ನೈರೋಬಿ : ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್-19 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತದ ಅಥ್ಲೀಟ್ ಅಮಿತ್ ಖತ್ರಿ ಪುರುಷರ 10 ಕಿ.ಮೀ. ವಾಕ್ ರೇಸ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಆಗಸ್ಟ್ 21 ರಂದು ನಡೆದ ಸ್ಪರ್ಧೆಯಲ್ಲಿ ಭಾರತಕ್ಕೆ ಎರಡನೇ ಪದಕ ದೊರೆತಿದೆ. ಈ ಹಿಂದೆ 20 ವರ್ಷದ ಒಳಗಿನವರ ವಿಶ್ವ ಅಥ್ಲೆಟಿಕ್ಸ್ ನಲ್ಲಿ 4x400m ಮಿಶ್ರ ರಿಲೇ ತಂಡ ಕಂಚು ಗೆದ್ದಿತ್ತು.
ಪುರುಷರ 10 ಕಿ.ಮೀ. ವಾಕ್ ರೇಸ್ ಸ್ಪರ್ಧೆಯಲ್ಲಿ ಕೀನ್ಯಾದ ಹೆರಿಸ್ಟೋನ್ ವನ್ಯೋನಿ ಚಿನ್ನದ ಪದಕ ಪಡೆದರೆ, ಸ್ಪೇನ್ ನ ಪೌಲ್ ಮೆಕ್ ಗ್ರಾಥ್ ಕಂಚಿನ ಪದಕ ಗೆದ್ದರು. ಕೊನೆಯ ಎರಡು ಸುತ್ತು ಬಾಕಿ ಇರುವವರೆಗೂ ಮುಂಚೂಣಿಯಲ್ಲೇ ಇದ್ದ ಖತ್ರಿ ಅವರನ್ನು ಕೊನೆಯ ಹಂತದಲ್ಲಿ ಹೆರಿಸ್ಟೋನ್ ಹಿಂದಿಕ್ಕಿದ್ದರು.
ಭಾರತದ ಖತ್ರಿ 42:17:94 ನಿಮಿಷದಲ್ಲಿ ತಮ್ಮ ಆಟವನ್ನು ಮುಗಿಸಿದ್ದು, ಚಿನ್ನದ ಪದಕ ವಿಜೇತ ಹೆರಿಸ್ಟೋನ್ 42:10:84 ನಿಮಿಷದಲ್ಲಿ ಆಟ ಮುಗಿಸಿ ಚಿನ್ನ ಪಡೆದರು. ಕಂಚು ಗೆದ್ದ ಪೌಲ್ ಮೆಕ್ ಗ್ರಾಥ್ ಒಟ್ಟು ದೂರ ಕ್ರಮಿಸಲು 42:26:11 ನಿಮಿಷ ತೆಗೆದುಕೊಂಡರು.
Discussion about this post