ಮುಂಬೈ : ದೊಡ್ಡ ಕನಸುಗಳೊಂದಿಗೆ ಮಾರುಕಟ್ಟೆಗೆ ಬಂದ ಎಲೆಕ್ಟಿಕ್ ಬೈಕ್ ಗಳು ಬೆಂಕಿಗೆ ತುತ್ತಾಗಲಾರಂಭಿಸಿದೆ. ಪರಿಸರ ಸ್ನೇಹಿಯಾಗುವ ಆಂದೋಲನಕ್ಕೆ ಇದರಿಂದ ದೊಡ್ಡ ಹಿನ್ನಡೆಯಾಗಿತ್ತು. ಈ ನಡುವೆ ಇದೀಗ ಮೊಟ್ಟ ಮೊದಲ ಬಾರಿಗೆ ಮುಂಬೈನಲ್ಲಿ ಎಲೆಕ್ಟಿಕ್ ಕಾರು ಬೆಂಕಿಗೆ ತುತ್ತಾಗಿದೆ.
ಟಾಟಾ ನೆಕ್ಸಾನ್ ಇ ಕಾರು ಮುಂಬೈನ ವಸಾಯಿ ಪಶ್ಚಿಮ ಭಾಗದಲ್ಲಿ ಬೆಂಕಿಗೆ ಆಹುತಿಯಾಗಿದೆ. ಮಾಹಿತಿಗಳ ಪ್ರಕಾರ ಕಾರಿನ ಮಾಲಕ ಆಫೀಸಿನಲ್ಲಿ ಕಾರನ್ನು ಜಾರ್ಜ್ ಮಾಡಿ, ಮನೆಯತ್ತ ತೆರುತ್ತಿದ್ದ. ಈ ವೇಳೆ ಕಾರಿಗೆ ಬೆಂಕಿ ತಗುಲಿದ್ದು, ಬಳಿಕ ಅಗ್ನಿಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಪ್ರಕರಣವನ್ನು ಕೇಂದ್ರ ಸಾರಿಗೆ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಆದೇಶಿಸಿದೆ. ಜೊತೆಗೆ ಟಾಟಾ ಸಂಸ್ಥೆ ಕೂಡಾ ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದೆ. ವಿವರವಾದ ತನಿಖೆಯ ಬಳಿಕ, ತನಿಖೆಯ ವಿವರಗಳನ್ನು ಬಹಿರಂಗಪಡಿಸುವುದಾಗಿ ಸಂಸ್ಥೆ ಹೇಳಿದೆ.
Discussion about this post