ನವದೆಹಲಿ : ವಿಶ್ವದ 7 ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿರುವ ಆಗ್ರಾದ ತಾಜ್ ಮಹಲ್ ಭಾನುವಾರ ನಾಪತ್ತೆಯಾಗಿತ್ತು. ಅರೇ ಇದು ಹೇಗೆ ಸಾಧ್ಯ ಅಂತೀರಾ.
ದಿಲ್ಲಿಯಲ್ಲಿ ವಾಯುಮಾಲಿನ್ಯ ಮಿತಿ ಮೀರಿದ್ದು, ರಾಜಧಾನಿಯ ವಾಯುಮಂಡಲ ಅಪಾಯಕಾರಿ ಮಟ್ಟದಲ್ಲಿ ಕಲುಷಿತಗೊಂಡಿದೆ. ಹೊಗೆ ಮಿಶ್ರಿತ ಹವೆ ದಿಲ್ಲಿಯನ್ನು ಆವರಿಸಿದ್ದು, ಹೆಡ್ ಲೈನ್ ಆನ್ ಮಾಡಿದ್ರು ಎದುರಿಗಿರುವ ವಾಹನಗಳು ಕಾಣಿಸುತ್ತಿಲ್ಲ. ಇದೇ ಪರಿಸ್ಥಿತಿ ತಾಜ್ ಮಹಲ್ ಸಮೀಪವೂ ನಿರ್ಮಾಣಗೊಂಡಿದ್ದು, ಹೊಗೆ ಮಿಶ್ರಿತ ಹವೆಯಿಂದ ತಾಜ್ ಮಹಲ್ ಕೂಡಾ ಕಾಣಿಸದಂತಾಗಿತ್ತು.

ಮತ್ತೊಂದು ಕಡೆ ದಿಲ್ಲಿಯಲ್ಲಿ ಹರಿಯುವ ಯಮುನಾ ನದಿ ಸಂಪೂರ್ಣ ಕಲುಷಿತಗೊಂಡಿದ್ದು, ಕಾಳಿಂದಿ ಕುಂಜ್ ಪ್ರದೇಶದಲ್ಲಿ ಯಮುನಾ ನದಿಯ ಮೇಲೆ ವಿಷಕಾರಿ ನೊರೆ ಕಾಣಿಸಿಕೊಂಡಿದೆ. ಬೆಂಗಳೂರಿನ ಬೆಳ್ಳಂದೂರು ಕೆರೆಯಲ್ಲಿ ಇದೇ ರೀತಿ ನೊರೆ ಕಾಣಿಸಿಕೊಳ್ಳುತ್ತಿರುತ್ತದೆ.

ಯಮುನಾ ನದಿ ನೀರಿನಲ್ಲಿ ಅಮೋನಿಯಂ ಪ್ರಮಾಣ ಹೆಚ್ಚಾಗಿರುವ ಕಾರಣ ಈ ರೀತಿಯ ನೊರೆ ಕಾಣಿಸಿಕೊಂಡಿದೆ ಎಂದು ಪರಿಸರ ವಿಜ್ಞಾನಿಗಳು ಹೇಳಿದ್ದಾರೆ.
Discussion about this post