದಾನ ಅವರು ಶುಕ್ರವಾರ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ.
ಏಪ್ರಿಲ್ 24ರಂದು ರೋಹಿತ್ ಸರ್ದಾನ ಅವರಿಗೆ ಕೊರೊನಾ ಸೋಂಕು ತಗಲಿತ್ತು. ಈ ಬಗ್ಗೆ ಸರ್ದಾನ ಅವರೇ ಟ್ವೀಟ್ ಮಾಡಿ, ಒಂದು ವಾರದ ಹಿಂದೆ ಜ್ವರ ಮತ್ತು ಇತರ ಲಕ್ಷಣ ಕಾಣಿಸಿಕೊಂಡಾಗ ಪರೀಕ್ಷೆ ನಡೆಸಿದೆ. RTPCR ನೆಗೆಟಿವ್ ಬಂತು. CTScan ಮಾಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ. ಈಗ ಆರೋಗ್ಯ ಸುಧಾರಿಸಿದೆ. ನೀವು ಕೂಡಾ ನಿಮ್ಮ ಮತ್ತು ನಿಮ್ಮ ಕುಟುಂಬದ ಕಾಳಜಿ ವಹಿಸಿ ಅಂದಿದ್ದರು.
ಸರ್ದಾನ ಸಾವಿಗೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕರು ಕಣ್ಣೀರು ಮಿಡಿದಿದ್ದಾರೆ. ಈ ನಡುವೆ ಸಹೋದ್ಯೋಗಿಯ ಸಾವಿನ ಸುದ್ದಿಯನ್ನು ಓದಿದ್ದ ಸುದ್ದಿ ವಾಚಕಿಯೊಬ್ಬರು ಕಣ್ಣೀರ ಕೋಡಿಯನ್ನೇ ಹರಿಸಿದ್ದಾರೆ.
Discussion about this post