ತಂದೆ, ಸಹೋದರಿ ಇಬ್ಬರೂ ದೊಡ್ಡ ಕಲಾವಿದರು, ಆದರೆ ಡ್ರಗ್ಸ್ ದಾಸನಾದ ಕರ್ಮಕ್ಕೆ ಸಿದ್ದಾಂತ್ ಕಪೂರ್ ಹಲಸೂರು ಪೊಲೀಸರ ವಶದಲ್ಲಿದ್ದಾನೆ.
ಬೆಂಗಳೂರು : ರಾಜಧಾನಿಯ ದಿ ಪಾರ್ಕ್ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಡ್ರಗ್ಸ್ ಪಾರ್ಟಿ ನಡೆಸುತ್ತಿದ್ದ ಆರೋಪದಡಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ದಾಂತ್ ಕಪೂರ್ ನನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದೊಡ್ಡ ಮಟ್ಟದ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಅನ್ನುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ್ದು, ರಾತ್ರಿ 12 ಗಂಟೆ ಸುಮಾರಿಗೆ ಇನ್ಸ್ ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ 25ಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದ್ದಾರೆ.
ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ಇವೆರೆಲ್ಲರ ಮೆಡಿಕಲ್ ಟೆಸ್ಟ್ ನಡೆಸುವ ಸಲುವಾಗಿ ಟಿಟಿ ವಾಹನಗಳನ್ನು ಪೊಲೀಸರು ತರಿಸಿಕೊಂಡಿದ್ದರು. ಇದೀಗ ಪಾರ್ಟಿಯಲ್ಲಿ 5 ಜನ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದ್ದು, ಇವರ ವಿರುದ್ಧ NDPS ACT ಅಡಿಯಲ್ಲಿ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಪಾರ್ಟಿಯಲ್ಲಿ ನಟಿ ಶ್ರದ್ಧಾ ಕಪೂರ್ ಸಹೋದರ ನಟ ಸಿದ್ದಾಂತ್ ಕಪೂರ್ ಕೂಡಾ ಭಾಗಿಯಾಗಿದ್ದು, ಈತ ಕೂಡ ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ. ಇದೀಗ ಸಿದ್ದಾಂತ್ ಹಲಸೂರು ಪೊಲೀಸರ ವಶದಲ್ಲಿದ್ದಾನೆ.
Discussion about this post