ಬೆಂಗಳೂರು : ವುಹಾನ್ ವೈರಸ್ ಈಗಾಗಲೇ ಜಗತ್ತನ್ನು ಕಂಗಾಲು ಮಾಡಿದೆ. ಚೀನಾದಿಂದ ಪ್ರಾರಂಭವಾದ ಕೊರೋನಾ ವೈರಸ್ ಮಣಿಸಲು ಲಸಿಕೆ ಸಂಶೋಧನೆಯಾಯ್ತು, ಜನಜೀವನ ಸಹಜ ಸ್ಥಿತಿಗೆ ಮರಳಲಿದೆ ಅನ್ನುವ ಹೊತ್ತಿನಲ್ಲಿ, ರೂಪಾಂತರಿ ವೈರಸ್ ಗಳ ಕಾಟ ಪ್ರಾರಂಭವಾಗಿದೆ. ಡೆಲ್ಟಾ, ಡೆಲ್ಟಾ ಪ್ಲಸ್ ಆಲ್ಫಾ ಹೀಗೆ ಕೊರೋನಾ ರೂಪಾಂತರಿಗಳಿಂದಾಗಿ ಅನೇಕ ರಾಷ್ಟ್ರಗಳು ಕಂಗಲಾಗಿವೆ.
ಈ ನಡುವೆ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ IISCಯಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಲಸಿಕೆ ಡೆಲ್ಟಾ ಸೇರಿದಂತೆ ಎಲ್ಲಾ ಕೊರೋನಾ ರೂಪಾಂತರಿಗಳ ವಿರುದ್ಧ ಕೆಲಸ ಮಾಡಲಿದೆ ಅನ್ನುವ ಶುಭ ಸುದ್ದಿಯೊಂದು ಬಂದಿದೆ.
ಆಸ್ಟ್ರೇಲಿಯಾ ತಜ್ಞರು ನಡೆಸಿದ ಸಂಶೋಧನೆಯಲ್ಲಿ ಇದು ಸಾಬೀತಾಗಿದ್ದು, ಆಸ್ಟ್ರೇಲಿಯಾದ ಸಂಶೋಧಕರು ನಡೆಸಿ ಅಧ್ಯಯನದಲ್ಲಿ ಆಲ್ಫಾ, ಬೀಟಾ, ಗಾಮಾ, ಹಾಗೂ ಡೆಲ್ಟಾ ವೈರಸ್ ವಿರುದ್ಧ ಪ್ರಬಲವಾದ ಪ್ರತಿಕಾಯ ಸೃಷ್ಟಿಯಿರುವುದು ಗೊತ್ತಾಗಿದೆ. ಹೀಗಾಗಿಯೇ ಬೆಂಗಳೂರಿನಲ್ಲಿ ಅಭಿವೃದ್ಧಿಯಾಗಿರುವ ಲಸಿಕೆ ಜಗತ್ತನ್ನು ಸಂಕಷ್ಟದಿಂದ ಪಾರು ಮಾಡಲಿದೆ ಎನ್ನಲಾಗಿದೆ.
IISC ಮಿನ್ ವ್ಯಾಕ್ಸ್ ಎಂಬ ಬಯೋಟೆಕ್ ಸಂಸ್ಥೆ ಜೊತೆಗೂಡಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಈಗಾಗಲೇ ಇಲಿಯ ಮೇಲೆ ಪ್ರಯೋಗಿಸಿ ಯಶಸ್ಸು ಪಡೆಯಲಾಗಿದೆ.
ಅಂದ ಹಾಗೇ ಈ ಲಸಿಕೆಯನ್ನು ಬೇರೆಲ್ಲಾ ಲಸಿಕೆಗಳಂತೆ ಫ್ರಿಜ್ ನಲ್ಲಿ ಇಡುವ ಅಗತ್ಯವಿಲ್ಲ, 47 ಡಿಗ್ರಿ ಉಷ್ಣಾಂಶದಲ್ಲೂ ಇದನ್ನು ಇಟ್ರೆ ಇದು ಕೆಡುವುದಿಲ್ಲ. ಇನ್ನು 100 ಡಿಗ್ರಿ ಉಷ್ಣತೆಯಲ್ಲಿ 90 ನಿಮಿಷಗಳ ಕಾಲ ಈ ಲಸಿಕೆ ಸುರಕ್ಷಿತವಾಗಿರುತ್ತದೆ. ಹೀಗಾಗಿಯೇ ಇದನ್ನು ಬೆಚ್ಚಗಿನ ಲಸಿಕೆ ಎಂದು ಕರೆಯಲಾಗಿದೆ.
Discussion about this post