ಕನ್ನಡ ಕಿರುತೆರೆ ಲೋಕದಲ್ಲಿ ನಿಧಾನವಾಗಿ ಬಿಗ್ ಬಾಸ್ ಜ್ವರ ಆವರಿಸಲಾರಂಭಿಸಿದೆ. ಕನ್ನಡಿಗರಿಗೆ 7ನೇ ಸೀಸನ್ ಇಷ್ಟವಾಗುತ್ತದೋ ಬಿಡುತ್ತದೋ ಗೊತ್ತಿಲ್ಲ. ವಾಹಿನಿ ಮುಖ್ಯಸ್ಥರ ಪಾಲಿಗೆ ಇದು ಡೂ ಆರ್ ಡೈ.
ಈಗಾಗಲೇ ಝೀ ಕನ್ನಡ ವಾಹಿನಿ TRP ಲೋಕದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಕಲರ್ಸ್ ವಾಹಿನಿಯನ್ನು ಹಿಂದಕ್ಕೆ ತಳ್ಳಿ ಮುನ್ನುಗ್ಗುತ್ತಿದೆ. ಹೀಗಾಗಿ TRP ಏರಿಸಿಕೊಳ್ಳಬೇಕಾದ ಒತ್ತಡದಲ್ಲಿ ಕಲರ್ಸ್ ವಾಹಿನಿ ಮುಖ್ಯಸ್ಥರಿದ್ದಾರೆ.
ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ಕಾಮನ್ ಮ್ಯಾನ್ ಗೆ ನೋ ಎಂಟ್ರಿ ಎಂದು ಹೇಳಲಾಗಿದೆ. ಜೊತೆಗೆ ಈ ಬಾರಿ ಬಿಗ್ ಬಾಸ್ ಯಾರು ಹೋಗ್ತಾರೆ ಅನ್ನುವ ಕುರಿತಂತೆ ಕುತೂಹಲ ಹುಟ್ಟಿಸುವ ಸಲುವಾಗಿ ಬಿಗ್ ಬಾಸ್ ಟೀಂ ಕಡೆಯಿಂದಲೇ ಸಂಭಾವ್ಯರ ಹೆಸರುಗಳನ್ನು ತೇಲಿ ಬಿಡಲಾಗುತ್ತಿದೆ.
ಈ ಸಾಲಿನಲ್ಲಿ ಕೇಳಿ ಬಂದಿದ್ದು, ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್ ಕೆ ಆರ್ ಪೇಟೆ. ಶಿವರಾಜ್ ಮಹಾಮನೆಗೆ ಕಾಲಿಟ್ರೆ ಕಾಮಿಡಿಗೆ ಬರವಿಲ್ಲ ಎಂದು ಜನ ಅಂದುಕೊಂಡಿದ್ದರು.
ಆದರೆ ಈ ಬಗ್ಗೆ ಪತ್ರಿಕೆಯೊಂದಕ್ಕೆ ಮಾತನಾಡಿರುವ ಶಿವರಾಜ್ ” ಬಿಗ್ಬಾಸ್ನಿಂದ ಆಫರ್ ಬಂದಿದ್ದು ನಿಜ. ಎಲ್ಲರಂತೆ ನನಗೂ ಕೂಡ ಬಿಗ್ಬಾಸ್ ಹೋಗೋದಕ್ಕೆ ಇಷ್ಟವಿದೆ. ಆದರೆ ಈಗ ನಾನಿರುವ ಪರಸ್ಥಿತಿಯಲ್ಲಿ ಮೂರು ತಿಂಗಳು ಟೈಮ್ ಕೊಡೋದು ಕಷ್ಟವಾಗಿದೆ. ನವೆಂಬರ್ ಅಂತ್ಯದವರೆಗೂ ಒಂದಷ್ಟು ಡಬ್ಬಿಂಗ್ ಕೆಲಸ, ಆಮೇಲೆ ಶುರುವಾಗುವ ಮೂರು ಸಿನಿಮಾಗಳು ಸಿನಿಮಾ ಕೆಲಸ ಒಪ್ಪಿಕೊಂಡಾಗ ಬಿಗ್ಬಾಸ್ ಹೋಗೋದು ಹೇಗೆ? ಅಂದಿದ್ದಾರೆ.
ರಾಬರ್ಟ್, ಭಜರಂಗಿ-2, ಬ್ರಹ್ಮಚಾರಿ, ಜೇಕಬ್ ವರ್ಗೀಸ್ ಅವರ ರಿಷಿ ಸಿನಿಮಾದ ಡಬ್ಬಿಂಗ್ ಕೆಲಸವನ್ನು ಶಿವರಾಜ್ ಮುಗಿಸಬೇಕಾಗಿದೆ. ಇನ್ನು ಗುರುನಂದನ್ ಅವರ ಹೆಸರಿಡದ ಚಿತ್ರದಲ್ಲಿ ನಟಿಸುತ್ತಿರುವ ಶಿವರಾಜ್, ನವೆಂಬರ್ನಿಂದ ‘ಮದಗಜ’ ಟೀಂ ಸೇರಿಕೊಳ್ಳುವುದು ಫಿಕ್ಸ್ ಆಗಿದೆ.
ಕೆಲವು ರಿಮೇಕ್ ಸಿನಿಮಾಗಳಲ್ಲಿ ಲೀಡ್ ಕಾಮಿಡಿ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವ ಶಿವರಾಜ್ ಇಷ್ಟೆಲ್ಲ ಕೆಲಸಗಳ ನಡುವೆ ‘ಬಿಗ್ಬಾಸ್’ ಹೋಗುವುದು ಶಿವರಾಜ್ ಅವರಿಗೆ ಕಷ್ಟವಾಗುತ್ತಿದೆ.
Discussion about this post