ನವದೆಹಲಿ : ದೇಶದ ಅತ್ಯುನ್ನತ ಪ್ರಶಸ್ತಿ ವಿತರಣೆ ವಿಚಾರದಲ್ಲಿ ಈ ಹಿಂದೆ ಕೇಳಿ ಬಂದಿದ್ದ ಆರೋಪಗಳನ್ನು ಅರಿತುಕೊಂಡು ದಿಟ್ಟ ಹೆಜ್ಜೆ ಇಟ್ಟವರು ಪ್ರಧಾನಿ ನರೇಂದ್ರ ಮೋದಿ. ಎಳೆಮರೆ ಕಾಯಿಯಂತೆ ಕೆಲಸ ಮಾಡುವ ಪ್ರತಿಭಗೆಳನ್ನು ಗುರುತಿಸಿ ಪದ್ಮವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಪ್ರಶಸ್ತಿ ನೀಡಿದ ಹಿರಿಮೆ ನರೇಂದ್ರ ಮೋದಿಯವರದ್ದು. ಅದರಲ್ಲೂ ಜನರೇ ಗುರುತಿಸಿದ ಪ್ರತಿಭೆಗಳಿಗೆ ಪ್ರಶಸ್ತಿ ದೊರೆತಿರುವುದು ಈ ಪ್ರಶಸ್ತಿಯ ಮೌಲ್ಯವನ್ನು ಮತ್ತಷ್ಟು ಏರುವಂತೆ ಮಾಡಿದೆ.
ಈ ಬಾರಿಯೂ ಪದ್ಮ ಪ್ರಶಸ್ತಿಗೆ ಸೂಕ್ತ ವ್ಯಕ್ತಿಗಳನ್ನು ನಾಮ ನಿರ್ದೇಶನ ಅಥವಾ ಹೆಸರನ್ನು ಸೂಚಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು ದೇಶದಲ್ಲಿ ಹಲವು ಕ್ಷೇತ್ರಗಳಲ್ಲಿ ಪ್ರತಿಭಾವಂತರಿದ್ದಾರೆ. ಅವರು ತಳಮಟ್ಟದಲ್ಲಿ ಅದ್ವಿತೀಯ ಕೆಲಸಗಳ ಮೂಲಕ ಸಾಧನೆಗೈಯುತ್ತಿದ್ದಾರೆ.
ಇಂತಹ ಪ್ರತಿಭಾವಂತರಲ್ಲಿ ಬಹುತೇಕರು ಎಲೆಮರೆ ಕಾಯಿಯಂತಿದ್ದು, ಬೆಳಕಿಗೆ ಬಂದಿರುವುದಿಲ್ಲ. ಹೀಗಾಗಿ ಸ್ಪೂರ್ತಿ ತುಂಬುವ, ಬೇರೆಯವರಿಗೆ ಮಾರ್ಗದರ್ಶನವಾಗುವ ಜನರ ಬಗ್ಗೆ ನಿಮಗೆ ತಿಳಿದಿದ್ದರೆ ಅವರನ್ನು ನಾಮನಿರ್ದೇಶನ ಮಾಡಿ ಎಂದು ಮನವಿ ಮಾಡಿದ್ದಾರೆ. #PeoplesPadma ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿಭಾವಂತರ ಹೆಸರುಗಳನ್ನು ನಾಮನಿರ್ದೇಶನ ಮಾಡಬೇಕಾಗಿದ್ದು, ನಾಮನಿರ್ದೇಶನ ಸೆಪ್ಟೆಂಬರ್ 15ರವರೆಗೆ ತೆರೆದಿರುತ್ತದೆ. 1954 ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ.
Discussion about this post