ಕ್ರಿಯೇಟಿವಿಟಿ ಅಂದ್ರೆ ಇದಪ್ಪ… ಸುದ್ದಿಯೂ ಆಗಬೇಕು, ನಷ್ಟವೂ ಆಗಬಾರದು (Congress Protest )
ಬೆಂಗಳೂರು : ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆ ಮಾಡಿದ್ದನ್ನು ಖಂಡಿಸಿ ಕೆಪಿಸಿಸಿ ವತಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ (Congress Protest ) ಆಯೋಜಿಸಲಾಗಿತ್ತು. ಸುಮ್ಮನೆ ಪ್ರತಿಭಟನೆ ಮಾಡಿದ್ರೆ ಅದು ಸುದ್ದಿಯಾಗೋದಿಲ್ಲ, ಡೆಲ್ಲಿಗೆ ನಮ್ಮ ಸಾಧನೆ ತಲುಪೋದಿಲ್ಲ ಎಂದು ಅರಿತ ಕಾಂಗ್ರೆಸ್ ನಾಯಕರು ಸಖತ್ ಐಡಿಯಾ ಮಾಡಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಗುಜರಿಯಿಂದ ಕಾರು ತಂದು ಮೊದಲೇ ನಿಲ್ಲಿಸಿಕೊಂಡಿದ್ದ ಕಾರ್ಯಕರ್ತರು ಪ್ರತಿಭಟನೆ (Congress Protest ) ಪ್ರಾರಂಭವಾಗುತ್ತಿದ್ದಂತೆ ಕಾರಿನ ಟಯರ್ ಗೆ ಬೆಂಕಿ ಹಚ್ಚಿದ್ದಾರೆ. ಒಂದು ಕ್ಷಣಕ್ಕೆ ಎಲ್ಲರೂ ಗಾಬರಿಯಾಗಿದ್ದಾರೆ. ಪೊಲೀಸರು ಕೂಡಾ ಗಾಬರಿಯಾಗಿದ್ದಾರೆ. ಸಣ್ಣದಾಗಿ ಪ್ರತಿಭಟನೆ ಮಾಡಿ ಮುಗಿಸುತ್ತೇವೆ ಅಂದವರು ಅನಾಹುತ ಮಾಡಿದ್ರಲ್ಲ ಎಂದು. ತಕ್ಷಣ ಅಗ್ನಿಶಾಮಕದಳದವರನ್ನು ಕರೆಸಿ ಬೆಂಕಿ ನಂದಿಸಿ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಇದು ಗುಜರಿಯಿಂದ ತಂದ ಕಾರು ಎಂದು ಗೊತ್ತಾಗುತ್ತಿದ್ದಂತೆ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ : siri vaibhava ದಿಂದ ಮಹಾವಂಚನೆ : ಬೆಂಗಳೂರಿನಲ್ಲಿ ಮುಳುಗಿದ ಮತ್ತೊಂದು ಸೌಹಾರ್ದ ಸಹಕಾರ ಬ್ಯಾಂಕ್
ಆದರೆ ಪ್ರಚಾರದ ಹುಚ್ಚಿನಿಂದ ಕಾಂಗ್ರೆಸ್ ಕಾರ್ಯಕರ್ತರು ನಿನ್ನೆ ನಡೆಸಿದ್ದು ಮಾತ್ರ ಅಪರಾಧ. ರಸ್ತೆಯಲ್ಲಿ ಬದಿಯಲ್ಲಿ ಕಾರು ಸುಟ್ಟ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಅಷ್ಟು ಮಾತ್ರವಲ್ಲದೆ ಬೆಂಗಳೂರಿನಲ್ಲಿ ಕಾರು ಸುಟ್ರಂತೆ ಅನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿದ್ದಂತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಬೆಂಕಿ ಹಚ್ಚಲು ಪ್ರೇರಪಣೆ ನೀಡಿದಂತಾಗುತ್ತದೆ. ಇನ್ನು ಈ ಘಟನಾ ಸಂಬಂಧ 5 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಒಟ್ಟಿನಲ್ಲಿ ಕಾಂಗ್ರೆಸ್ ನ ಮಿನಿ ನಾಯಕರ ಇಂತಹ ವರ್ತನೆಗಳೇ ಪಕ್ಷವನ್ನು ಸೋಲಿಸಲು ಮುನ್ನುಡಿ ಬರೆಯುತ್ತದೆ ಅನ್ನುವುದು ಸತ್ಯ
ಪ್ರಧಾನಿ ನರೇಂದ್ರ ಮೋದಿಗೆ ಧರ್ಮಸ್ಥಳದ ಪ್ರಸಾದ ಕೊಟ್ಟ ವೀರೇಂದ್ರ ಹೆಗ್ಗಡೆ
ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ.
ನವದೆಹಲಿ : ರಾಜ್ಯಸಭೆಯ ನಾಮನಿರ್ದೇಶನ ಸದಸ್ಯರಾಗಿರುವ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಗುರುವಾರ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಗಮನ ಸೆಳೆದಿದ್ದಾರೆ. ಗುರುವಾರ 11 ಗಂಟೆಗೆ ರಾಜ್ಯಸಭೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಸಮ್ಮುಖದಲ್ಲಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇದಕ್ಕೂ ಮುನ್ನ ಸಂಸತ್ ಭವನಕ್ಕೆ ಆಗಮಿಸಿದ ಹೆಗ್ಗಡೆಯವರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಸ್ವಾಗತಿಸಿದರು. ಈ ವೇಳೆ ಕೇಂದ್ರ ಸಚಿವ ಪಿಯೂಷ್ ಗೋಯಲ್, ಸಚಿವ ಪ್ರಹಾದ್ ಜೋಷಿ ಉಪಸ್ಥಿತರಿದ್ದರು.
ಪ್ರಮಾಣ ವಚನದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ವೀರೇಂದ್ರ ಹೆಗ್ಗಡೆಯವರು, ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಸಾದ ನೀಡಿದರು. ಈ ವೇಳೆ ಪರಸ್ಪರ ಧನ್ಯವಾದ ವಿನಿಮಯ ಕೂಡಾ ನಡೆದಿದೆ.
ಇದಾದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಮೊದಲು ಅರ್ಜಿ ಹಾಕಿದವರು ಪಡೆಯುತ್ತಿದ್ದರು. ಈಗ ಕೆಲಸ ಮಾಡಿದವರನ್ನು ಗುರುತಿಸಲಾಗುತ್ತಿದೆ. ನಾನು ಯಾವ ಪಕ್ಷಕ್ಕೂ ಹೊಂದಿಕೊಳ್ಳುವುದಿಲ್ಲ. ನಾನು ಫಲಾಫೇಕ್ಷೆಯಿಲ್ಲದೆ ಕೆಲಸ ಮಾಡುತ್ತೇನೆ ಅಂದರು. ಇದೇ ವೇಳೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಯಶಸ್ವಿ ಪ್ರಯೋಗಗಳನ್ನು ವಿವಿಧ ರಾಜ್ಯಗಳಿಗೂ ವಿಸ್ತರಿಸುವ ಕನಸನ್ನು ವೀರೇಂದ್ರ ಹೆಗ್ಗೆಡೆ ತೆರೆದಿಟ್ಟರು.
Discussion about this post