ಸ್ವಾಮೀಜಿಗಳು ಹೀಗೆ ಖಾವಿ ಕಳಚುತ್ತಿರುವುದು ಮೊದಲೇನಲ್ಲ. ಆದರೆ ಭಕ್ತರ ಮುಂದೆ Soluru swamiji ಸನ್ಯಾಸತ್ವ ತ್ಯಜಿಸಿರುತ್ತಿದ್ರೆ ಚೆನ್ನಾಗಿರೋದು
ಮಾಗಡಿ : ಸೋಲೂರಿನ ಗದ್ದುಗೆ ಮಠದ ಶಿವಮಹಾಂತ ಸ್ವಾಮೀಜಿ ಅಲಿಯಾಸ್ ಹರೀಶ್ ಖಾವಿ ಕಳಚಿಟ್ಟು ರಾತ್ರೋ ರಾತ್ರಿ ಪರಾರಿಯಾಗಿದ್ದಾರೆ. ( Soluru swamiji) ಮಾಹಿತಿಗಳ ಪ್ರಕಾರ ಪ್ರೀತಿಸಿದ ಮಹಿಳೆಯ ಜೊತೆಗೆ ಅವರು ಓಡಿ ಹೋಗಿದ್ದಾರೆ ಅನ್ನಲಾಗಿದೆ. ಈಗಾಗಲೇ ಈ ಸಂಬಂಧ ಸ್ಥಳೀಯ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ಮಹಿಳೆಯ ಪತಿ ದೂರು ದಾಖಲಿಸಿದ್ದಾಪೆ.
ಮಠ ಬಿಟ್ಟು ಹೋಗುವ ಮುನ್ನ ಸ್ವಾಮೀಜಿ ಪತ್ರವೊಂದನ್ನು ಅವರು ಬರೆದಿದ್ದು, ಅದರಲ್ಲಿ ನಾನು ನನ್ನ ಸ್ವಾಮೀಜಿ ಜೀವನವನ್ನು ತ್ಯಜಿಸುತ್ತಿದ್ದೇನೆ. ನನ್ನ ಜೀವನದಲ್ಲಿ ನೆಮ್ಮದಿ ಇಲ್ಲದಂತಾಗಿದೆ. ಈ ಕಾರಣದಿಂದ ನಾನು ಇದನ್ನೆಲ್ಲಾ ಬಿಟ್ಟು ದೂರ ಹೋಗುತ್ತಿದ್ದೇನೆ. ನನಗೆ ಈ ಜೀವನ ಜುಗುಪ್ಸೆಯನ್ನು ಉಂಟುಮಾಡಿದೆ. ಈ ಕಾರಣ ನಿಮಗೆಲ್ಲಾ ಗೊತ್ತಿದೆ ಎಂದು ಭಾವಿಸುತ್ತೇನೆ.
ಇದನ್ನೂ ಓದಿ : Amazon pressure cooker : ಕೆಟ್ಟು ಹೋದ ಕುಕ್ಕರ್ ಮಾರಿದ ಅಮೆಜಾನ್ 1 ಲಕ್ಷ ರೂಪಾಯಿ ದಂಡ
ದಯವಿಟ್ಟು ನನ್ನ ಯಾರೂ ಹುಡುಕುವ ಪ್ರಯತ್ನ ಮಾಡಬೇಡಿ. ನಾನು ಕಾವಿ ಬಟ್ಟೆಯನ್ನು ಬಿಚ್ಚಿದ ಮೇಲೆ ಮತ್ತೆ ಎಂದಿಗೂ ತೊಡುವುದಿಲ್ಲ. ಹಾಗೇನಾದರೂ ನನ್ನನ್ನು ಹುಡುಕುವ ಪ್ರಯತ್ನ ಮಾಡಿದರೆ ನನ್ನ ಹೆಣವನ್ನು ನೀವು ನೋಡುತ್ತೀರಾ. ನಾನು ಕೇಳಿಕೊಳ್ಳುವುದು ಏನೆಂದರೆ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಿ. ಎಲ್ಲೋ ಹೇಗೋ ನೆಮ್ಮದಿಯಾಗಿ ಇರುತ್ತೇನೆ. ಆದರೆ ನನ್ನನ್ನು ಮತ್ತೆ ಈ ಜೀವನಕ್ಕೆ ತರಬೇಡಿ. ತಂದಿದ್ದೇ ಆದರೆ ನನ್ನ ಸಾವನ್ನು ನೋಡಬೇಕಾಗುತ್ತದೆ. ನನ್ನನ್ನು ಬದುಕಲು ಬಿಡಿ ಎಂದು ಅಂಗಲಾಚಿ ಕೇಳಿಕೊಳ್ಳುತ್ತೇನೆ. ದಯವಿಟ್ಟು ನನ್ನನ್ನು ಎಲ್ಲರೂ ಕ್ಷಮಿಸಿ, ನನ್ನನ್ನು ಎಲ್ಲರೂ ಮರೆತು ಬಿಡಿ. ಎಂದು ಬರೆದಿದ್ದಾರೆ.
ಕಂಬಾಳು ಮಠದಲ್ಲಿರುವಾಗ ಮೋಟಗೊಂಡನಹಳ್ಳಿ ಮಹಿಳೆಯೊಬ್ಬರ ಜೊತೆ ಸ್ವಾಮೀಜಿಗೆ ಪ್ರೇಮಾಂಕುರವಾಗಿತ್ತು ಅನ್ನಲಾಗಿದೆ. ಅವರ ಜೊತೆಯೇ ಸ್ವಾಮೀಜಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಮಹಿಳೆಗೆ ಒಂದೂವರೆ ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.
Discussion about this post