ಕರೂರ್ : ತಮಿಳುನಾಡು ರಾಜಕೀಯದಲ್ಲಿ ವಾಷಿಂಗ್ ಮಷೀನ್, ಗ್ರೈಂಡರ್, ಮಿಕ್ಸರ್, ಪ್ರೆಷರ್ ಕುಕ್ಕರ್, ಟಿವಿ ಹೀಗೆ ಗೃಹಪಯೋಗಿ ವಸ್ತುಗಳು ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಅದರಲ್ಲೂ ಚುನಾವಣೆ ಬಂತು ಅಂದ್ರೆ ಯಾವ ಪಕ್ಷ ಯಾವ ವಸ್ತುವನ್ನು ಉಚಿತವಾಗಿ ನೀಡುತ್ತದೆ ಎಂದು ಕಾಯುವವರೇ ಅಧಿಕ.
ಹಾಗಂತ ಇದೀಗ ಚುನಾವಣೆ ಬಂದಿಲ್ಲ, ಆದರೆ ವಾಷಿಂಗ್ ಮಷೀನ್, ಗ್ರೈಂಡರ್, ಮಿಕ್ಸರ್, ಪ್ರೆಷರ್ ಕುಕ್ಕರ್, ಟಿವಿ ಹೀಗೆ ಗೃಹಪಯೋಗಿ ವಸ್ತುಗಳನ್ನು ಗೆಲ್ಲುವ ಅವಕಾಶ ಕರೂರ್ ಜಿಲ್ಲೆಯ ನಾಗರಿಕರಿಗೆ ಒಲಿದು ಬಂದಿದೆ. ಹೌದು ಕರೂರ್ ನ ಜಿಲ್ಲಾಧಿಕಾರಿ ಟಿ ಪ್ರಭುಶಂಕರ್ ಈ ಯೋಜನೆಯನ್ನು ಪ್ರಕಟಿಸಿದ್ದು ಅಕ್ಟೋಬರ್ 10 ರಂದು ನಡೆಯಲಿರುವ ಬೃಹತ್ ಲಸಿಕಾ ಮೇಳದಲ್ಲಿ ಲಸಿಕೆ ಪಡೆದ ಅದೃಷ್ಟವಂತರು ಗೃಹಪಯೋಗಿ ವಸ್ತುಗಳನ್ನು ಗೆಲ್ಲಬಹುದು ಅಂದಿದ್ದಾರೆ.
ಲಸಿಕಾ ಮೇಳದಲ್ಲಿ ಅತಿ ಹೆಚ್ಚು ಜನ ಲಸಿಕೆ ಪಡೆಯುವುದನ್ನು ಉತ್ತೇಜಿಸುವ ಸಲುವಾಗಿ ಈ ಆಫರ್ ನ್ನು ಘೋಷಿಸಲಾಗಿದೆ. ಕೇವಲ ಅಷ್ಟೇ ಅಲ್ಲ, ಲಸಿಕೆ ಹಾಕಿಸಿಕೊಳ್ಳಲು ಜನರನ್ನು ಕರೆತಂದವರಿಗೂ ಬಹುಮಾನವುಂಟು. ರಾಜಕೀಯ ಸಮಾವೇಶಕ್ಕೆ ಜನ ಕರೆ ತಂದ ಹಾಗೇ ಲಸಿಕಾ ಮೇಳಕ್ಕೂ ಜನ ಕರೆದುಕೊಂಡು ಬರಬಹುದಾಗಿತ್ತು. ಒಬ್ಬ ವ್ಯಕ್ತಿಯನ್ನು ಕರೆ ತಂದರೆ 5 ರೂಪಾಯಿ ಸಿಗಲಿದೆ. 25ಕ್ಕೂ ಹೆಚ್ಚು ಮಂದಿಯನ್ನು ಕರೆ ತಂದವರು ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆಯಲಿದ್ದಾರೆ.
ಇನ್ನು ಲಸಿಕೆ ಹಾಕಿಸಿಕೊಳ್ಳುವವರ ಪೈಕಿ ಅದೃಷ್ಟವಂತರಿಗೆ ಮೊದಲ ಬಹುಮಾನವಾಗಿ ವಾಷಿಂಗ್ ಮಷೀನ್, ದ್ವೀತಿಯ ಬಹುಮಾನವಾಗಿ ವೆಟ್ ಗ್ರೈಂಡರ್, ತೃತೀಯ ಬಹುಮಾನವಾಗಿ ಮಿಕ್ಸರ್ ಗ್ರೈಂಡರ್, ಚತುರ್ಥ ಬಹುಮಾನವಾಗಿ 25 ಮಂದಿಗೆ ಪ್ರೆಷರ್ ಕುಕ್ಕರ್ ಬಹುಮಾನವಾಗಿ ದೊರೆಯಲಿದೆ. ಇನ್ನಿತರ ಗೃಹೋಪಯೋಗಿ ವಸ್ತುಗಳು 100 ಮಂದಿಗೆ ಸಮಾಧಾನಕರ ಬಹುಮಾನವನ್ನಾಗಿ ಸಿಗಲಿದೆ.
Karur Collector T Prabhu Shankar has made this announcement to draw more people to the mega inoculation camp. He said in a release, “Based on Tamil Nadu government’s orders, mega vaccination camps
Discussion about this post