ಮಳೆ ನಿಂತರೂ ಹನಿ ನಿಂತಿಲ್ಲ ಅನ್ನುವಂತೆ ಇದೀಗ ಕರಾವಳಿಯಲ್ಲಿ ಮಳೆಯ ಹಾನಿ ನಿಂತಿಲ್ಲ. ಬೃಹತ್ ಮರವೊಂದು ಮನೆ ಮೇಲೆ ಬಿದ್ದು ಲಕ್ಷಾಂತರ ರೂಪಾಯಿ ( Mangalore Rain ) ನಷ್ಟ ಸಂಭವಿಸಿದೆ
ಬಂಟ್ವಾಳ : ಭಾರೀ ಗಾತ್ರದ ಮರವೊಂದು ತಡರಾತ್ರಿ ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮನೆ ಸಂಪೂರ್ಣ ಜಖಂಗೊಂಡ ಘಟನೆ ಮಾಣಿ- ಮೈಸೂರು ಹೆದ್ದಾರಿಯ ಕೊಡಾಜೆ ಎಂಬಲ್ಲಿ ನಡೆದಿದೆ. ( Mangalore Rain ) ಘಟನೆಯಲ್ಲಿ ಮನೆಯಲ್ಲಿದ್ದ ಮೂವರು ಅದೃಷ್ಟ ಅನ್ನುವಂತೆ ಪಾರಾಗಿದ್ದಾರೆ.
ಕೊಡಾಜೆಯ ( kodaje ) ಸಂಜೀವ ಶೆಟ್ಟಿ ಅನ್ನುವವರಿಗೆ ಸೇರಿದ ಮನೆ ಮೇಲೆ ಇದ್ದ ಮರ ಶುಕ್ರವಾರ ಮುಂಜಾನೆ 3 ಗಂಟೆ ಹೊತ್ತಿಗೆ ಮನೆ ಮೇಲೆ ಉರುಳಿ ಬಿದ್ದಿದೆ. ಮರ ಬೀಳುವ ರಭಸಕ್ಕೆ ಅಲ್ಲೇ ಇದ್ದ ತೆಂಗಿನ ಮರ ಕೂಡಾ ಮುರಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಮೂವರು ಕಾರ್ಮಿಕರು ಮಲಗಿದ್ದರು. ಅದೃಷ್ಟ ಅನ್ನುವಂತೆ ಯಾರಿಗೂ ಯಾವುದೇ ಅಪಾಯವಾಗಿಲ್ಲ.
ಇದನ್ನೂ ಓದಿ : LuLu mall namaz : ಲುಲು ಮಾಲ್ ನಲ್ಲಿ ನಮಾಜ್ : ಚಾಲೀಸಾ ಪಠಿಸಲು ಕೋರಿಕೆ
ಮರದ ಗೆಲ್ಲುಗಳು ಹೆದ್ದಾರಿಗೆ ಬಿದ್ದ ಕಾರಣ ಕೆಲ ಗಂಟೆ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಊರವರು ದೌಡಾಯಿಸಿದ್ದು ಪರಿಹಾರ ಕಾರ್ಯಕೈಗೊಂಡಿದ್ದಾರೆ. ಘಟನೆಯಲ್ಲಿ ಮನೆಗೆ ತೀವ್ರ ಹಾನಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಸದ ಲಾರಿಗೆ ದಂಪತಿ ಬಲಿ : ಹೆಣ್ಣು ಮಕ್ಕಳ ನೆರವಿಗೆ ಪಿಎಸ್ಐ ರೂಪಾ ಹಡಗಲಿ
ಪೊಲೀಸ್ ಇಲಾಖೆ ಸರಿ ಇಲ್ಲ ಕೆಟ್ಟು ಹೋಗಿದೆ ಅನ್ನುವ ಆರೋಪದ ನಡುವೆ ಅಪರೂಪಕ್ಕೆ ಒಳ್ಳೆಯ ಅಧಿಕಾರಿಗಳು ( Roopa Hadagali ಯಂತವರು ಸಿಗ್ತಾರೆ.
ಬೆಂಗಳೂರು : ಬಿಬಿಎಂಪಿ ಕಸದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮೃತಪಟ್ಟ ಘಟನೆ ಜುಲೈ 9 ರಂದು ಬೆಂಗಳೂರಿನಲ್ಲಿ ನಡೆದಿತ್ತು. ಯಮಸ್ವರೂಪಿ ಲಾರಿಯ ರಕ್ಕಸ ಕೃತ್ಯದಿಂದ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದರು. ಇದೀಗ ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ಬ್ಯಾಟರಾಯನಪುರ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ರೂಪಾ ಹಡಗಲಿ ಮಾನವೀಯತೆ ಮೆರೆದಿದ್ದಾರೆ.
ಜುಲೈ 9 ರಂದು ನಾಗರಬಾವಿ ರಿಂಗ್ ರೋಡ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಮಾನಸ ನಗರ ಬಸ್ ನಿಲ್ದಾಣ ಕಡೆಯಿಂದ ಚಂದ್ರ ಲೇಜೌಟ್ ಕಡೆಗೆ ತೆರಳುತ್ತಿದ್ದ ಕಸದ ಲಾರಿ, ಮುಂದೆ ಹೋಗುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದು ಇಬ್ಬರ ಬಲಿ ಪಡೆದಿತ್ತು. ಘಟನೆಯಲ್ಲಿ ಮರಿಯಪ್ಪನಪಾಳ್ಯದ ವಿಜಯಕಲಾ (37) ಚಿಕಿತ್ಸೆ ಫಲಕಾರಿಯಾದೇ ಅಂದೇ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ಅವರ ಪತಿ ಯೋಗೇಂದ್ರ ( 41 ) ಗುರುವಾರ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಈ ದಂಪತಿಗೆ 2 ಮತ್ತು 5ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಅಪ್ಪ ಅಮ್ಮನ ಚಿಕಿತ್ಸೆಗೆ ವೆಚ್ಚವಾಗಿದ್ದ 5.72 ಲಕ್ಷ ಬಿಲ್ ಪಾವತಿ ಮಾಡಲಾಗದೇ ಮಕ್ಕಳು ಕಂಗಾಲಾಗಿದ್ದರು. ಅಪಘಾತ ನಡೆದ ದಿನವೇ ಆಸ್ಪತ್ರೆಯ ವೆಚ್ಚವಾಗಿ 40 ಸಾವಿರ ಕಟ್ಟಿದ್ದ ಇನ್ಸ್ ಪೆಕ್ಟರ್ ರೂಪಾ ಹಡಗಲಿ, ಯೋಗೇಂದ್ರ ಮೃತಪಟ್ಟ ವಿಷಯವನ್ನು ಡಿಸಿಪಿ ಕುಲದೀಪ್ ಜೈನ್ ಗಮನಕ್ಕೆ ತಂದಿದ್ದಾರೆ. ಜೊತೆಗೆ ಮಕ್ಕಳ ಸಂಕಷ್ಟವನ್ನೂ ವಿವರಿಸಿದ್ದಾರೆ.
ತಕ್ಷಣ ರೂಪಾ ಹಡಗಲಿ ಜೊತೆಗೆ ಆಸ್ಪತ್ರೆಗೆ ಭೇಟಿ ಕೊಟ್ಟ ಕುಲದೀಪ್ ಜೈನ್ ಆಸ್ಪತ್ರೆ ಆಡಳಿತ ಮಂಡಳಿಯ ಮನವೊಲಿಸಿ ಅಷ್ಟೂ ಹಣವನ್ನು ಮನ್ನಾ ಮಾಡಿದ್ದಾರೆ. ಪೊಲೀಸರ ಪುಣ್ಯ ಕಾರ್ಯದಲ್ಲಿ ನಾಗರಬಾವಿ ಜಿಎಂ ಆಸ್ಪತ್ರೆ ಕೂಡಾ ಪಾಲು ಪಡೆಯುವ ಮೂಲಕ ಮಾನವೀಯತೆ ಮರೆದಿದೆ.
Discussion about this post