ನವದೆಹಲಿ : ವಾಹನ ಚಲಾಯಿಸುತ್ತ ಫೋನ್ ನಲ್ಲಿ ಮಾತನಾಡಿದ್ರೆ ಅಪರಾಧ ಅನ್ನುವುದು ವಾಹನ ಸಂಚಾರ ನಿಯಮಗಳಲ್ಲಿದೆ. ಹೀಗಾಗಿ ಪೊಲೀಸರು ಅಡ್ಡ ಹಾಕಿ ದಂಡ ವಿಧಿಸುತ್ತಾರೆ. ಬೆಂಗಳೂರು ಪೊಲೀಸರು ಇತ್ತೀಚೆಗೆ ಒಂದು ಹೆಜ್ಜೆ ಮುಂದೆ ಹೋಗಿ ಇಯರ್ ಫೋನ್, ಬ್ಲೂ ಟುತ್ ಮೂಲಕ ಮಾತನಾಡಿದ್ರು ಅಪರಾಧ ಅನ್ನುವ ಆದೇಶ ಹೊರಡಿಸಿದ್ದರು. ಹಳೆಯ ಕಾನೂನಿಗೆ ಮರುಜೀವ ಕೊಟ್ಟ ಕಾರ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಅದರಲ್ಲೂ APP ಆಧಾರಿತ ಕ್ಯಾಬ್ ಸೇವೆ ನೀಡುವವರು, ಫುಡ್ ಡೆಲಿವರಿ ಮಾಡುವವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಅವರೆಲ್ಲರಿಗೂ ಗುಡ್ ನ್ಯೂಸ್ ಒಂದನ್ನು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿದ್ದಾರೆ. ವಾಹನ ಚಾಲನೆ ಮಾಡುವ ವೇಳೆ ಫೋನ್ ನಲ್ಲಿ ಮಾತನಾಡಿದ್ರೆ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಆದರೆ ಮುಂದಿನ ದಿನಗಳಲ್ಲಿ ಇಂದು ಅಪರಾಧವಾಗಿರೋದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.
ಹಾಗಂತ ಮೊಬೈಲ್ ಫೋನ್ ಅನ್ನು ಕಿವಿಗಿಟ್ಟುಕೊಂಡು ಮಾತನಾಡುವ ಹಾಗಿಲ್ಲ. ಅದು ಅಪರಾಧವಾಗಿಯೇ ಉಳಿಯಲಿದೆ. ಬದಲಾಗಿ ಹ್ಯಾಂಡ್ ಫ್ರೀ ಡಿವೈಸ್ ಬಳಸಿ ಮಾತನಾಡಿದರೆ ಅದು ಅಪರಾಧವಾಗಿರೋದಿಲ್ಲ. ಈ ಸಂಬಂಧ ಅಧಿಕೃತ ಪ್ರಕಟಣ ಕೆಲವೇ ದಿನಗಳಲ್ಲಿ ಹೊರ ಬೀಳುವ ಸಾಧ್ಯತೆಗಳಿದೆ.
The Union Minister of Road Transport and Highways, Nitin Gadkari, has said that talking on the phone while driving will soon be legal in India. However, there will be some rules that must be followed, Gadkari said in the Lok Sabha.
Discussion about this post