ಮುಂಬೈ: ಕೊರೋನಾ ಸೋಂಕಿನ ಚಿಕಿತ್ಸೆ, ಕೊರೋನಾ ಲಸಿಕೆ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯಡವಟ್ಟುಗಳು ನಡೆಯುತ್ತಿದೆ. ಆರೋಗ್ಯ ಇಲಾಖೆ ಸುಸ್ತಾಗಿರುವುದೇ ಇದಕ್ಕೆ ಕಾರಣ. ಕೊರೋನಾ ಸೋಂಕು ಬಂದ ದಿನದಿಂದ ಆರೋಗ್ಯ ಇಲಾಖೆ ಸಿಬ್ಬಂದಿ ರಜೆ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ನಡುವೆ ಕೊರೋನಾ ಲಸಿಕೆ ಚುಚ್ಚಿಸಿಕೊಳ್ಳಲು ಬಂದವರಿಗೆ ರೇಬಿಸ್ ಲಸಿಕೆ ನೀಡಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ.
ಒಂದೇ ಆಸ್ಪತ್ರೆಯಲ್ಲಿ ರೇಬಿಸ್ ಲಸಿಕೆಯೂ ನಡೆಯುತ್ತಿತ್ತು. ಈ ವೇಳೆ ಕೊರೋನಾ ಲಸಿಕೆ ಹಾಕಿಸಲು ಬಂದವರು ರೇಬಿಸ್ ಲಸಿಕೆಗಾಗಿ ನಿಂತವರ ಕ್ಯೂ ಸೇರಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಸರದಿ ಬಂದಾಗದ ಏನನ್ನೂ ಕೇಳದ ವೈದ್ಯರು ರೇಬಿಸ್ ಲಸಿಕೆಯನ್ನೇ ಹಾಕಿದ್ದಾರೆ.
ನಂತರ ಎರಡನೆಯ ಲಸಿಕೆ ಹಾಕಿಸಿಕೊಳ್ಳಲು ಯಾವಾಗ ಬರಬೇಕು ಎಂದು ಯಾದವ್ ಕೇಳಿದಾಗಲೇ ವೈದ್ಯರಿಗೆ ತಿಳಿದದ್ದು ಅವರು ಬಂದಿದ್ದು ಕರೊನಾ ಲಸಿಕೆ ಹಾಕಿಸಿಕೊಳ್ಳಲು ಎಂದು.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ನನ್ನು ಅಮಾನತು ಮಾಡಲಾಗಿದೆ.
Discussion about this post