ವೀರ ಸಾವರ್ಕರ್ ಭಾವಚಿತ್ರದ ( Shivamogga Savarkar Poster Row) ನೆಪವೊಡ್ಡಿ ಶಾಂತಿ ಕದಡಲು ಸಂಘಟನೆಯೊಂದು ಪ್ರಯತ್ನ ಮುಂದುವರಿಸಿದೆ
ಶಿವಮೊಗ್ಗ : ನಗರದಲ್ಲಿ ವೀರ ಸಾವರ್ಕರ್ ಭಾವಚಿತ್ರ ತೆರವು ಹಿನ್ನೆಲೆಯಲ್ಲಿ ( Shivamogga Savarkar Poster Row) ನಡೆದ ಗುಂಪು ಘರ್ಷಣೆಯಲ್ಲಿ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ನಡೆದಿದೆ. ಗಾಯಗೊಂಡವನ್ನು ಪ್ರೇಮ್ ಸಿಂಗ್( 22) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಗಾಯಗೊಂಡಿರುವ ಪ್ರೇಮ್ ಸಿಂಗ್, ಉಪ್ಪಾರ ಕೇರಿ ನಿವಾಸಿ ಎಂದು ಗೊತ್ತಾಗಿದೆ. ದುಷ್ಕರ್ಮಿಗಳ ಗುಂಪೊಂದು ಪ್ರೇಮ್ ಸಿಂಗ್ ಮೇಲೆ ಹಲ್ಲೆ ನಡೆಸಿ ಬಳಿಕ ಚಾಕುವಿನಿಂದ ಇರಿದಿತ್ತು, ಮನೆಯ ಮುಂದೆ ನಿಂತಿದ್ದಾಗ ದುಷ್ಕರ್ಮಿಗಳು ದಾಳಿ ಮಾಡಿ ಚಾಕುವಿನಿಂದ ಇರಿದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ : kiran yogeshwar : ಬಿಗ್ ಬಾಸ್ ಮನೆಯಿಂದ ಹೊರ ಬಂದ ಕಿರಣ್ ಯೋಗೇಶ್ವರ್
ಇದಕ್ಕೂ ಮುನ್ನ ವೀರ ಸಾವರ್ಕರ್ ಫೋಟೋ ಇಡೋ ವಿಚಾರದಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಸಂಭವಿಸಿತ್ತು. ನಿನ್ನೆಯಷ್ಟೇ ಮಾಲ್ ಒಂದರಲ್ಲಿ ಸಾವರ್ಕರ್ ಫೋಟೋ ಇಟ್ಟಿರುವ ಬಗ್ಗೆ ತಗಾದೆ ತೆಗೆಯಲಾಗಿತ್ತು. ಇದೀಗ ಶಿವಮೊಗ್ಗ ನಗರದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲೇ ಸಾವರ್ಕರ್ ಫೋಟೋ ಇಡಲಾಗಿದೆ. ಅಂದ ಮೇಲೆ ಬೇರೆ ಕಡೆ ಫೋಟೋ ಇಡುವುದಕ್ಕೆ ಆದ್ಯಾಕೆ ರಗಳೆ ಅನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆ.
Discussion about this post