ಮಂಡ್ಯದಲ್ಲಿ ಸೋಲು ಭೀತಿ ಕಾಡುತ್ತಿರುವ ಹಿನ್ನಲೆಯಲ್ಲಿ ನಿಖಿಲ್ ಕುಮಾರಸ್ವಾಮಿ ( Nikhil Kumaraswamy) ರಾಮನಗರದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ ಅನ್ನಲಾಗಿದೆ.
ಬೆಂಗಳೂರು : ಕುಟುಂಬ ರಾಜಕಾರಣದ ಆರೋಪದಿಂದ ಮುಕ್ತವಾಗಲು ಜೆಡಿಎಸ್ ನಾಯಕರು ಪ್ರಯತ್ನಿಸುತ್ತಿರುವ ನಡುವೆಯೇ ರಾಮನಗರಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆಗೆ ಹಸಿರು ನಿಶಾನೆ ತೋರಲಾಗಿದೆ. ಹಿಂದೆ ಈ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಯಾಗಿದ್ದರು, ಬಳಿಕ ಅನಿತಾ ಕುಮಾರಸ್ವಾಮಿ ರಾಮನಗರದಿಂದ ವಿಧಾನಸಭೆ ಪ್ರವೇಶಿಸಿದ್ದರು. ಇದೀಗ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ( Nikhil Kumaraswamy) ಕಣಕ್ಕಿಳಿಸಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಮಜಾ ಅಂದ್ರೆ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರಿಂದ ಕಣಕ್ಕಿಳಿಯುವುದು ತಂದೆ ಕುಮಾರಸ್ವಾಮಿಯವರಿಗೆ ಗೊತ್ತಿರಲಿಲ್ಲವಂತೆ.( ನಂಬುವವರು ನಂಬಬಹುದು)( Nikhil Kumaraswamy)
ಇದನ್ನೂ ಓದಿ : Zika Virus : ಕರ್ನಾಟಕದಲ್ಲಿ ಮೊದಲ ಝೀಕಾ ವೈರಸ್ ಪತ್ತೆ : ಖಚಿತಪಡಿಸಿದ ಸಚಿವ : ರಾಜ್ಯದಲ್ಲಿ ಆತಂಕ
ಜೆಡಿಎಸ್ ನ ಪಂಚರತ್ನ ರಥಯಾತ್ರೆಯ ಭಾಗವಾಗಿ ರಾಮನಗರದ ಹಳೆಯ ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅನಿತಾ ಕುಮಾರಸ್ವಾಮಿ, ನಮ್ಮ ಮಾವ, ಪತಿ ಹಾಗೂ ನನಗೆ ಕೊಟ್ಟ ಬೆಂಬಲವನ್ನು ನನ್ನ ಮಗನಿಗೂ ಕೊಡಬೇಕು. ಮುಂಬರುವ ಚುನಾವಣೆ ಅಭ್ಯರ್ಥಿಯಾಗಿ ನಿಖಿಲ್ ಹೆಸರು ಘೋಷಿಸುತ್ತಿದ್ದೇನೆ ಅಂದರು. ಕ್ಷೇತ್ರವೊಂದಕ್ಕೆ ಅಭ್ಯರ್ಥಿಯ ಹೆಸರನ್ನು ಶಾಸಕಿ ಅನಿತಾ ಕುಮಾರಸ್ವಾಮಿ ಘೋಷಿಸುವ ಮೂಲಕ ಜೆಡಿಎಸ್ ನಲ್ಲಿ ನಾನು ಕೂಡಾ ಹೈಕಮಾಂಡ್ ಅನ್ನುವುದನ್ನು ಪರೋಕ್ಷವಾಗಿ ಸಾರಿದ್ದಾರೆ. ( ಸಹಜವಾಗಿ ಅಭ್ಯರ್ಥಿಗಳ ಹೆಸರನ್ನು ಪಕ್ಷದ ರಾಜ್ಯಾಧ್ಯಕ್ಷರು ಅಥವಾ ವಕ್ತಾರರು ಘೋಷಿಸಿವುದು ವಾಡಿಕೆ)
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ನಿಖಿಲ್ ಸ್ಪರ್ಧಿಸಬೇಕೋ ಬೇಡವೋ ಅನ್ನುವುದನ್ನು ಕಾರ್ಯಕರ್ತರ ನಿರ್ಧಾರಕ್ಕೆ ಬಿಟ್ಟಿರುವುದಾಗಿ ಹೇಳಿದ್ದರು. ಆದರೆ ಕಾರ್ಯಕ್ರಮದಲ್ಲಿ ಅದನ್ನು ಅನಿತಾ ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಇದನ್ನೂ ಓದಿ : Heart attack : ಸಮಾರಂಭದಲ್ಲಿ ಫೋಟೋ ತೆಗೆಯುತ್ತಿದ್ದಾಗಲೇ ಫೋಟೋಗ್ರಾಫರ್ ಗೆ ಹೃದಯಾಘಾತ
ಅನಿತಾ ಕುಮಾರಸ್ವಾಮಿ ಮಾತಿನ ಬಳಿಕ ಮಾತನಾಡಿದ ಕುಮಾರಸ್ವಾಮಿ, ತಮಗೂ ತಿಳಿಸದೆ ಅನಿತಾ ಅವರು ನೇರವಾಗಿ ಸಾರ್ವಜನಿಕವಾಗಿ ನಿಖಿಲ್ ಹೆಸರು ಘೋಷಿಸಿದ್ದಾರೆ. ನಿಖಿಲ್ ನನ್ನು ಇದೀಗ ಮತದಾರರ ಮಡಿಲಿಗೆ ಹಾಕಿದ್ದೇನೆ ಅವನ ರಾಜಕೀಯ ಬದುಕು ನಿಮಗೆ ಬಿಟ್ಟದ್ದು ಅಂದಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಮಂಡ್ಯದಿಂದ ಸ್ಪರ್ಧಿಸಿದ್ದರು. ಕುತಂತ್ರ ರಾಜಕಾರಣ ಅವರನ್ನು ಸೋಲಿಸಿತು. ಮಂಡ್ಯದ ಜನ ಸೋಲಿಸಲಿಲ್ಲ. ರಾಮನಗರದಲ್ಲೂ ಕುತಂತ್ರ ರಾಜಕಾರಣ ನಡೆಯಬಹುದು ಎಂದು ಕುಮಾರಸ್ವಾಮಿ ಆತಂಕ ಹೊರ ಹಾಕಿದ್ದಾರೆ.
Discussion about this post