ಎರಡು ದಿನಗಳ ಭಾರತ ಭೇಟಿ ಸಲುವಾಗಿ ಅಮೆರಿಕದಿಂದ ಗುಜರಾತ್ ಗೆ ಭೇಟಿ ನೀಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮಾ ಗಾಂಧಿಯವರ ಸಬರ್ ಮತಿ ಆಶ್ರಮಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್ ಬರೆದಿರೋ ಸಾಲುಗಳು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ. ಸಬರ್ ಮತಿ ಆಶ್ರಮದ ಸಂದರ್ಶಕರ ಪುಸ್ತಕದಲ್ಲಿ ಬರೆಯುವಾಗ ಟ್ರಂಪ್ ಮಹಾತ್ಮ ಗಾಂಧಿಯವರನ್ನೇ ಮರೆತಿದ್ದಾರೆ ಎಂದು ಹಲವಾರು ಮಂದಿ ಟೀಕಿಸುತ್ತಿದ್ದಾರೆ.
ನನ್ನ ಪ್ರಿಯ ಮಿತ್ರ ನರೇಂದ್ರ ಮೋದಿ, ಈ ಅತ್ಯದ್ಭುತ ಭೇಟಿಗಾಗಿ ಧನ್ಯವಾದಗಳು ಎಂದಷ್ಟೇ ಟ್ರಂಪ್ ಸಂದರ್ಶಕರ ಪುಸ್ತಕದಲ್ಲಿ ಬರೆದಿದ್ದರು. ಈ ಬಗ್ಗೆ ಕ್ಯಾತೆ ತೆಗೆದಿರುವ ನೆಟ್ಟಿಗರು 2010 ರಲ್ಲಿ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಮುಂಬೈ ನಲ್ಲಿದ್ದ ಗಾಂಧಿ ಅವರು ಇರುತ್ತಿದ್ದ ಮಣಿ ಭವನಕ್ಕೆ ಭೇಟಿ ನೀಡಿದ್ದಾಗ ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು.
2015 ರಲ್ಲಿ ರಾಜ್ ಘಾಟ್ ಗೆ ಭೇಟಿ ನೀಡಿದ್ದಾಗಲೂ ಸಹ ಬರಾಕ್ ಒಬಾಮ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಸ್ಮರಿಸಿದ್ದರು. ಆದರೆ ಡೊನಾಲ್ಡ್ ಟ್ರಂಪ್ ಮಾತ್ರ ಸಂದರ್ಶಕರ ಪುಸ್ತಕದಲ್ಲಿ ಮಹಾತ್ಮಾ ಗಾಂಧಿ ಅವರನ್ನು ಮರೆತಿದ್ದು ಬೇಸರದ ವಿಷಯವೇ ಸರಿ.
ಮಂಗಳವಾರ ರಾಜ್ ಘಾಟ್ ಗೆ ಟ್ರಂಪ್ ಭೇಟಿ ನೀಡುವ ವೇಳೆಯಾದರೂ ಮಹಾತ್ಮ ಗಾಂಧಿಯನ್ನು ಸ್ನರಿಸಿದರೆ ಸಾಕಿತ್ತು.
Discussion about this post