ಅರುಣ್ ಸಿಂಗ್ ಕಾರ್ಯ ವೈಖರಿ ಬಗ್ಗೆ ಬಿಜೆಪಿ ವರಿಷ್ಠರು ಅಸಮಾಧಾನ ಹೊಂದಿದ್ದಾರೆ. ಆಡಳಿತ ವಿರೋಧಿ ಅಲೆಯನ್ನು ತಡೆಯಲು ಸಾಧ್ಯವಾಗಿಲ್ಲ ಅನ್ನುವುದಕ್ಕೆ ಇದಕ್ಕೆ ಕಾರಣ. ಹೀಗಾಗಿ ಅಮಿತ್ ಶಾ ಆಪ್ತ ರಾಜ್ಯಕ್ಕೆ ಬರುತ್ತಿದ್ದಾರಂತೆ Karnataka BJP
ಬೆಂಗಳೂರು : ರಾಜ್ಯದಲ್ಲಿ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಂತೆ ಬಿಜೆಪಿಯಲ್ಲಿ ( Karnataka BJP)ಬದಲಾವಣೆ ಪರ್ವ ಪ್ರಾರಂಭಗೊಂಡಿದೆ. ಈಗಾಗಲೇ ಬಿಜೆಪಿ ಸಂಘಟನಾ ಕಾರ್ಯದರ್ಶಿಯಾಗಿದ್ದ ಅರುಣ್ ಕುಮಾರ್ ಅವರನ್ನು ಬದಲಾಯಿಸಲಾಗಿದ್ದು ಆ ಜಾಗಕ್ಕೆ ಯುವ ಮುಖವನ್ನು ಪರಿಚಯಿಸಲಾಗಿದೆ. ರಾಜೇಶ್ ಕುಂತೂರು ಅವರಿಗೆ ಸಂಘಟನಾ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದೆ.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವಧಿ ಮುಕ್ತಾಯಗೊಳ್ಳುತ್ತಿದ್ದು, ಆ ಜಾಗಕ್ಕೆ ಶೋಭಾ ಕರಂದ್ಲಾಜೆಯವರನ್ನು ಕರೆ ತರುವ ಸಾಧ್ಯತೆಗಳಿದೆ. ಈ ಮೂಲಕ ಒಕ್ಕಲಿಗ ಮತಗಳತ್ತ ದೃಷ್ಟಿ ನೆಟ್ಟಿರುವ ಕಾಂಗ್ರೆಸ್ ಅನ್ನು ಕಟ್ಟಿ ಹಾಕುವುದು ಬಿಜೆಪಿ ( Karnataka BJP) ನಾಯಕರ ಪ್ರಯತ್ನ.
ಇದನ್ನೂ ಓದಿ : kannadathi : ಅಮೆರಿಕಾ ಯಾತ್ರೆ ಮುಗಿಸಿದ ಚಿತ್ಕಲಾ : ಶೀಘ್ರದಲ್ಲೇ ರತ್ನಮಾಲಾ ರೀ ಎಂಟ್ರೀ
ಇನ್ನು ಬಿಜೆಪಿ ರಾಜ್ಯ ಉಸ್ತುವಾರಿಯಾಗಿರುವ ಅರುಣ್ ಸಿಂಗ್ ಅವರನ್ನು ಬದಲಾಯಿಸುವ ಮಾತುಗಳು ಕೇಲಿ ಬರುತ್ತಿದೆ. ಅರುಣ್ ಸಿಂಗ್ ಅವರಿಂದ ರಾಜ್ಯದಲ್ಲಿ ಪಕ್ಷ ಬಲವರ್ಧನೆ ಸಾಧ್ಯವಾಗಿಲ್ಲ. ಚುನಾವಮೆ ಹೊಸ್ತಿಲಲ್ಲಿ ಪಕ್ಷ ಸಂಘಟನೆ ಕಾರ್ಯ ಚುರುಕುಪಡೆದಿಲ್ಲವಂತೆ. ಹೀಗಾಗಿ ಅಮಿತ್ ಶಾ ಆಪ್ತ ವಿನೋದ್ ತಾವಡೆ ಅವರನ್ನು ರಾಜ್ಯ ಬಿಜೆಪಿ ಉಸ್ತುವಾರಿಯನ್ನಾಗಿ ನೇಮಿಸುವ ಸಾಧ್ಯತೆಗಳಿದೆ.
ತಾವಡೆ ಮಹಾರಾಷ್ಟ್ರ ಮೂಲದವರಾಗಿದ್ದು, ಶಾಸಕರಿಗೂ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಮಹಾರಾಷ್ಟ್ರ ಬಿಜೆಪಿಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.
ಡಿಯೋ ಬೈಕ್ ಕದಿಯಲೆಂದು ಬೆಂಗಳೂರಿಗೆ ಬರುತ್ತಿದ್ದ ತಮಿಳುನಾಡು ಚೋರರು ಅಂದರ್
kannadathi : ಅಮೆರಿಕಾ ಯಾತ್ರೆ ಮುಗಿಸಿದ ಚಿತ್ಕಲಾ : ಶೀಘ್ರದಲ್ಲೇ ರತ್ನಮಾಲಾ ರೀ ಎಂಟ್ರೀ
ಬೆಂಗಳೂರು : ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಬೈಕ್ ಕಳ್ಳರ ಮತ್ತೊಂದು ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 26 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ನೆಡುತೆಲಿಯನ್, ತಿರುಪತಿ, ಮತ್ತು ವಲ್ಲರಸ್ಸು ಕಳೆದ ಹಲವು ತಿಂಗಳಿನಿಂದ ಬೈಕ್ ಕಳ್ಳತನ ಕೃತ್ಯದಲ್ಲಿ ತೊಡಗಿದ್ದರು. ಇವರ ಟಾರ್ಗೇಟ್ ಏನಿದ್ರೂ ಡಿಯೋ ಬೈಕ್. ಈ ಸಲುವಾಗಿಯೇ ತಮಿಳುನಾಡಿನಲ್ಲಿ ಬಸ್ ಹತ್ತಿ ಬೆಂಗಳೂರಿಗೆ ಬರುತ್ತಿದ್ದರು. ಇದಾದ ಬಳಿಕ ರಾತ್ರಿ ಹೊತ್ತು ರಸ್ತೆಗಳಲ್ಲಿ ಪಾರ್ಕ್ ಮಾಡಿದ್ದ ಡಿಯೋ ಬೈಕ್ ಗಳ ಮೇಲೆ ಕಣ್ಣು ಹಾಕುತ್ತಿದ್ದರು. ಅದು ಡಿಯೋ ಬೈಕ್ ಮಾತ್ರ
ಬಳಿಕ ಒಬ್ಬ ಬೈಕ್ ಹತ್ತಿರ ಬಂದು ಲಾಕ್ ಮುರಿದು ಹೋಗುತ್ತಿದ್ದ. ಈ ವೇಳೆ ಇಬ್ಬರು ಅಪಾಯವಿದೆಯೇ ಅನ್ನುವುದನ್ನು ನೋಡಿಕೊಳ್ಳುತ್ತಿದ್ದರು. ಇದಕ್ಕಾಗಿ ಎರಡು ಹಂತದ ಎಚ್ಚರಿಕೆ ವಹಿಸುತ್ತಿದ್ದರು. ಲಾಕ್ ಮುರಿಯುತ್ತಿದ್ದಂತೆ ಮತ್ತೊಬ್ಬ ಬಂದು ಬೈಕ್ ಸ್ಟಾರ್ಟ್ ಮಾಡಿ ಮೂವರೊಂದಿಗೆ ಪರಾರಿಯಾಗುತ್ತಿದ್ದರು.
ಹೀಗೆ ಮೂರು ಬೈಕ್ ಗಳನ್ನು ಒಂದೇ ರಾತ್ರಿಯಲ್ಲಿ ಕದ್ದಿಯುತ್ತಿದ್ದ ಇವರು ಬಳಿಕ ನೇರವಾಗಿ ತಮಿಳುನಾಡು ಕಡೆ ಪ್ರಯಾಣ ಬೆಳೆಸುತ್ತಿದ್ದರು. ಅಲ್ಲಿ 10 ರಿಂದ 15 ಸಾವಿರಕ್ಕೆ ಬೈಕ್ ಮಾರಾಟ ಮಾಡಿ ಎಂಜಾಯ್ ಮಾಡ್ತಾ ಇದ್ರು. ಕಾಸು ಮುಗಿದ್ರೆ ಮತ್ತೆ ಬೆಂಗಳೂರಿಗೆ ಪಯಣ.
ಹೀಗೆ ಬೆಂಗಳೂರಿನಲ್ಲಿ ಬೈಕ್ ಕದ್ದು ತಮಿಳುನಾಡು ಕಡೆ ತೆರಳುತ್ತಿದ್ದ ವೇಳೆ ಬೊಮ್ಮಹಳ್ಳಿಯ ಬೀಟ್ ಪೊಲೀಸರು ಎದುರಾಗಿದ್ದಾರೆ. ಪೊಲೀಸರನ್ನು ಕಂಡವರೇ ಯು ಟರ್ನ್ ಹೊಡೆದು ಪರಾರಿಯಾಗಲು ಮುಂದಾಗಿದ್ದಾರೆ. ಅನುಮಾನಗೊಂಡ ಪೊಲೀಸರು ಬೆನ್ನತ್ತಿ ಕೊರಳಪಟ್ಟಿ ಹಿಡಿದಾಗ ಅಸಲಿ ಸತ್ಯ ಹೊರ ಬಿದ್ದಿದೆ.
Discussion about this post